ಈಜುಕೊಳದ ಗೋಡೆ ಕುಸಿತ

Source: sonews | By Staff Correspondent | Published on 26th June 2019, 5:33 PM | Coastal News | Don't Miss |

ಭಟ್ಕಳ: ಇಲ್ಲಿನ ಬಂದರ್ ರಸ್ತೆ 5ನೇ ಕ್ರಾಸ್ ನಲ್ಲಿರುವ ಈಜುಕೊಳವೊಂದರ ಕಂಪೌಂಡ್ ಗೋಡೆಯೊಂದು ಅಕಸ್ಮಿಕವಾಗಿ ಸಂಪೂರ್ಣ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯ ಉಂಟಾಗಿರುವುದಿಲ್ಲ. 

ಈಜುಕೊಳದ  ಕಂಪೌಂಡ್ ಗೋಡೆಯು ಶಿಥಿಲಗೊಂಡಿದ್ದು ಇಂದು ಮುಂಜಾನೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದಿದಿದೆ ಎಂದು ಹೇಳಲಾಗುತ್ತಿದೆ. 

ಗೋಡೆ ಕುಸಿತ ಸಂದರ್ಭದಲ್ಲಿ ಮಕ್ಕಳು ಈಜಾಡುತ್ತಿದ್ದು ಗೋಡೆಯು ಈಜುಕೊಳದ ಕಡೆಗೆ ಕುಸಿಯದೆ ಹೊರಗಡೆ ಕುಸಿದು ಬಿದ್ದಿದೆ. ಒಂದು ವೇಳೆ ಈಜು ಕೊಳ ಇರುವ ಕಡೆ ಕುಸಿದಿದ್ದರೆ ಹಲವು ಜೀವಹಾನಿ ಸಂಭವಿಸುತ್ತಿದ್ದವು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೂ ಗೋಡೆ ಕುಸಿತಕ್ಕೆ ಒಂದು ಬೈಕ್ ಹಾಗೂ ಸೈಕಲ್ ನುಜ್ಜುಗುಜ್ಜಾಗಿದೆ ಎಂದು ಹೇಳಲಾಗುತ್ತಿದೆ.

Read These Next

ಕನ್ನಡ ಭವನದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ; ಸಂವಿಧಾನವನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವುದೇ ಅಂಬೇಡ್ಕರ್ ಅವರಿಗೆ ಸಲ್ಲಿಸುವ ದೊಡ್ಡ ಗೌರವ : ನಾಗರಾಜ ಹರಪನಹಳ್ಳಿ

ಸಂವಿಧಾನವನ್ನು ಅರ್ಥಪೂರ್ಣವಾಗಿ ಜಾರಿಗೊಳಿಸುವುದೇ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಲ್ಲಿಸುವ ದೊಡ್ಡ ಗೌರವಾಗಿದೆ ಎಂದು ...