ಸಂಘಗಳಲ್ಲಿ ಉಳಿತಾಯ ಮಾಡುವುದರ ಜತೆಗೆ ಉದ್ಯಮಶೀಲರಾಗಿ ಹೊರಹೊಮ್ಮಿ: ಡಿಸಿ

Source: so news | Published on 7th November 2019, 10:24 PM | State News | NewsVoir |

ಮಂಡ್ಯ: ಸ್ವ ಸಹಾಯ ಸಂಘಗಳಲ್ಲಿ ಉಳಿತಾಯ ಮಾಡುವುದರ ಜತೆಗೆ ಉದ್ಯಮಶೀಲರಾಗಿ ಹೊರಹೊಮ್ಮಬೇಕು ಎಂಬ ಸದುದ್ದೇಶದಿಂದ ಸ್ವಸಹಾಯ ಸಂಘಗಳನ್ನು ನಿರ್ಮಾಣ ಮಾಡಲಾಗಿದೆ. ಸಂಘಗಳಲ್ಲಿ ಹೂಡಿಕೆ ಮಾಡಿದ ಹಣವನ್ನು ಒಂದು ಕಡೆ ಬಂಡವಾಳ ಹೂಡಿ, ಆ ಬಂಡವಾಳದಿಂದ ಹೆಚ್ಚಿನ ಲಾಭವನ್ನು ಸಂಪಾದನೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಲು ಸ್ವಸಹಾಯ ಸಂಘಗಳು ಸಹಕಾರಿಯಾಗಿವೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ನಗರದ ಕ್ಯಾತುಂಗರೆಯ ವಿಕಸನ ತರಬೇತಿ ಕೇಂದ್ರದಲ್ಲಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಹಾಗೂ ನಬಾರ್ಡ್ ಸಹಯೋಗದಲ್ಲಿ ನಡೆದ ಸ್ವ ಸಹಾಯ ಸಂಘದ ಪ್ರತಿನಿಧಿಗಳಿಗೆ ಒಂದು ದಿನದ ಕಾರ್ಯಗರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಗಳ ಪ್ರತಿನಿಧಿಗಳು ಈ ತರಬೇತಿಯ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ಅವಕಾಶವಿದೆ. ಸಂಘಗಳಲ್ಲಿ ಉಳಿತಾಯ ಮಾಡಲು ಹೆಚ್ಚಿನ ಅವಕಾಶವಿದ್ದು, ಅಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಿರುವ ಸ್ವ ಸಹಾಯ ಸಂಘಗÀಳನ್ನು ನಾವು ನೋಡಿದ್ದೇವೆ ಎಂದರು.
ಮಹಾರಾಷ್ಟ್ರದ ನಾಗ್‍ಪುರ ಎಂಬ ಪ್ರದೇಶದಲ್ಲಿ ಸ್ವ ಸಹಾಯ ಸಂಘಗಳು ನಾಗ್‍ಪುರ್ ಕಿತ್ತಳೆಯನ್ನು ಬಳಸಿಕೊಂಡು ಜ್ಯೂಸ್ ಅನ್ನು ತಯಾರಿಸಿ, ಅಂದಾಜು 3 ಕೋಟಿಗೂ ಹೆಚ್ಚು ವ್ಯವಹಾರ ಮಾಡುತ್ತಿದ್ದಾರೆ. ಅದೇ ರೀತಿ ಮಡಿಕೇರಿ, ದಕ್ಷಿಣ ಕನ್ನಡ ಅಥವಾ ಮಂಡ್ಯದಲ್ಲೇ ತಾವು ದಿನ ನಿತ್ಯ ಮಾಡುವಂತಹ ಚಟುವಟಿಕೆಗಳನ್ನು ವ್ಯವಹಾರ ಮಾದರಿಯಾಗಿ ಯಾವ ರೀತಿ ಉಪಯೋಗಿಸಕೊಳ್ಳಬೇಕು ಎಂದು ಆಲೋಚನೆ ಮಾಡಿ, ಉತ್ತಮ ಮಾರುಕಟ್ಟೆ ನಿರ್ಮಾಣ ಮಾಡಿಕೊಂಡು ಆರ್ಥಿಕವಾಗಿ ಸಾಕಷ್ಟು ಪ್ರಬಲರಾಗಿದ್ದಾರೆ. ಕಾರವಾರ ಮತ್ತು ಶಿರಸಿಯಲ್ಲಿ ಬೆಳೆದಂತಹ ಸಾಂಬಾರಾ ಪದಾರ್ಥಗಳನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿರುವ ಅಂಶವನ್ನು ಗಮನಿಸಿದ್ದೇವೆ. ಅದರ ಜತೆಗೆ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗೆ ಸಂಬಂಧಿಸಿದ ಸ್ವಸಹಾಯ ಸಂಘಗಳು ಕೂಡ ನಾನಾ ರೀತಿಯ ಚಟುವಟಿಕೆಗಳನ್ನು ಆರ್ಥಿಕ ಪ್ರಗತಿಗೆ ಪೂರಕವಾಗಿ ಉಪಯೋಗಿಸಿಕೊಂಡಿವೆ ಎಂದು ತಿಳಿಸಿದರು
ಮಂಡ್ಯ ಜಿಲ್ಲೆಯಲ್ಲಿ ನಾನು ಕಂಡಿರುವ ಹಾಗೆ ಉಳಿತಾಯದ ಪ್ರಮಾಣ ಕಡಿಮೆ ಇದೆ. ಬೇರೆ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯನ್ನು ತುಲನಾತ್ಮಕವಾಗಿ ನೋಡಿದಾಗ ಪ್ರತಿ ಕುಟುಂಬದಲ್ಲಿ ಉಳಿತಾಯದ ಪ್ರಮಾಣ ಕಡಿಮೆ ಇದು,್ದ ಖರ್ಚು ಜಾಸ್ತಿ ಇದೆ. ಬಹುಶಃ ಈ ಒಂದು ಕಾರಣದಿಂದಲೇ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗಿದೆ ಎಂದು ವೈಜ್ಞಾನಿಕ ಕಾರಣವನ್ನು ವಿಶ್ಲೇಷಕರು ತಿಳಿಸಿದ್ದಾರೆ. ಆದ್ದರಿಂದ ಸ್ವ ಸಹಾಯ ಗುಂಪುಗಳ ಮೂಲಕ ಹೆಚ್ಚಾಗಿ ಉಳಿತಾಯ ಮಾಡಲು ಪ್ರಯತ್ನ ಮಾಡಬೇಕು. ಉಳಿತಾಯ ಮಾಡಿದ ನಂತರ ಯಾವ ರೀತಿ ಹೂಡಿಕೆ ಮಾಡಬೇಕು ಹಾಗೂ ಯಾವರೀತಿಯ ಚಟುವಟಿಕೆಗಳನ್ನು ತೊಡಗಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಾಗ ನಿಮ್ಮ ಜೀವನದಲ್ಲಿ ನೀವು ಆರ್ಥಿಕವಾಗಿ ಸಶಕ್ತರಾಗಬಹುದು ಎಂದರು.
ಕಂಪನಿಗಳೂ ಪ್ರತಿ ವರ್ಷ ತಮ್ಮ ಸಾಧಕ ಮತ್ತು ಬಾಧಕಗಳನ್ನು ಪರಿಶೀಸಿಲಿಸಿ ಕೊಂಡು ಅಭಿವೃದ್ಧಿಯ ಕಡೆ ಹೋಗುತ್ತಾರೆ. ಅದೇ ರೀತಿ ಸ್ವ ಸಹಾಯ ಗುಂಪುಗಳು ಕೂಡ ಒಂದು ವರ್ಷದ ಆರ್ಥಿಕ ಚಟುವಟಿಕೆಗಳನ್ನು ಗಮನಿಸಿ, ಮುಂದಿನ ವರ್ಷಕ್ಕೆ ಉತ್ತಮವಾದ ಕ್ರಿಯಾಶೀಲ ಯೋಜನೆಗಳನ್ನು ಸಿದ್ದಪಡಿಕೊಂಡು, ಅಭಿವೃದ್ಧಿಯ ಪಥದಲ್ಲಿ ಸಾಗಿರಿ. ಆಗ ಮಾತ್ರ ಇಂತಹ ಚಟುವಟಿಕೆಗಳು ವಿಸ್ತರಿಸುತ್ತವೆ. ಹಾಗೂ ಉತ್ತಮವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಯಾರು ಮಾಹಿತಿ ಮತ್ತು ಕೌಶಲ್ಯವನ್ನು ಪಡೆದು ಕೊಂಡು ಸ್ವಾವಲಂಬಿಗಳಾಗಿರುತ್ತಾರೋ ಅಂತಹವರು ಮಂಡ್ಯವಲ್ಲದೇ, ಇಡೀ ವಿಶ್ವದಲ್ಲೇ ತನ್ನ ಸ್ವ ಶಕ್ತಿಯಿಂದ ನಿಂತುಕೊಳ್ಳಲು ಸಾಕಷ್ಟು ಅವಕಾಶಗಳಿದ್ದು, ಅಂತಹವರಿಗೆ ಪ್ರೋತ್ಸಾಹ ಕೂಡ ಸಿಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲ ಸ್ವ ಸಹಾಯ ಸಂಘಗಳು ಉತ್ತಮವಾದ ಕೌಶಲ್ಯವನ್ನು ಪಡೆದುಕೊಂಡು, ಉತ್ತಮವಾದ ವ್ಯವಹಾರ ಮಾದರಿಯನ್ನು ಅಳವಡಿಕೊಳ್ಳಬೇಕು. ಮಂಡ್ಯ ಜಿಲ್ಲೆಯಲ್ಲಿ ಅಂದಾಜು 1200ರಷ್ಟು ಸಂಘಗಳು ಇದ್ದು, ಇವುಗಳನ್ನು 10 ಸಾವಿರಕ್ಕು ಹೆಚ್ಚು ಸಂಘಗಳನ್ನಾಗಿ ನಿರ್ಮಾಣಮಾಡುವಂತಹ ಮಹತ್ತರವಾದ ಯೋಜನೆಯನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯ ಮಹೇಶ್ ಚಂದ್ರಗುರು ಅವರು ವಹಿಸಿದ್ದರು, ನಬಾರ್ಡ್‍ನ ಸುಧೀರ್, ಮಂಡ್ಯ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ವ್ಯವಸ್ಥಾಪಕರಾದ ಕದರಪ್ಪ ಹಾಗೂ ಬೆಂಗಳೂರಿನ ಸನ್ಮಿತ್ರ ಸೋಷಿಯೋಕೇರ್‍ನ ನಿರ್ದೇಶಕರಾದ ಡಾ.ಅವಿನಾಶ್ ಉಪಸ್ಥಿತರಿದ್ದರು.

Read These Next

ಧಾರವಾಡ: ದ್ವಿತೀಯ ಪಿಯು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದಂತೆ ನಿಗಾವಹಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ : ಮಾರ್ಚ್ 1 ರಿಂದ 22 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 43 ಪರೀಕ್ಷಾ ಕೇಂದ್ರಗಳನ್ನು ...

ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ ಲಂಡನ್‌ನಿಂದ ಆಗಮಿಸಿದ್ದ ಲೇಖಕಿಯ ಬಂಧನ, ಗಡಿಪಾರು

ಕರ್ನಾಟಕ ಸರಕಾರದ ಆಹ್ವಾನದ ಮೇರೆಗೆ 'ಸಂವಿಧಾನ ಹಾಗೂ ಭಾರತದ ಏಕತೆ' ಸಮಾವೇಶದಲ್ಲಿ ಉಪನ್ಯಾಸ ನೀಡಲು ಭಾರತಕ್ಕೆ ಆಗಮಿಸಿದ್ದ ಖ್ಯಾತ ...

ಸಂವಿಧಾನದ ವಿರುದ್ಧ ಇರುವವರನ್ನು ಕಿತ್ತು ಎಸೆಯಬೇಕು :     ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನಾವು ಸಂವಿಧಾನದ ಮಾಲೀಕರು. ಸಂವಿಧಾನ ಕಿತ್ತು ಎಸೆಯುವುದರಲ್ಲಿ ನಮ್ಮ ಆಸಕಿಯಿಲ್ಲ, ಸಂವಿಧಾನದ  ವಿರುದ್ಧ ಇರುವವರನ್ನು ...

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳ್ಳಿಸಿದ್ದ ಎಲ್ಲ ಮುಸ್ಲಿಮ್ ವಿರೋಧಿ ಕಾನೂನುಗಳನ್ನು ರದ್ದು ಪಡಿಸುವಂತೆ ಆಗ್ರಹ

ಭಟ್ಕಳ: ಇಲ್ಲಿನ ಮುಸ್ಲಿಮರ ಸಾಮಾಜಿಕ ರಾಜಕೀಯ ಸಂಘಟನೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನಿಯೋಗವೊಂದು ಬುಧವಾರ ...

ಜಿಲ್ಲೆಯಲ್ಲಿನ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯವ ನೀರು ಪೂರೈಸಲು ಅಗತ್ಯ ಕ್ರಮ : ಸಚಿವ ಮಧು ಎಸ್ ಬಂಗಾರಪ್ಪ

ಶಿವಮೊಗ್ಗ : ಪ್ರಸಕ್ತ ಸಾಲಿನ ಮುಂಗಾರು ವಿಫಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ...