ಮತದಾನದ ಮಹತ್ವ ಸಾರುವ ವ್ಯಂಗ್ಯಚಿತ್ರಗಳು

Source: so news | By MV Bhatkal | Published on 10th April 2019, 1:08 AM | State News | Don't Miss |

 

ಹುಬ್ಬಳ್ಳಿ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟçವೆನಿಸಿರುವ ಭಾರತ ದೇಶದಲ್ಲಿ. ಸ್ವಾತಂತ್ರಾö್ಯನಂತರದ ಕಳೆದ ಸುಮಾರು ೭೦ ವರ್ಷಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಿರ್ವಹಿಸಿಕೊಂಡು ಬರುವ ಮೂಲಕ ಭಾರತ ಚುನಾವಣಾ ಆಯೋಗವು ಉಳಿದ ಅನೇಕ ಪ್ರಜಾಪ್ರಭುತ್ವ ರಾಷ್ಟಗಳಿಗೆ ಮಾದರಿಯಾಗಿ ನಿಂತಿದೆ. ವೆಚ್ಚದಾಯಕವಾಗಿರುವ ಚುನಾವಣಾ ವ್ಯವಸ್ಥೆಯು ಸಫಲವಾಗಬೇಕಾದರೆ ಮತದಾನದ ಪ್ರಮಾಣ ಹೆಚ್ಚಾಗಬೇಕಾದುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಆಯೋಗವು ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಚುನಾವಣಾ ಸಹಭಾಗಿತ್ವ (ಸ್ವಿಪ್) ಸಮಿತಿಗಳ ಮೂಲಕ ದೇಶದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ. ಧಾರವಾಡ ಜಿಲ್ಲಾ ಸ್ವಿಪ್ ಸಮಿತಿಯು ಹೊಸ ಹೊಸ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.ಈ ಚಟುವಟಿಕೆಯ ಭಾಗವಾಗಿ ವ್ಯಂಗ್ಯಚಿತ್ರಗಳ ಮೂಲಕವೂ ಮತದಾನ ಮಹತ್ವ ಸಾರುವ ಆಕರ್ಷಕ ಕಾರ್ಯ ನಡೆಯುತ್ತಿದೆ.
ಕಲಘಟಗಿ ತಾಲ್ಲೂಕಿನ ಗಳಗಿಹುಲಕೊಪ್ಪದ ಸರ್ಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಸಂಜೀವ್ ಕಾಳೆ ಅವರು ತಮ್ಮ ಕಲಾಪ್ರತಿಭೆಯ ಮೂಲಕ ರೇಖೆಗಳಲ್ಲಿ ವರ್ಣರಂಜಿತವಾಗಿ,ವಿಡಂಬನೆ ಹಾಗೆ ಸಂದೇಶವನ್ನು ಸಮರ್ಥವಾಗಿ ಸಾರುವಂತಹ ೨೩ ಕ್ಕೂ ಹೆಚ್ಚು ವೈವಿಧ್ಯಮಯ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷರಾಗಿರುವ ,ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಅವರ ಸಲಹೆ ಮತ್ತ ಮಾರ್ಗದರ್ಶನದಡಿ ಈ ಕೃತಿಗಳು ಮೂಡಿಬಂದಿವೆ.
ಭಾರತ ಚುನಾವಣಾ ಆಯೋಗ,ಸ್ವಿÃಪ್ ಲಾಂಛನಗಳನ್ನೊಳಗೊಂಡಂತೆ ವಿದ್ಯುನ್ಮಾನ ಮತಯಂತ್ರ,ವಿವಿಪ್ಯಾಟ್‌ಗಳನ್ನು ಸ್ಥಾಯಿಯಾಗಿಟ್ಟುಕೊಂಡು, ಆಮಿಷಕ್ಕೆ ಒಳಗಾಗದೇ ಮತಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು, ೧೮ ವರ್ಷ ತುಂಬಿದ ಯುವ ಜನರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ತಿಳುವಳಿಕೆ ನೀಡುವುದು. ಒಂದು ವಾಸಸ್ಥಳ ಬಿಟ್ಟು ಬೇರೆಡೆಗೆ ತೆರಳಿರುವ ಮತದಾರರು ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕೋರುವುದು.ತೃತೀಯ ಲಿಂಗಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡು ಹೆಮ್ಮೆಯಿಂದ ಮತ ಚಲಾಯಿಸುವುದು. ಹಿರಿಯ ನಾಗರಿಕರು ಮತಚಲಾಯಿಸಲು ಮತಗಟ್ಟೆಯತ್ತ ಹೊರಟಿದ್ದರೆ ನವಜೋಡಿಗಳು ಮತದಾನ ದಿನದ ಕರ್ತವ್ಯ ಮರೆತು ರಜೆಯ ಮಜಾ ಮಾಡಲು ಪ್ರವಾಸಕ್ಕೆ ಹೊರಟಿರುವ ಚಿತ್ರಗಳು ಪರಿಣಾಮಕಾರಿಯಾಗಿ ಶಿಕ್ಷಕ ಸಂಜೀವ ಕಾಳೆ ಅವರ ಕೈಯಲ್ಲಿ ಅರಳಿವೆ.
ಇದೇ ಮೊದಲ ಬಾರಿಗೆ ಮತದಾನಕ್ಕೆ ಅರ್ಹತೆ ಪಡೆದಿರುವ ಮತದಾರರಿಗಾಗಿ ಏರ್ಪಡಿಸಿರುವ ಸೆಲ್ಫಿ ವಿತ್ ಬೂತ್ ,ವಿಕಲಚೇತನರಿಗೆ ಮತಗಟ್ಟೆಗೆ ಬರಲು ಕಲ್ಪಿಸಿರುವ ಸೌಕರ್ಯಗಳ ಕುರಿತ ಹಾಗೂ ಮಹಿಳಾ ಸಿಬ್ಬಂದಿಯಿಂದಲೇ ಕೂಡಿರುವ ಸಖಿ ಮತಗಟ್ಟೆಗಳ ಬಗೆಗೆ ರಚಿಸಿರುವ ವ್ಯಂಗ್ಯಚಿತ್ರಗಳು ಆಕರ್ಷಕವಾಗಿ ಜನಮನ ಸೆಳೆಯುತ್ತಿವೆ.
ಈ ವ್ಯಂಗ್ಯಚಿತ್ರಗಳನ್ನು ಸ್ಟಿಕರ್‌ಗಳನ್ನಾಗಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವ , ಹುಬ್ಬಳ್ಳಿಯಲ್ಲಿ ಸಾರ್ವಜನಿಕ ಪ್ರದರ್ಶನ ಮಾಡುವ ಕಾರ್ಯಕ್ರಮಗಳನ್ನು ಏರ್ಪಡಿಸಲು ಜಿಲ್ಲಾ ಸ್ವಿಪ್ ಸಮಿತಿ ಉದ್ದೆÃಶಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಇವುಗಳನ್ನು ಮತದಾರರಿಗೆ ತಲುಪಿಸಲಾಗುತ್ತಿದೆ.ರೇಖೆಗಳ ಮೂಲಕ ಮತದಾರರ ಜಾಗೃತಿ ಮಾಡುವ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...