ಭಟ್ಕಳ:ಕೋಳಿ ಅಂಗಡಿಗಳಲ್ಲಿ ಸಂಗ್ರಹವಾದ ತ್ಯಾಜ್ಯಗಳ ವಿಲೇವಾರಿಗೆ ಪುರಸಭೆಯಿಂದ ಪ್ರತಿದಿನ 200 ರೂಪಾಯಿ ನಿಗದಿ

Source: so news | By MV Bhatkal | Published on 12th June 2021, 1:56 PM | Coastal News | Don't Miss |

ಭಟ್ಕಳ: ಪಟ್ಟಣ ಕೋಳಿ ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳ ವಿಲೇವಾರಿಗೆ ಪುರಸಭೆಯವರು ಪ್ರತಿದಿನ 200 ರೂಪಾಯಿ ನಿಗದಿ ಮಾಡಿರುವ ಬಗ್ಗೆ ಕೋಳಿ ಅಂಗಡಿ ಮಾಲಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ‌.

ಪಟ್ಟಣದಲ್ಲಿ ಉತ್ಪತ್ತಿಯಾಗುವ  ಕೋಳಿ‌ ಅಂಗಡಿಗಳ ತ್ಯಾಜ್ಯಗಳನ್ನು ಪುರಸಭೆಯವರು ಪ್ರತಿ ಅಂಗಡಿಗೆ ರೂಪಾಯಿ 1500 ದರ ನಿಗದಿ ಮಾಡಿ ಸಾಗರ ರೋಡನಲ್ಲಿರುವ ಘನತ್ಯಾಜ್ಯ ಘಟಕಕ್ಕೆ ಹಾಕುತ್ತಿದ್ದರು. ಕೆಲವೊಂದು ಸಾರಿ ಅಂಗಡಿ ಮಾಲಿಕರು ತ್ಯಾಜ್ಯ ಸಂಗ್ರಹ ಮಾಡುವ ವಾಹನಗಳಿಗೆ ಕೋಳಿ ತ್ಯಾಜ್ಯ ನೀಡದೆ ವೆಂಕ್ಟಾಪುರ ನದಿಗಳಿಗೆ  ಎಸೆದು ಬಂದ ಘಟನೆಗಳು ನಡೆದಿದ್ದವು. ಕಳೇದ ಆರು ತಿಂಗಳ ಹಿಂದೆ ಉಡುಪಿ ಡಿಸೋಜಾ ಕಂಪೆನಿಯವರು ತಾಲ್ಲೂಕಿನಲ್ಲಿ ಉತ್ಪತ್ತಿಯಾಗುವ ಕೋಳಿ ತ್ಯಾಜ್ಯಗಳನ್ನು ಸಂಗ್ರಹಿಸಿ ಪ್ರಾಣಿ ಅಹಾರ ತಯಾರಿಕೆಗೆ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ಪುರಸಭೆ, ಪಟ್ಟಣ ಪಂಚಾಯತ್ ನವರಿಗೂ ತ್ಯಾಜ್ಯ ವಿಲೇವಾರಿಯ ಭಾರ ಕಡಿಮೆಯಾಗಿ ನೆಮ್ಮದಿಯಿಂದ ಇದ್ದರು. 

ಏಕಾಎಕಿ ಸಂಗ್ರಹಣೆ ನಿಲ್ಲಿಸಿದ ಡಿಸೋಜಾ ಕಂಪೆನಿ: ಭಟ್ಜಳದಿಂದ ಕೋಳಿ ತ್ಯಾಜ್ಯ ಸಂಗ್ರಹಿಸುತ್ತಿದ್ದ ಡಿಸೋಜಾ ಕಂಪೆನಿಯ ವಾಹನ ಲಾಕಡೌನ ಸಮಯದಲ್ಲಿ ಭಟ್ಕಳಕ್ಕೆ ಬರಲಿಲ್ಲ. ಡಿಸೇಲ ದರ ನೆಪವೊಡ್ಡಿ ಕೋಳಿ ತ್ಯಾಜ್ಯ ಸಂಗ್ರಹಣೆ ನಿಲ್ಲಿಸಿದ ಡಿಸೋಜಾ ಕಂಪೆನಿ ವಾಹನ ಸಾಗಾಣೆ ವೆಚ್ಚ ನೀಡಿದರೆ ತ್ಯಾಜ್ಯ ಸಂಗ್ರಹಿಸುವುದಾಗಿ ತಿಳಿಸಿತು. ಕಳೆದೊಂದು ತಿಂಗಳಿನಿಂದ ಕೋಳಿ ತ್ಯಾಜ್ಯ ಸಮರ್ಪಕ   ವಿಲೇವಾರಿ ಮಾಡಲು ಸಾಧ್ಯವಾಗದ ಕಾರಣ ಪುರಸಭೆ ಶುಕ್ರವಾರ ಕೋಳಿ ಅಂಗಡಿ ಮಾಲಿಕರ ಸಭೆ ಕರೆದು ಕೋಳಿ ತ್ಯಾಜ್ಯ ವಿಲೇವಾರಿಗೆ ಪ್ರತಿ ದಿವಸ 200 ರೂಪಾಯಿ ನೀಡುವಂತೆ ತಿಳಿಸಿದ್ದಾರೆ.

ತಿಂಗಳಿಗೆ 6 ಸಾವಿರ ನೀಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೋಳಿ ಅಂಗಡಿ ಮಾಲಿಕರು  ಕೋವಿಡ್ ನಂತಹ ಸಂಕಷ್ಟ ಸಮಯದಲ್ಲಿ ಪ್ರತಿದಿವಸ 200 ರೂಪಾಯಿ ಲಾಭವಾಗದಿದ್ದರೂ ಪುರಸಭೆಗೆ 200 ರೂಪಾಯಿ ಕಟ್ಟಬೇಕು. ನಮ್ಮ ಹಣದಿಂದಲೇ ಅವರು ತ್ಯಾಜ್ಯ ತೆಗೆದಕೊಂಡು ಅವರು ಲಾಭ ಗಳಿಸುವುದಾದರೆ ನಮ್ಮ ಪಾಡೇನು. ತಿಂಗಳಿಗೆ 1500 ಬದಲಿಗೆ 6000 ನೀಡುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ದೇವರಾಜು ಮಾತನಾಡಿ ಭಟ್ಜಳದಿಂದ ಕೋಳಿ ತ್ಯಾಜ್ಯ ಸಂಗ್ರಹಣೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದ ಉಡುಪಿಯವರು ಸಾಗಾಣಿಕೆ ವೆಚ್ಚ ನೀಡುವಂತೆ ಕಳೆದೊಂದು ತಿಂಗಳನಿಂದ ತ್ಯಾಜ್ಯ ತೆಗೆದುಕೊಂಡು ಹೋಗುತ್ತೀಲ್ಲ. ಈಗ ಪುನಃ ಅವರ ಜೊತೆ ಮಾತನಾಡಿ ಅಂಗಡಿಕಾರರಿಂದ ಫೀ ವಸೂಲಿ ಮಾಡಿ ಅವರ ಸಾಗಾಣಿಕೆ ವೆಚ್ಚ ನೀಡಲು ನಿರ್ಧರಿಸಿದ್ದೇವೆ.ಅದರ ಮಾಹಿತಿ ಕೂಡ ಕೋಳಿ ಅಂಗಡಿಕಾರರ ಸಭೆ ಕರೆದು ತಿಳಿಸಲಾಗಿದೆ.

ಕೋಳಿ ಅಂಗಡಿ ಮಾಲಿಕ ಸರ್ಪರಾಜ ಅಹ್ಮದ ಮಾತನಾಡಿದ ಪುರಸಭೆ, ಜಾಲಿ ಪಟ್ಟಣ ವ್ಯಾಪ್ತಿಯಲ್ಲಿ 40 ಕೋಳಿ ಅಂಗಡಿಗಳಿದೆ. ಪುರಸಭೆಯವರು ಒಂದು ದಿನಕ್ಕೆ 200 ಫೀ ತ್ಯಾಜ್ಯಕ್ಕೆ ನೀಡಿ ಎಂದರೆ ನಾವು ಅಂಗಡಿ ಬಾಡಿಗೆ, ಕೆಲಸದವರ ಸಂಬಳ ತೆಗಯುವುದಾದರೂ ಹೇಗೆ. ವ್ಯಾಪಾರವಿಲ್ಲದ ಸಮಯದಲ್ಲಿ ಪ್ರತಿದಿವಸ 200 ನೀಡುವುದು ಸಾಧ್ಯವಿಲ್ಲ. ಪುರಸಭೆ ಇರದ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು ಎಂದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...