ಭಟ್ಕಳ: ಪಿಎಸ್‍ಐ (ಸಿವಿಲ್) ಪರೀಕ್ಷೆಯಲ್ಲಿ ಮುಷಾಹಿದ್ ತೇರ್ಗಡೆ; ದೇಶಸೇವೆಗೆ ಸಿಕ್ಕ ಸದಾವಕಾಶದ ಸದ್ಬಳಕೆಯ ತುಡಿತ

Source: sonews | By Staff Correspondent | Published on 1st September 2019, 11:57 PM | Coastal News | Don't Miss |

ಭಟ್ಕಳ: ಇಲ್ಲಿನ ಹುರುಳೀಸಾಲ್  ನಿವಾಸಿ ಮುಷಾಹಿದ್ ಅಹ್ಮದ್ ಶೇಖ್ ಪಿಎಸ್‍ಐ ಸಿವಿಲ್ ಪರೀಕ್ಷೆ 2018 ರಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡಿದ್ದು ದೇಶಸೇವೆಗೆ ಸಿಕ್ಕ ಸದಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಪಿಎಸ್‍ಐ ಹುದ್ದೆ ಅಲಂಕರಿಸಲಿರುವ ನವಾಯತ್ ಸಮುದಾಯ ಪ್ರಥಮ ಯುವಕ ಎಂಬ ಹೆಗ್ಗಳಿಕೆ ಪಾತ್ರನಾಗಿರುವ ಮುಷಾಹಿದ್ ಆಹ್ಮದ್ ಪೊಲೀಸ್ ಸೇವೆಯ ತರಬೇತಿಗಾಗಿ ಮೈಸೂರಿಗೆ ಪ್ರಯಣಿಸಲಿದ್ದಾರೆ. 

ಐದು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೊಹಮ್ಮದ್ ಹನೀಫ್ ಶೇಖ್ ಅವರ ಪುತ್ರ ಮುಷಾಹಿದ್ ಅಹ್ಮದ್ ಬೆಂಗಳೂರಿನಿಂದ ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿ ಪಡೆದ ನಂತರ 2017 ರಲ್ಲಿ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಂತಿಮ ಹಂತವನ್ನು ತಲುಪಿದ್ದರು.

ಇಲ್ಲಿನ ಪ್ರತಿಷ್ಟಿತ ಶಮ್ಸ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ, ನೌನಿಹಾಲ್ ಸೆಂಟ್ರಲ್ ಸ್ಕೂಲ್ ಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿದ ಇವರು ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣವನ್ನು ಪಡೆದು ನಂತರ  ಬ್ಯಾಚುಲರ್ ಆಫ್ ಆರ್ಕಿಟೆಕ್ ನಲ್ಲಿ ಪದವಿಯನ್ನು ಪಡೆದುಕೊಂಡಿದ್ದಾರೆ. 

ಜನರಲ್ ಮೆರಿಟ್ ಆಧಾರದ ಮೇಲೆ ಮುಷಾಹಿದ್ ಪಿಎಸ್ಐಸಿ ಸಿವಿಲ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾರೆ. ಮತ್ತು ಕರ್ನಾಟಕ ರಾಜ್ಯದಲ್ಲಿ ಇದು ಎರಡನೇ ಬಾರಿಗೆ ಜನರಲ್ ಮೆರಿಟ್ ಆಧಾರದ ಮೇಲೆ ಮುಸ್ಲಿಂ ವಿದ್ಯಾರ್ಥಿಯನ್ನು ಆಯ್ಕೆ ಮಾಡಲಾಗಿದೆ. ಎಂದು ಅವರ ಸಹೋದರ ಉರಗತಜ್ಞ  ಮಿಸ್ಬಾ ಉಲ್ ಹಖ್ ಮಾಹಿತಿ ನೀಡಿದ್ದಾರೆ. 2018 ರಲ್ಲಿ ಎಂಟು ಸ್ಥಾನಗಳನ್ನು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿತ್ತು, ಆದರೆ ಮುಷಾಹಿದ್ ಉತ್ತಮ ಅಂಕಗಳೊಂದಿಗೆ ಜನರಲ್ ಮೆರಿಟ ಪಡದುಕೊಂಡಿದ್ದಾಗಿ ಅವರು ತಿಳಿಸುತ್ತಾರೆ.  

ಇವರ ಸಾಧನೆಗಾಗಿ ಐಎಎಸ್ ಅಕಾಡೆಮಿ ಧಾರವಾಡ್ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿ, ಧಾರವಾಡ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ಸಮ್ಮುಖದಲ್ಲಿ ಗೌರವಿಸಿ ಸ್ಮರಣಿಕೆಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬೇಕು. 

2018 ರಲ್ಲಿ ಅವರು ಕೆಎಎಸ್‍ನ ಮ್ಯಾನಾರಿಟಿ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಪ್ರಥಮ ಯಾರ್ಂಕ್ ಪಡೆದು ಯುಪಿಎಸ್‍ಸಿ ವಿದ್ಯಾರ್ಥಿವೇತನಕ್ಕೆ 16 ನೇ ಯಾರ್ಂಕ್ ಪಡೆದರು, ಅದರ ಆಧಾರದ ಮೇಲೆ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ತರಬೇತಿಯನ್ನು ಪಡೆಯಲು ಆಯ್ಕೆಗೊಂಡಿದ್ದರು ಎನ್ನಲಾಗಿದ್ದು ತಮ್ಮ ತರಬೇತಿಗಾಗಿ ಬೆಂಗಳೂರು ಯುನಿವರ್ಸಲ್ ಕೋಚಿಂಗ್ ಸೆಂಟರ್ ಅನ್ನು ಆಯ್ಕೆ ಮಾಡಿಕೊಂಡು ಉತ್ತಮ ತರಬೇತಿಯೊಂದಿಗೆ ಪಿಎಸ್ಐ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದರು.

ಪಿಎಸ್‍ಐ ಹುದ್ದೆ ಅಲಂಕರಿಸುತ್ತಿರುವ ಮೊದಲ ನವಾಯತಿಗೆ ಎಂಬ ಹೆಗ್ಗಳಿಕೆಗೆ ಪಾತ್ರ: ಪಿ.ಎಸ್.ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಯಾತ್ ಸಮುದಾಯದ ಮೊದಲ ಯುವಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿರುವ ಮುಷಾಹಿದ್ ಅವರ ಮಹತ್ವದ ಸಾಧನೆಯು ಮುಸ್ಲಿಮ್ ಸಮುದಾಯಕ್ಕೆ ಮಾತ್ರವಲ್ಲದೆ ಎಲ್ಲಾ ಸಮುದಾಯಗಳಿಗೂ ಮಾದರಿಯಾಗಲಿದೆ.  ಈ ಮಹತ್ವದ ಸಾಧನೆಗಾಗಿ ತಝೀಮ್ ಸಂಸ್ಥೆ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳು ಮುಖ್ಯಸ್ಥರು ಅಭನಂದಿಸಿದ್ದಾರೆ. 

ಈ ಯುವಕನ ಯಶಸ್ಸಿನ ನಂತರ, ಭಟ್ಕಳದ ಇತರ ಯುವಕರು ಸಹ ಈ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ ಮತ್ತು ರಾಜ್ಯದ ಜೊತೆಗೆ ರಾಷ್ಟ್ರಕ್ಕೂ ತಮ್ಮ ಸೇವೆಗಳನ್ನು ಒದಗಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ.
 

Read These Next

ಕುಂದಾಪುರ: ತಾಯಿಯ ಕೊಳೆತ ಮೃತದೇಹದೊಂದಿಗೆ 3 ದಿನ ಕಳೆದ ವಿಕಲಚೇತನ ಮಗಳು – ಆಸ್ಪತ್ರೆಯಲ್ಲಿ ನಿಧನ

ಮನೆಯಲ್ಲೇ ಮೃತಪಟ್ಟು ಕೊಳೆತ ಸ್ಥಿತಿಯಲ್ಲಿದ್ದ ತಾಯಿಯ ಮೃತದೇಹದ ಜೊತೆ ಅನ್ನಾಹಾರ ಇಲ್ಲದೇ ಮೂರು ನಾಲ್ಕು ದಿನ ಕಳೆದ 32ರ ಹರೆಯದ ...

ರಸ್ತೆಯಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮರಾ ಕಣ್ಗಾವಲು

ಸ್ಥಳೀಯ ಜನರ ಸಹಕಾರದಿಂದ ಹನೀಫಾಬಾದ್ ರಸ್ತೆಯಲ್ಲಿ ಮೂರು, ಜಾಮಿಯಾಬಾದ್ ರಸ್ತೆಯಲ್ಲಿ ಮೂರು, ಮಿನಾ ರಸ್ತೆಯಲ್ಲಿ ಒಂದು ಕ್ಯಾಮೆರಾ ...

ರಾಷ್ಟಿಯ ಹೆದ್ದಾರಿ ಕಾಮಗಾರಿಗಳನ್ನು ನಿಗದಿತ ಯೋಜನೆಯಂತೆ ಪೂರ್ಣಗೊಳಿಸಿ - ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಜಿಲ್ಲೆಯಲ್ಲಿ ಹಾದು ಹೋಗಿರುವ ಚತುಷ್ಪತ ರಾಷ್ಟಿಯ ಹೆದ್ದಾರಿಯ ಕಾಮಗಾರಿಯಲ್ಲಿ , ಉದ್ದೇಶಿತ ಯೋಜನೆಯಲ್ಲಿ ತಿಳಿಸಿರುವ ಎಲ್ಲಾ ...