ವಿಜಯೋನ್ಮಾದದ ಮಿತಿಗಳು

Source: sonews | By Staff Correspondent | Published on 5th March 2019, 6:16 PM | National News | Special Report | Don't Miss |

ಗಡಿಗಳಲ್ಲಿ ಶಾಶ್ವತ ಶಾಂತಿಯನ್ನು ಖಾತರಿಗೊಳಿಸದೆ ನಾಗರಿಕ ಸಮಾಜವು ಯುದ್ಧೋನ್ಮಾದಿ ಮನಸ್ಥಿತಿಯಿಂದ ಹೊರಬರುವುದಿಲ್ಲ.

ಕಾಶ್ಮೀರದ ಫುಲ್ವಾಮದಲ್ಲಿ ಜೈಷ್--ಮುಹಮ್ ಸಂಘಟನೆಯು ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ವಾಯು ಪಡೆಯು ಕೈಗೊಂಡ ಮಿಲಿಟರಿ ಕ್ರಮಗಳು ಎರಡು ಬಗೆಯ ನಿರೀಕ್ಷಿತ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಮೊದಲನೆಯದಾಗಿ ದೇಶದ ಪ್ರಮುಖ ವಿರೋಧ ಪಕ್ಷಗಳ ನಾಯಕರನ್ನೂ ಒಳಗೊಂಡಂತೆ ಬಹಳಷ್ಟು ಜನ ಭಾರತೀಯ ಸೇನಾಪಡೆಗಳನ್ನು ಅಭಿನಂದಿಸಿದ್ದಾರೆ. ಆಳುವವರ ಕಡೆಯಿಂದ ನೋಡುವುದಾದರೆ, ಆಪರೇಷನ್ ಬಾಲಾಕೋಟ್ ಎಂಬ ಅಧಿಕೃತ ಹೆಸರನ್ನು ಹೊಂದಿದ್ದ ಕಾರ್ಯಾಚಾರಣೆಯು ಸರ್ಕಾರ ಮತ್ತು ಅದರ ಬೆಂಬಲಿಗರಲ್ಲಿ ವಿಜಯೋನ್ಮಾದವನ್ನು ಹುಟ್ಟುಹಾಕಿದೆ. ಪಾಕಿಸ್ತಾನದ ಮೇಲೆ ನಡೆದ ಮಿಲಿಟರಿ ಕಾರ್ಯಾಚರಣೆಯ ಮೂಲಕ  ಫುಲ್ವಾಮದಲ್ಲಿ ನಡೆದ ಭಯೋತ್ಪಾದನೆಯ ಕೃತ್ಯಕ್ಕೆ ಪ್ರತೀಕಾರ ತೆಗೆದುಕೊಳ್ಳಬೇಕೆಂಬ ಸಾರ್ವಜನಿಕ ಬೇಡಿಕೆಯನ್ನು ಪೂರೈಸಿದಂತಾಗಿದೆಯೆಂದು ಆಳುವ ಪಕ್ಷದ ವಕ್ತಾರರು ಕೂಡಲೇ ಪ್ರತಿಪಾದಿಸಲಾರಂಭಿಸಿದರು. ಎರಡನೆಯದಾಗಿ ಪಾಕಿಸ್ತಾನದಲ್ಲಿನ ಭಾರತೀಯ ವಾಯು ಪಡೆಯ ಕಾರ್ಯಾಚರಣೆಯು ದಾಳಿ ಮಾಡಿದವರಿಗೆ ಪಾಠ ಕಲಿಸಬೇಕೆಂಬ ಮತ್ತು ಆಗಿರುವ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಬೇಕೆಂಬ ಬಯಕೆಯು ಸಾರ್ವಜನಿಕ ಮನಸ್ಥಿತಿ ಮತ್ತು ಸರ್ಕಾರದ ಮನಸ್ಥಿತಿಯ ನಡುವೆ ರೂಪುಗೊಂಡಿರುವ ಐಕ್ಯತೆಯ ಧೃಢ ಸೂಚನೆಯೆಂದು ಹಲವರು ಪರಿಗಣಿಸುತ್ತಾರೆ. ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದೇ ನನ್ನ ಮನಸ್ಸಿನಲ್ಲೂ ಇದೆ ಯೆಂದು ಪ್ರಧಾನಿ ಮೋದಿ ಹೇಳಿದ್ದರಲ್ಲಿ ಏಕ ಮನೋಭಾವವು  ಇನ್ನೂ ಸ್ಪಷ್ಟವಾಗಿ ಅಭಿವ್ಯಕ್ತಗೊಂಡಿದೆ. ಇದು ನಮ್ಮ ಸಾರ್ವಜನಿಕ ಮಾನಸಿಕತೆಯಲ್ಲಿ ಮನೆಮಾಡಿರುವ ಯುದ್ಧಕೋರ ಗುಣಲಕ್ಷಗಳನ್ನು ಗುರುತಿಸುವ ಮತ್ತು ಇದರಿಂದಾಗಿ ಸಮಾಜದ ಒಳಗೆ ಮತ್ತು ದೇಶಗಳ ನಡುವೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಡಬಹುದಾದ ಪರಿಣಾಮಗಳನ್ನು ಗುರುತಿಸಬೇಕಾದ ಅಗತ್ಯವನ್ನು ಸೂಚಿಸುತ್ತಿದೆ.

ಸಂದರ್ಭದಲ್ಲಿ ಒಂದೆರಡು ಪ್ರಶ್ನೆಗಳನ್ನು ಕೇಳಲೇ ಬೇಕಿದೆ. ಮೊದಲನೆಯದಾಗಿ ಸಾರ್ವಜನಿಕ ಮಾನಸಿಕತೆಯಲ್ಲಿರುವ ಯುದ್ಧಕೋರ ಗುಣಲಕ್ಷಣಗಳು ಹೊರಗಿನವರ ಮೇಲೆ ಮತ್ತು ಹೊರಗಿನಿಂದ ಆಗುವ ದಾಳಿಯ ವಿರುದ್ಧ ಮಾತ್ರ ವ್ಯಕ್ತವಾಗುತ್ತದೆಯೇ ವಿನಃ ದೇಶದೊಳಗಿನ ನಾಗರಿಕ ಸಮಾಜದ ಸಹ ಸದಸ್ಯರ ಮೇಲೆ ತಿರುಗುವುದಿಲ್ಲ ಎಂಬುದಕ್ಕೆ ಖಾತರಿಯೇನು? ಯುದ್ಧಕೋರ ಮನೋಭಾವದಿಂದ ನಾಗರಿಕರನ್ನು ಹೊರತರುವುದು ಯುದ್ಧರೀತಿಯ ವಾತಾವರಣದಲ್ಲಿ ಸಿಲುಕಿಕೊಂಡಿರುವ ದೇಶಗಳ ಸರ್ಕಾರಗಳ ಪ್ರಜಾತಾಂತ್ರಿಕ ಕರ್ತವ್ಯವಲ್ಲವೇ?

ಫುಲ್ವಾಮ ಘಟನೆಯ ನತರದಲ್ಲಿ ವ್ಯಕ್ತವಾಗುತ್ತಿರುವ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಸಾರ್ವಜನಿಕರೇ ಮಿಲಿಟರಿ ಥಿಂಕ್ ಟ್ಯಾಂಕ್ ಪಾತ್ರವನ್ನು ವಹಿಸಿಕೊಂಡು ಯುದ್ಧ, ಆಕ್ರಮಣ, ಧೈರ್ಯ ಮತ್ತು ಭಯಭೀತಿ ಇಲ್ಲದೆ ಕಾರ್ಯಾಚರಣೆ ಮಾಡುವ ಕುರಿತು ಸಲಹೆಗಳನ್ನು ನೀಡುತ್ತಿರುವುದು ಕಣ್ಣಿಗೆ ರಾಚುತ್ತದೆ. ನಾಗರಿಕ ಸಮಾಜದ ಮಂದಿ  ಸೈನಿಕ ಸಮವಸ್ತ್ರವನ್ನು ಧರಿಸಿ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಿರುಗುವುದಿಲ್ಲ ಎನ್ನುವುದನ್ನು ಹೊರತುಪಡಿಸಿದರೆ ಈಗಾಗಲೇ ಅವರು ತಮ್ಮ ಮನಸ್ಸತ್ವವನ್ನು ಮಿಲಿಟರಿ ಮನಸ್ಸತ್ವವಾಗಿ ಬದಲಾಯಿಸಿಕೊಂಡು ಬಿಟ್ಟಿದ್ದಾರೆ. ಆದರೆ ಅವರ ಬಳಿ ಕಾಶ್ಮಿರಿಗಳಲ್ಲಿ ಭಯವನ್ನು ಹುಟ್ಟಿಸಬಲ್ಲ, ಅಥವಾ ಭಯೋತ್ಪಾದಕರಿರುವ ಭೂಭಾಗದೊಂದಿಗೆ ಸಹಜೀವನ ನಡೆಸುತ್ತಾರೆಂದು ಆರೋಪಿಸಲ್ಪಡುವ ಕಾಶ್ಮೀರಿಗಳ ಬಗ್ಗೆ ದ್ವೇಷ ಹುಟ್ಟಿಸಬಲ್ಲ ಅಥವಾ ಅವರ ಸಾಮಾಜಿಕ ಬಹಿಷ್ಕಾರಕ್ಕೂ ಆಗ್ರಹಿಸುವಂಥ ಇನ್ನಿತರ ಅಸ್ತ್ರಗಳಿವೆ. ಭಾರತದಲ್ಲಂತೂ ಗಣ್ಯಮಾನ್ಯರೇ ಕಾಶ್ಮೀರಿಗಳ ಬಹಿಷ್ಕಾರಕ್ಕೆ ಕರೆಕೊಡುವುದು ಅತ್ಯಂತ ಆಶ್ಚರ್ಯಕರವಾಗಿದೆ. ಹಾಗೆ ಹೇಳುತ್ತಿರುವ ನಾಯಕರ ಮೇಲೆ ದೇಶದ ಎಲ್ಲಾ ನಾಗರಿಕರು ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವಂತೆ ನೋಡಿಕೊಳ್ಳುವ ಸಂವಿಧಾನಾತ್ಮಕ ಜವಾಬ್ದಾರಿಯೂ ಇದೆ. ವಾಸ್ತವವಾಗಿ ತಾವು ದಾಳಿ ಮಾಡುತ್ತಿರುವ ಗುಂಪುಗಳು ಇತರರೊಂದಿಗೆ ಸಹಜವಾಗಿ ವಾಸಮಾಡಲಾಗದೆ ಹೆದರಿಕೆಯಿಂದ ಜಗವನ್ನು ತೊರೆದು ದಾಳಿಗೊಳಗಾಗುವ ಗುಂಪೆಲ್ಲ ಒಟ್ಟಾಗಿ ಒಂದೇ ಕಡೆ ವಾಸಿಸುವಂತೆ ಮಾಡುವ (ಗೆಟ್ಟೋಐಸೇಷನ್) ಮೂಲಕ ಅವರನ್ನು ತಮ್ಮ ಹಿಂಸಾಚಾರಗಳಿಗೆ ಸುಲಭದ ತುತ್ತನ್ನಾಗಿಸಿಕೊಳ್ಳುವುದು ರೀತಿಯ ಸಾಮಾಜಿಕ ಬಹಿಷ್ಕಾರಕ್ಕೆ ಕರೆಕೊಡುವವರಿಗೆ ಬೇಕಾಗಿದೆ. ಅಂತಹ ಸಲಹೆಗಳು ನಾಗರಿಕ ಮತ್ತು ಸೈನಿಕದ ನಡುವಿನ ಅಂತರವನ್ನೇ ಇಲ್ಲದಂತೆ ಮಾಡುತ್ತದೆ.

ಸೈನ್ಯೀಕರಣವು ಒಂದು ಪ್ರಕ್ರಿಯೆಯಾಗಿದ್ದು ನಾಗರಿಕ ಸಮಾಜವು ಮೂಲಕ ಹಿಂಸೆಗೆ ಅಗತ್ಯವಾಗಿರುವ ಪರಿಸ್ಥಿತಿಯನ್ನು ಅಥವಾ ಅದರ ವಾಸ್ತವಿಕ ಅಭಿವ್ಯಕ್ತಿಗಳನ್ನು ಸೃಷ್ಟಿಸುತ್ತದೆ. ಆದರೆ ಒಂದು ನಾಗರಿಕ ಸಮಾಜವು ಅಹಿಂಸೆಯನ್ನು, ಪರಸ್ಪರ ಸಹಿಷ್ಣುತೆಯ ಪ್ರಜಾತಾಂತ್ರಿಕ ನೀತಿ ನಿಯಮಗಳನ್ನು ಹಾಗೂ ಮತ್ತೊಬ್ಬರ ಬಗ್ಗೆ ಸಹಜ ಮನೋಧರ್ಮದಿಂದ ನಡೆದುಕೊಳ್ಳುವುದನ್ನು ಪ್ರೇರೇಪಿಸಬೇಕು. ಹೊರಗಿನ ದಾಳಿಯನ್ನು ಪ್ರತಿಘಟಿಸುವುದರ ಬಗ್ಗೆ ಬೇಕಾದ ವ್ಯೂಹತಂತ್ರ, ಯೋಜನೆ ಮತ್ತು ರಾಜಾತಾಂತ್ರಿಕ ಕ್ರಮಗಳ ಬಗ್ಗೆ ರಕ್ಷಣಾ ಪಡೆಗಳಿಗೆ ತಮ್ಮದೇ ಆದ ಲೆಕ್ಕಾಚಾರಗಳಿರುತ್ತವೆ ಎಂಬುದನ್ನು ನಾಗರಿಕ ಸಮಾಜದ ಸದಸ್ಯರು ಅರ್ಥಮಾಡಿಕೊಳ್ಳಬೇಕು. ರಕ್ಷಣಾ ಪಡೆಗಳ  ಪಾತ್ರವನ್ನು ನಾಗರಿಕ ಸಮಾಜವು ವಹಿಸಿಕೊಳ್ಳಲಾಗದು. ಆದರೆ ನಾಗರಿಕ ಸಮಾಜದ ಸದಸ್ಯರು ಗೆರೆಗಳನ್ನು ದಾಟಿ ಯುಧ್ಹವೇ ಏಕೈಕ ದಾರಿಯೆಂದು ರಕ್ಷಣಾ ಪಡೆಗಳಿಗೆ ಮಾರ್ಗದರ್ಶನ ಮಾಡಲು ಹೊರಟಿದ್ದಾರೆ. ಅದನ್ನು ಅಲ್ಲಿಗೆ ಮಾತ್ರ ನಿಲ್ಲಿಸದೆ ತಮ್ಮ ರಾಷ್ಟ್ರೀಯ ಆಕ್ರೋಶವನ್ನು ಸಮಾಜದೊಳಗಿನ ಇತರ ಸಹ ಸದಸ್ಯರ ಮೇಲೆ ಹರಿಬಿಡುವುದಕ್ಕೂ ಕಾರಣಗಳನ್ನು ಹುಡುಕಿಕೊಳ್ಳುತ್ತಿದ್ದಾರೆ.

ವಿಜಯೋನ್ಮಾದವು ಹರಡಿಕೊಳ್ಳಲು ದುರಂತದ ಒಂದು ಪೂರ್ವಭಾವಿ ಚಿತ್ರಣವು ಅತ್ಯಗತ್ಯ. ಒಂದು ಶಾಂತಿಪ್ರೇಮಿ ಪ್ರಜಾತಾಂತ್ರಿಕ  ದೇಶದಲ್ಲಿ ವಿಜಯೋನ್ಮಾದಗಳಿಗೆ ಮಿತಿಯಿರುತ್ತದೆ. ಅಂತಹ ದೇಶಗಳಲ್ಲಿನ ಸರ್ಕಾರಗಳ ಮೇಲೆ  ತಮ್ಮ ನಾಗರಿಕರು ಈಬಗೆಯ ವಿಜಯೋನ್ಮಾದ ಭಾವನೆಗಳನ್ನು ಮೈಗೂಡಿಸಿಕೊಳ್ಳದಂತೆ ನೋಡಿಕೊಳ್ಳುವ ಜವಾಬ್ದಾರಿಯಿರುತ್ತದೆ. ನಾಗರಿಕರಲ್ಲಿ ಯುದ್ಧೋನ್ಮಾದವನ್ನು ಅಥವಾ ಪ್ರತೀಕಾರ ಮನೋಭಾವವನ್ನು ಬಿತ್ತಿ ಅದರ ಮೂಲಕ ತನ್ನ ಅಸ್ಥಿತ್ವವನ್ನು ಖಾತರಿಪಡಿಸಿಕೊಳ್ಳಲೆಂದೇ ರೂಪಿಸಿರುವ ತಂತ್ರೋಪಾಯಗಳನ್ನು ಕೈಬಿಡುವ ದೊಡ್ಡ ಸವಾಲು ಭಾರತದ ಹಾಲಿ ಸರ್ಕಾರದ ಮುಂದಿದೆ.

ಯುದ್ಧೋನ್ಮಾದಿ ರಾಷ್ಟ್ರೀಯತೆಯು ರಾಷ್ಟ್ರೀಯ ಅಪಮಾನದ ನಂಜಿನ ಸಂಕಥನದ ಪುನರುತ್ಪಾದನೆಗೆ ದಾರಿಮಾಡಿಕೊಡುತ್ತದೆ. ಒಂದು ಯುದ್ಧೋನ್ಮಾದಿ ಮನೋಭಾವದಲ್ಲಿರುವ ರಾಷ್ಟ್ರವು ತನ್ನ ಘನತೆಯನ್ನು ಮರಳಿಪಡೆದುಕೊಳ್ಳಬೇಕೆಂದg ಗಡಿಗಳಲ್ಲಿ ಸದಾ ಒತ್ತಡದ ವಾತಾವರಣವನ್ನು ಪನರುತ್ಪಾದನೆ ಮಾಡಿಕೊಳ್ಳುವುದು ತಾರ್ಕಿಕವಾಗಿ ಅಗತ್ಯವಾಗುತ್ತದೆ. ಹೀಗಾಗಿ ಸೇಡು ತೀರಿಸಿಕೊಳ್ಳುವ ಹಪಹಪಿಕೆ ಗಡಿಯ ಎರಡೂ ಕಡೆಗಳಲ್ಲೂ ಜೀವಂತವಾಗಿರುತ್ತದೆ. ಯುದ್ಧೋನ್ಮಾದಿ ಮನಸ್ಸತ್ವವನ್ನು  ಎಲ್ಲಿದ್ದರೂ ಅಥವಾ ಬೇರೆ ಎಲ್ಲೇ ತಲೆ ಎತ್ತಿದರೂ ಅದನ್ನು ತಣ್ಣಗಾಗಿಸುವ ಜವಾಬ್ದಾರಿ ಭಾರತ ಮತ್ತು ಪಾಕಿಸ್ತಾನದ ಎರಡೂ ಆಳುವ ವರ್ಗಗಳೂ ಮೇಲೂ ಇದೆ ಬಗೆಯ ಮಾನಸಿಕತೆಯ ಸೈನ್ಯೀಕರಣವು ಮಾನವೀಯ ಮೌಲ್ಯಗಳನ್ನು ಹಿಮ್ಮೆಟ್ಟಿಸಿದೆಯೆಂಬುದು ಯುದ್ಧದ ಇತಿಹಾಸಗಳು ರುಜುವಾತು ಮಾಡಿದೆ.

ಕೃಪೆ: Economic and Political Weekly ಅನು: ಶಿವಸುಂದರ್ 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...