ಭಟ್ಕಳ: ಸಂಘಪರಿವಾರದಿಂದ ಕೋಮು ಪ್ರಚೋದನೆ; ತಂಝೀಮ್ ಆರೋಪ

Source: sonews | By Staff Correspondent | Published on 25th September 2017, 10:38 PM | Coastal News | State News | Don't Miss |

ಭಟ್ಕಳ: ಪುರಸಭೆ ಅಂಗಡಿ ಮಳಿಗೆ ಕಬ್ಜಾ ವಿಚಾರದಲ್ಲಿ ಮುಸ್ಲಿಮರ ಹಾಗೂ ತಂಝೀಮ್ ಸಂಸ್ಥೆಯ ವಿರುದ್ಧ ಹಿಂದೂ ಬಾಂಧವರಲ್ಲಿ ಕೋಮುದ್ವೇಶದ ಭಾವನೆ ಉಂಟು ಮಾಡಿ ರಾಜಕೀಯ ಲಾಭ ಗಳಿಸಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ಮಜ್ಲಿಸೆ ಇಸ್ಲಾಹ್ ತಂಝಿಮ್ ಸಂಸ್ಥೆ ಆರೋಪಿಸಿದೆ. 
ಸೋಮವಾರ ತಂಝೀಮ್ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅಧ್ಯಕ್ಷ ಮುಝಮ್ಮಿಲ್ ಕಾಝೀಯಾ, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಖರೂರಿ,  ಪುರಸಭೆಯ ಅಂಗಡಿಗಳ ಸಮಸ್ಯೆಯನ್ನು ನೆಪವಾಗಿಟ್ಟು ಕೊಂಡು ಸಂಘಪರಿವಾರದ  ನಾಯಕರಿಂದ ಭಟ್ಕಳದಲ್ಲಿ ಹಿಂದು ಮುಸ್ಲಿಮರ ನಡುವೆ ಕೋಮು ಭಾವನೆಯನ್ನು ಕೆರಳಿಸುವ ಪ್ರಯತ್ನ ಮಾಡುತ್ತಿರುವುದನ್ನು ಮಜ್ಲಿಸೆ ಇಸ್ಲಾಹೊ ತನ್‌ಝೀಮ್ ತೀವ್ರವಾಗಿ ಖಂಡಿಸುತ್ತದೆ. ಪುರಸಭೆಯ ಆಡಳಿತಾತ್ಮಕ ಹಾಗು ಕಾನೂನಿಗೆ ಸಂಬಂಧ ಪಟ್ಟ ಸಮಸ್ಯೆಯಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರು ಹಾಗು ಮಜ್ಲಿಸೆ ಇಸ್ಲಾಹೊ ತಂಝೀಮ್ ಸಂಸ್ಥೆಯನ್ನು ಎಳೆದು ತರುವುದು ಹಾಗು ಇದರೊಂದಿಗೆ ಮುಸ್ಲಿಮರ ಧಾರ್ಮಿಕ ಪಾಠಶಾಲೆಗಳಾದ ಮದ್ರಸಗಳನ್ನು ಬಾಂಬ್ ಉತ್ಪಾದಿಸುವ ಕಾರ್ಖಾನೆಗಳೆಂದು ಸಾರುವುದು, ತಂಝೀಮ್ ಸಂಸ್ಥೆಯನ್ನು ಗುರಿಯಾಗಿಸುವುದು ಸಂಘ ಪರಿವಾರದ ಮುಸ್ಲಿಮ್ ವಿರೋಧಿ ನಿಲುವಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರದ ದುರಾಸೆಗಾಗಿ ಬಿ.ಜೆ.ಪಿ., ಮತ್ತು ಸಂಘ ಪರಿವಾರಗಳು ತಮ್ಮೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಕರಾವಳಿ ಪ್ರದೇಶದಲ್ಲಿ ಶಾಂತಿಯನ್ನು ಕದಡಿ ಪರಸ್ಪರರಲ್ಲಿ ವಿಷಬೀಜ ಬಿತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಾಗಿರುತ್ತದೆ. ಬಿ.ಜೆ.ಪಿ. ನಾಯಕರುಗಳ ಬಹಿರಂಗ ಹೇಳಿಕೆಗಳು ಇದಕ್ಕೆ ಪುಷ್ಠಿ ನೀಡುತ್ತಿವೆ. ಬಿ.ಜಿ.ಪಿ. ಯ ನಾಯಕರುಗಳು ಬಹುಸಂಖ್ಯಾತ ಹಿಂದು ಬಾಂಧವರನ್ನು ಉದ್ದೇಶಿಸಿ  “ಭಟ್ಕಳದಲ್ಲಿ ಹಿಂದುಗಳ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ, ಅವರ ಜೀವನವನ್ನು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ ಹಾಗು ಅವರನ್ನು ಭಟ್ಕಳದಿಂದ ಓಡಿಸುವ ಸಂಚು ನಡೆಯುತ್ತಿದೆ” ಎನ್ನುವ ಉದ್ರೇಕಕಾರಿ ಹೇಳಿಕೆಗಳಿಂದ ಹಿಂದೂ ಬಾಂಧವರ ಬಾವನೆಗಳನ್ನು ಕೆರಳಿಸಿ ಕೋಮು ಸಂಘರ್ಷಕ್ಕೆ ನಾಂದಿ ಹಾಡುವ ಪ್ರಯತ್ನ ನಡೆಯುತ್ತಿದೆ.ಇದರಿಂದಾಗಿ ಭಟ್ಕಳದ ಹೊರಗೆ ವಾಸಿಸುವ ನೆರೆಕರೆಯವರಿಗೆ ವಿಷೇಶವಾಗಿ ಮುಸ್ಲಿಮೇತರರಿಗೆ ಭಟ್ಕಳದಲ್ಲಿ ಮುಸ್ಲಿಮೇತರರ ಮೇಲೆ ದೌರ್ಜನ್ಯವೆಸಗಲಾಗುತ್ತಿದೆ ಎನ್ನುವ ಸಂದೇಶ ರವಾನೆಯಾಗುತ್ತಿದೆ. 
೧೯೯೩ ರಲ್ಲಿ ಭಟ್ಕಳದಲ್ಲಿ ಕೋಮುಗಲಭೆಯನ್ನು ಸೃಷ್ಟಿಸಿದ್ದು ಈಗ ಮತ್ತೆ ಅದೇ ತಂತ್ರವನ್ನು ಬಳಸಿ ರಾಜಕೀಯ ಲಾಭಗಳಿಸುವ ಹುನ್ನಾರ ನಡೆಸುತ್ತಿದೆ ಎಂದು ತಂಝೀಮ್ ಮುಖಂಡರು ಆರೋಪಿಸಿದರು.  
ಪುರಸಭೆಯ ಅಂಗಡಿಗಳ ಸಮಸ್ಯೆಯು ಅಕ್ಷರಶಃ ಕಾನೂನಿಗೆ ಒಳಪಟ್ಟುದು ಹಾಗು ಆಡಳಿತಾತ್ಮಕ ಸಮಸ್ಯೆಯಾಗಿರುತ್ತದೆ. ಇದನ್ನು ತನ್‌ಝ್ಝೀಮ್ ಹಾಗು ಮುಸ್ಲಿಮರೊಂದಿಗೆ ಜೋಡಿಸುವುದು ಕೇವಲ ಮುಸ್ಲಿಮ್ ವಿರೋಧಿ ನಿಲುವು ಹಾಗು ದುರ್ಬುಧ್ಧಿಯಿಂದ ಕೂಡಿದ್ದಾಗಿರುತ್ತದೆ ವಿನಹ ಬೇರೇನೂ ಅಲ್ಲ. ಪ್ರಸ್ತುತ ಅಂಗಡಿಕಾರರಲ್ಲಿ ಮುಸ್ಲಿಮರೂ ಹಿಂದುಗಳೂ ಎರಡೂ ವರ್ಗದ ಜನರಿರುತ್ತಾರೆ. ರಾಮಚಂದ್ರ ನಾಯ್ಕರ ಮರಣದ ಬಗ್ಗೆ ನಮಗೆಲ್ಲರಿಗೂ ದುಖಃವಿದೆ. ಇದು ಒಂದು ದೊಡ್ಡ ದುರಂತವಾಗಿದೆ. ನಮ್ಮ ಅನುಕಂಪ ಅವರ ಕುಟುಂಬದೊಂದಿಗೆ ಎಂದು ಅಧ್ಯಕ್ಷ ಮುಜಮ್ಮಿಲ್ಲ ಕಾಝಿಯಾ ತಿಳಿಸಿದರು. 
ಈ ಸಂದರ್ಭದಲ್ಲಿ ಕಾರ್ಯದರ್ಶಿ ಸೈಯ್ಯದ್ ಯಾಸಿರ್ ನದ್ವಿ ಬರ್ಮಾವರ್, ಡಿ.ಎಫ್ ಸಿದ್ದೀಖ್, ಸನಾವುಲ್ಲಾ ಗವಾಯಿ, ಉಪಾಧ್ಯಕ್ಷ ಎಸ್.ಎಂ.ಸೈಯ್ಯದ್ ಅಬುಲ್ ಖಾಸಿಮ್, ಸೈಯ್ಯದ್ ಮುಹಿದ್ದೀನ್ ಬರ್ಮಾವರ ಮತ್ತಿತರರು ಉಪಸ್ಥಿತರಿದ್ದರು. 

Read These Next

ಹನೂರು: ಇಂಡಿಗನ ಮತಗಟ್ಟೆ ಮೇಲೆ ಕಲ್ಲು ತೂರಾಟ, ಇವಿಎಂಗೆ ಹಾನಿ ತಹಶೀಲ್ದಾರ್, ಇನ್‌ಸ್ಪೆಕ್ಟರ್, ಚುನಾವಣಾಧಿಕಾರಿ ಸಹಿತ ಹಲವರಿಗೆ ಗಾಯ

ಮಹದೇಶ್ವರ ಬೆಟ್ಟ ಸಮೀಪದ ಇಂಡಿಗನತ್ತ ಮೆಂದಾರೆ ಮತಗಟ್ಟೆ ಬಳಿ ಮತದಾನ ನಡೆಯುವ ಬದಲು ರಣರಂಗವಾಗಿ ಮಾರ್ಪಟ್ಟು ಮತಗಟ್ಟೆ ಸಂಪೂರ್ಣ ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...