ಖೋ-ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಬಾಲಕರ ತಂಡಕ್ಕೆ ಕಂಚಿನ ಪದಕ

Source: so news | Published on 23rd January 2020, 1:10 AM | State News | Don't Miss |

 

ದಾವಣಗೆರೆ:ಅಸ್ಸಾಂ ರಾಜ್ಯ ಗುವಾಹಟಿಯಲ್ಲಿ ಜ.15 ರಿಂದ 19 ರವರೆಗೆ ನಡೆದ 3ನೇ ರಾಷ್ಟ್ರ ಮಟ್ಟದ 21 ವರ್ಷದೊಳಗಿನ ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ರ ಖೋ-ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ಬಾಲಕರ ತಂಡವು ಕಂಚಿನ ಪದಕ ಪಡೆದಿದೆ.
ರಾಜ್ಯ ತಂಡದಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಾದ ಬಾಹುಬಲಿ ಎಸ್ ಬೀಳಗಿ, ಭರತ್‍ಕುಮಾರ್ ಪಿ.ಬಿ, ಮಹಮ್ಮದ್ ತಾಸೀನ್ ಮತ್ತು ಶರತ್ ಜೆ.ಜಿ. ಇವರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹಾಗೂ ಧನುಷ್ ಕೆ.ಸಿ, ಕೃಷ್ಣ ಪ್ರಸಾದ್ ಕಶ್ಯಪ್, ಶಶಿಕುಮಾರ್, ಶ್ರೀಧರ್, ಧನರಾಜ್, ಮಾರಪ್ಪ, ಚಂದ್ರಶೇಖರ್ ಹಾದಿಮನಿ, ಸೋಮಲಿಂಗ ಪೂಜಾರಿ ಇವರುಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಖೇಲೋ ಇಂಡಿಯಾ ಪಂದ್ಯಾವಳಿಯಲ್ಲಿ ರಾಜ್ಯ ಬಾಲಕರ ತಂಡದಿಂದ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.
ಖೋ-ಖೋ ತರಬೇತುದಾರರಾದ ಜೆ.ರಾಮಲಿಂಗಪ್ಪ, ಕರ್ನಾಟಕ ರಾಜ್ಯ ಖೋ-ಖೋ ತಂಡದ ತರಬೇತುದಾರರಾಗಿ ಹಾಗೂ ಬೆಂಗಳೂರಿನ ಕೆ.ಎಸ್. ಮುಕುಂದ ಇವರು ತಂಡದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಖೇಲೋ ಇಂಡಿಯಾ ಯೂತ್ ಗೇಮ್ಸ್ 2020 ರಲ್ಲಿ ಕಂಚಿನ ಪದಕ ಪಡೆದ ರಾಜ್ಯ ಬಾಲಕರ ಖೋ-ಖೋ ತಂಡಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಶ್ರೀನಿವಾಸ್, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀಕ್ಷಕಿ ಗ್ರೇಸಿ. ಕೆ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read These Next

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...

ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ ಅರ್ಜಿ ಆಹ್ವಾನ                                                         

ಬೆಂಗಳೂರು: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‍ಮೆಂಟ್ ಕೋರ್ಸ್‍ಗೆ (ಡಿ.ಸಿ.ಎಂ) ಬೆಂಗಳೂರು ನಗರ/ ಗ್ರಾಮಾಂತರ, ತುಮಕೂರು, ...