ಯಶಸ್ವಿಯಾದ ರಕ್ತದಾನ ಶಿಬಿರ

Source: so news | Published on 8th December 2019, 11:46 PM | Coastal News | Don't Miss |

 

ಭಟ್ಕಳ: ಭಟ್ಕಳ ವೆಲ್ಪೇರ ಆಸ್ಪತ್ರೆ, ಭಟ್ಕಳ ಸರಕಾರಿ ಆಸ್ಪತ್ರೆ ಹಾಗೂ ಉಡುಪಿ ಸರಕಾರಿ ಆಸ್ಪತ್ರೆ ಬ್ಲಕ್ ಬ್ಯಾಂಕ್ ಸಹಯೋಗದಲ್ಲಿ  ‘ಭಟ್ಕಳ ವೆಲ್ಪೇರ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.

ಶಿಬಿರದ ಉದ್ಘಾಟನೆಯನ್ನು ಭಟ್ಕಳ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿ, ``ರಕ್ತದಾನವು ಓರ್ವ ವ್ಯಕ್ತಿಯನ್ನು ಆರೋಗ್ಯವಾಗಿರಿಸುತ್ತದೆ. ಹಾಗೂ ಒಂದು ಘಟಕದ ರಕ್ತವು ಮೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಲಿದ್ದು ನಾವುಗಳು ಹೀಗೆ ಮುಂದುವರೆದು ಜೀವಗಳನ್ನು ಉಳಿಸಬೇಕು’ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಭಟ್ಕಳ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಅವರು ರಕ್ತದಾನ ಮಾಡಿದರು ಹಾಗೂ ಮಾತನಾಡಿದ್ದು ‘ನಾವು ಇತರರಿಗೆ ಸಾಧ್ಯವಾದಷ್ಟು ರಕ್ತದಾನ ಮಾಡಲು ಮುಂದೆ ಬರಬೇಕು ಆ ಮೂಲಕ ಒಂದು ಜೀವವನ್ನು ಉಳಿಸಬೇಕು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಬ್ಲಡ್ ಬ್ಯಾಂಕ್ ಉಡುಪಿ ಆಡಳಿತ ಅಧಿಕಾರಿ ಡಾ. ವೀಣಾ,  ವೆಲ್ಫೇರ ಆಸ್ಪತ್ರೆ ವೈದ್ಯ ಡಾ. ಮೊಹಮ್ಮದ್ ರಫೀಕ್, ಸೈಯದ್ ಅಬ್ದುಲ್, ಖಾದೀರ, ಅಬ್ದುಲ್ ಅಲಾ ಬರ್ಮಾವರ, ಯೂನಿಸ ರುಕ್ನುದ್ದೀನ್, ನಜೀರ ಖಾಸೀಂ ಜೀ, ಇಕ್ಬಾಲ್ ಸುಹೇಲ್, ಡಾ.ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಉಪಾಧ್ಯಕ್ಷ ಸೈಯದ್ ಸಲುಹುದ್ದೀನ್ ಎಸ್.ಕೆ., ಮುಂತಾದವರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...