ಭಟ್ಕಳ: ಹೆಂಡತಿಯಿಂದ ಗಂಡನ ಕೊಲೆ?

Source: S O News service | By Staff Correspondent | Published on 17th February 2017, 11:45 PM | Coastal News | Incidents | Don't Miss |

ಭಟ್ಕಳ: ಇಲ್ಲಿನ ಆಝಾದ್ ನಗರದ ನಿವಾಸಿಯೊಬ್ಬ ತನ್ನ ಮನೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಅನುಮಾನ ಉಂಟಾದ ಹಿನ್ನೆಲೆಯಲ್ಲಿ ಪತ್ನಿಯನ್ನು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಪತ್ನಿಯಿಂದಲೆ ಪತಿಯ ಕೊಲೆಯಾಗಿದೆ ಎಂಬ ಸುಳಿವು ಲಭಿಸಿರುವುದಾಗಿ ತಿಳಿದುಬಂದಿದೆ. 

ಕೊಲೆಯಾದ  ವ್ಯಕ್ತಿಯನ್ನು ಮುಹಮ್ಮದ್ ನಾಸಿರ್ ಖಲಿಫಾ ಮಸ್ತಾನ್(೩೫) ಎಂದು ಗುರುತಿಸಲಾಗಿದೆ. ಈತ ಮೊದಲ ಹೆಂಡತಿಯ ಅನುಮತಿಯಿಲ್ಲದೆ ಎರಡನೇ ಮದುವೆಯಾಗಿದ್ದು, ಎರಡನೇ ಮದುವೆಗೆ ಸಂಬಂಧಿಸಿದಂತೆ ಆಗಾಗ ಪತಿಪತ್ನಿಯರಲ್ಲಿ ತಕಾರಾರು ಸಂಭವಿಸುತ್ತಿದ್ದು ಇಂದು ತನ್ನ ಗಂಡ ಮನೆಯಲ್ಲಿ ಮಲಗಿಕೊಂಡಿರಬೇಕಾಗಿದೆ ತನ್ನ ದುಪ್ಪಟದಿಂದ ಬಲವಾಗಿ ಕುತ್ತಿಗೆಗೆ ಸುತ್ತಿ ಅದರಿಂದ ಪತಿಯನ್ನು ಕೊಂದಿರುವುದಾಗಿ ಪೊಲೀಸರೆದರು ರೇಷ್ಮಾ ಖಾನಂ ಎಂಬಾಕೆ ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. 
ಈ ಪ್ರಕರಣವನ್ನು ಆತ್ಮಹತ್ಯೆ ಎಂದೇ ಪರಿಗಣಿಸಲಾಗಿತ್ತಾದರೂ ನಂತರ ಇದು ಆತ್ಮಹತ್ಯೆಯಲ್ಲಿ ಕೊಲೆಯಾಗಿರಬಹುದು ಎಂಬ ಬಲವಾದ ಶಂಕೆ ಸಾರ್ವಜನಿಕರು ಹಾಗೂ ಇಲ್ಲಿನ ವಿವಿಧ ಸಾಮಾಜಿಕ ಸಂಘಟನೆಗಳ ಮುಖಂಡರು ವ್ಯಕ್ತಪಡಿಸಿದ್ದರಿಂದ ಪೊಲೀಸರು ಕೊಲೆಯಾದ ನಾಸಿರ್ ಮೊದಲ ಪತ್ನಿಯನ್ನು ಕರೆದು ವಿಚಾರಿಸಿದಾಗ ಸತ್ಯ ಹೊರಬಂದಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಕರಣವನ್ನು ದಾಖಲಿಸಿಕೊಂಡ ನಗರಠಾಣಾ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. 
 

Read These Next

ಭಟ್ಕಳದಲ್ಲಿ ಮೇಲೇಳದೇ ಮಲಗಿದ ರಿಯಲ್ ಎಸ್ಟೇಟ್ ದಂಧೆ; ದುಬೈ ದುಡ್ಡು ಮೊದಲಿನಂಗಿಲ್ಲ; ಜಾಗ ಖರೀದಿ ಬರಕತ್ತಲ್ಲ!

ನೋಟ್ ಬ್ಯಾನ್ ದೇಶದ ಆರ್ಥಿಕತೆಯ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಿದೆ ಎಂದು ಇತ್ತಿತ್ತಲಾಗಿ ಆರ್ಥಿಕ ತಜ್ಞರೇ ದೊಡ್ಡ ದನಿಯಲ್ಲಿ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...