ದುಬಾರಿ ಬೆಲೆಯ ಪಾರಿವಾಳ ಕದ್ದ ಕಳ್ಳನನ್ನು ಬೆಂಗಳೂರಿನಲ್ಲಿ ಬಂಧಿಸಿದ ಪೊಲೀಸರು

Source: sonews | By Staff Correspondent | Published on 9th October 2020, 5:57 PM | Coastal News | Don't Miss |

ಭಟ್ಕಳ: ನೋಡುಗರಿಗೆ ಆಕರ್ಷಣಿಯ ಹಾಗು ದುಬಾರಿ ಬೆಲೆಯ ಲಾಹೂರಿ ತಳಿಯ 25 ಪಾರಿವಾಳಗಳು ಇಲ್ಲಿನ ಆಝಾದ್ ನಗರ ಪಾರಿವಾಳ ಸಾಕಾಣಿಕಾ ಕೇಂದ್ರದಿಂದ ಕಳುವಾಗಿರುವ ಕುರಿತು ಅ.5 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತಗೊಂಡ ಪೊಲೀಸರು ಪಾರಿವಾಳ ಕಳ್ಳನನ್ನು ಬೆಂಗಳೂರಿನಲ್ಲಿ ಬಂಧಿಸಿ ಭಟ್ಕಳಕ್ಕೆ ಕರೆತಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಪಾರಿವಾಳ ಕದ್ದ ಆರೋಪಿಯನ್ನು ತಮಿಳುನಾಡು ಮೂಲದ ಪನ್ನೀರ್ ಸೇಲ್ವಂ ಎಂದು ಗುರುತಿಸಲಾಗಿದ್ದು, ಸುಮಾರು 15 ಲಕ್ಷ ಮೌಲ್ಯದ 18 ಪಾರಿವಾಳಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅ.5 ರಂದು ಆಝಾದ್ ನಗರದ ಪಾರಿವಾಳ ಸಾಕಾಣಿಕಾ ಕೇಂದ್ರದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಕಳ್ಳತನದ ದೃಶ್ಯಗಳನ್ನಾಧರಿಸಿ ಪಾರಿವಾಳ ಸಾಕಾಣಿಕೆದಾರ ಅಫ್ಝಲ್ ಕಾಶಿಮಜಿ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು. 
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ಪ್ರಾರಂಭಿಸಿದಾಗ, ಆರೋಪಿ ಕಳೆದ ಒಂದು ವರ್ಷದ ಹಿಂದೆಯೇ ಭಟ್ಕಳಕ್ಕೆ ಬಂದು ಅಫ್ಜಲ್ ರಿಂದ ಪಾರಿವಾಳಗಳನ್ನು ಖರೀದಿಸಿ ಹೋಗಿರುವ ಮಾಹಿತಿ ಬೆಳಕಿಗೆ ಬಂದಿದೆ. ನಂತರ ಈತನನ್ನು ಬೆಂಗಳೂರಿನಿಂದ ಬಂಧಿಸಿ ಭಟ್ಕಳಕ್ಕೆ ಕರೆ ತಂದಿದ್ದಾರೆ.

ಕದ್ದ ಪಾರಿವಾಳ ಪೈಕಿ 7 ಪಾರಿವಾಳಗಳನ್ನು ಈತ ಬೇರೆಡೆಗೆ ಮಾರಾಟ ಮಾಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೆÇಲೀಸರು ಕಲೆ ಹಾಕುತ್ತಿದ್ದಾರೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಅಪರೂಪದ ಲಾಹೂರಿ ತಳಿಯ ದುಬಾರಿ ಬೆಲೆಯ ಪಾರಿವಾಳ : ಭಟ್ಕಳ ಆಜಾದ್ ನಗರದಲ್ಲಿರುವ ಅಫ್ಜಲ್ ಕಾಶಿಮಜಿ ಕಳೆದ 8 ವರ್ಷಗಳಿಂದ ಪಾರಿವಾಳ ಸಾಕುವ ಹವ್ಯಾಸವನ್ನು ಇಟ್ಟುಕೊಂಡಿದ್ದು ಅವರು ಸಾಕಾಣಿಕಾ ಕೇಂದ್ರದಲ್ಲಿ ಭಾರತದ ನಂಬರ್ ಒನ್ ಲಾಹೋರಿ ಜಾತಿಯ ಅದ್ಭುತ ಸೌಂದರ್ಯವನ್ನು ಹೊಂದಿರುವ ಪಾರಿವಾಳಗಳು ಇವೆ. ಈ ಪಾರಿವಾಳಗಳು ವಿದೇಶ ಮಾತ್ರವಲ್ಲದೆ ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಯನ್ನು ಹೊಂದಿವೆ. ಒಂದು ಪಾರಿವಾಳವೊಂದಕ್ಕೆ ಲಕ್ಷದವರೆಗೂ ಬೇಡಿಕೆ ಬರುವುದು ಇದೆ ಎನ್ನಲಾಗಿದೆ. ಅಫ್ಜಲ್ ಅವರ ಸಾಕಾಣಿಕೆ ಕೇಂದ್ರದಲ್ಲಿ 300 ರಿಂದ 350 ಪಾರಿವಾಳಗಳು ಇವೆ. ಈ ಲಾಹೋರಿ ಪಾರಿವಾಳಗಳು ಕಾರಣದಿಂದಲೇ ಅಫ್ಜಲ್ 2018ರಿಂದ ಸತತ ಮೂರು ವರ್ಷ ರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಿಟ್ಟಿಸಿಕೊಂಡಿರುವುದು ವಿಶೇಷವಾಗಿದೆ.

ಈ ಕುರಿತು ಮಾತನಾಡಿದ ಅಫ್ಝಲ್, ನಾನು ಸತತ 8 ವರ್ಷದಿಂದ ಪಾರಿವಾಳಗಳನ್ನು ಸಾಕುತ್ತಾ ಬಂದಿದ್ದು 3 ಬಾರಿ ರಾಷ್ಟ್ರೀಯ ಪಾರಿವಾಳಗಳ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡಿದ್ದೇನೆ.

ಅ.5 ರಂದು ರಾತ್ರಿ ನನ್ನ ಪಾರಿವಾಳ ಸಾಕಾಣಿಕ ಕೇಂದ್ರದಲ್ಲಿ ಕಳ್ಳತನ ಮಾಡಿ ಸುಮಾರು 25 ಹೈ ಬ್ರಿಡ್ ಲಾಹೋರಿ ತಳಿಯ ಪಾರಿವಾಳಗಳು ಕಳುವು ಆಗಿದ್ದು, ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವ ವ್ಯಕ್ತಿ ನನ್ನ ಬಳಿ ಬಂದು ಪಾರಿವಾಳ ಖರೀದಿಮಾಡಿಕೊಂಡಿರುವುದು ತಿಳಿದುಬಂದಿದೆ.  

ಈ ಪ್ರಕರಣವನ್ನು ಅತ್ಯಂತ ತ್ವರಿತಗತಿಯಲ್ಲಿ ಬೇಧಿಸಿದ  ಭಟ್ಕಳ ಪೆÇಲೀಸರು, 18 ಪಾರಿವಾಳವನ್ನು ಜಪ್ತಿ ಮಾಡಿ ನನಗೆ ಮರಳಿ ತಲುಸಿದ್ದು ಅವರಿಗೆ ನಾನು ತುಂಬಾ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...