ಪ್ರೀತಿಸಿ ಮದುವೆಯಾದ ಜೋಡಿ, ಯುವತಿ ತಂದೆ-ತಾಯಿಯಿಂದ ವಿರೋಧ: ಬಾಗಲಕೋಟೆ ಎಸ್​ಪಿ ಕಚೇರಿಗೆ ಸಹಾಯ ಅರಸಿ ಬಂದ ಪ್ರೇಮಿಗಳು

Source: S.O. News Service | By MV Bhatkal | Published on 27th February 2021, 5:45 PM | State News |

ಬಾಗಲಕೋಟೆ: ಒಂದು ಕಡೆ ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅನ್ಯಕೋಮಿನ ಯುವಕನ ಜೊತೆ ಮದುವೆಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಸಹೋದರ ಎಸ್​ಪಿ ಕಚೇರಿಯಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾನೆ. ಜೊತೆಗೆ ಯುವತಿಯ ತಂದೆ ಎಸ್​ಪಿ ಕಾಲಿಗೆ ಬಿದ್ದು ಒಬ್ಬಳೇ ಮಗಳು ಕಳುಹಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದು ಬಾಗಲಕೋಟೆಯ ಎಸ್​ಪಿ ಕಚೇರಿಯಲ್ಲಿ ಒಂದು ಕ್ಷಣ ಬಿಗಡಾಯಿಸಿದ ಸನ್ನಿವೇಶ ಕಂಡುಬಂತ್ತು.
ಬಾಗಲಕೋಟೆಯ‌ ನವನಗರದ ಸೆಕ್ಟರ್ ನಂ 44ರ ನಿವಾಸಿಗಳಾದ ಈ ಪ್ರೇಮಿಗಳ ಹೆಸರು ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು. ಅಕ್ಕಪಕ್ಕದಲ್ಲಿಯೇ ಇಬ್ಬರ ಮನೆ ಇದ್ದು, ಕಳೆದ ಏಳು ವರ್ಷದಿಂದ ನವೀನ ಪಕ್ಕದ ಮನೆಯ ಮಹಜಬಿನ್ ಅನ್ನು ಪ್ರೀತಿಸುತ್ತಿದ್ದಾನೆ. ಸದ್ಯ ಯುವತಿ ಮಹಜಬಿನ್​ಗೆ 19 ವರ್ಷ, ಅಂದರೆ 12 ವರ್ಷದ ಬಾಲ್ಯದಲ್ಲೇ ಇವರಿಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ಈಗ ಪ್ರಾಯದ ಹಂತಕ್ಕೆ ಬಂದು ಮದುವೆ ಕೂಡ ಆಗಿದೆ.
ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆಬ್ರವರಿ 16ರಂದು ಬಾಗಲಕೋಟೆಯ ಮಲ್ಲಯ್ಯನಗುಡಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು ರಕ್ಷಣೆ ಕೋರಿ ಪ್ರೇಮಿಗಳು ಎಸ್​ಪಿ ಮೊರೆ ಹೋಗಿದ್ದರು. ಈ ವೇಳೆ ಮಗಳ ಹಿಂದೆ ಬಂದ ತಂದೆ ಸಲೀಂ ಹಾಗೂ ಸಹೋದರ ಅಹ್ಮದ್ ಅಲಿ ಪ್ರೇಮಿಗಳ ಮೇಲೆ ಹಲ್ಲೆ‌ ಮಾಡಲು ಮುಂದಾಗಿದ್ದಾರೆ. ಯುವತಿಯ ಸಹೋದರ ಅಹ್ಮದ್ ಅಲಿ ಎಸ್​ಪಿ ಕಚೇರಿಯಲ್ಲೇ ಸಹೋದರಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೂಡ ನಡೆಯಿತು.
ಸದ್ಯ ಇಬ್ಬರು ಪ್ರೇಮಿಗಳು ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕುವುದಿಲ್ಲ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಎಸ್​ಪಿ ಅವರು ರಿಜಿಸ್ಟರ್ ಮದುವೆಯಾಗಿ ರಕ್ಷಣೆ ‌ನೀಡುತ್ತೇವೆ ಎಂದು ಹೇಳಿದ್ದು,ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

 

Read These Next

ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳ ಹೊಸ ಮಾರ್ಗಸೂಚಿ ಜಿಲ್ಲೆಯಲ್ಲಿ ಯಥಾವತ್ ಅನುಷ್ಠಾನ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ...

ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದ ಭಕ್ತರಿಗೆ ನಿರಾಶೆ. ಬುಧವಾರದಿಂದ ಮುಚ್ಚಿದ ದೇವಾಲಯ. ಸೇವೆಗಳು ಬಂದ್.

ಮಂಗಳೂರು : ದೇವಸ್ಥಾನಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿ ಸರ್ಕಾರದ ಆದೇಶ ಹೊರಡಿಸಿದ ಹಿನ್ನಲೆಯಲ್ಲಿ ಸರ್ಪ ಸಂಸ್ಕಾರ ಸೇವೆಗೆ ...

1ರಿಂದ 9ನೇ ತರಗತಿಗಳಿಗೆ ಪೈನಲ್ ಪರೀಕ್ಷೆಯಿಲ್ಲ. ವಿದ್ಯಾಗಮ, ಆನ್‌ಲೈನ್ ಚಟುವಟಿಕೆ ಆಧರಿಸಿ ಮೌಲ್ಯಾಂಕನ ವಿಶ್ಲೇಷಣೆ ಫಲಿತಾಂಶ

ಬೆಂಗಳೂರು: ಕೊರೋನಾ ಸೋಂಕಿನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಂದರಿಂದ ಒಂಭತ್ತನೇ ತರಗತಿಗಳಿಗೆ ವಿದ್ಯಾಗಮ, ...