ಅಂಗವಿಕಲರ ದಿನಾಚರಣೆಯನ್ನು ಕಾಲ್ಪನಿಕವಾಗಿ ಆಚರಿಸದೆ ಸುವ್ಯವಸ್ಥಿತ ವ್ಯವಸ್ಥೆ ಕಲ್ಪಿಸಬೇಕೆಂದು ಜಿಲ್ಲಾ ಘಟಕದಿಂದ ಸಿಎಂ ಗೆ ಮನವಿ’

Source: so news | Published on 5th December 2019, 12:46 AM | Coastal News | Don't Miss |

 

ಭಟ್ಕಳ: ವಿಶ್ವ ಅಂಗವಿಕಲರ ದಿನಾಚರಣೆಯನ್ನು ಕಾಲ್ಪನಿಕವಾಗಿ ಆಚರಿಸದೆ ಸುವ್ಯವಸ್ಥಿತವಾಗಿ ನಡೆಸಿದ್ದಲ್ಲಿ ಅಂಗವಿಕಲರು ಸ್ವಾವಲಂಬಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡುವುದರ ಕುರಿತು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ  ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಬೆಂಗಳುರು, ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಮಟಾ ಇವರ ವತಿಯಿಂದ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.

ಪ್ರತಿ ವರ್ಷವೂ ಡಿಸೆಂಬರ್ 3 ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆ ದಿನ ಮಾತ್ರ ಅಂಗವಿಕಲರ ಬಗ್ಗೆ ಚಿಂತಿಸುವ ಸರ್ಕಾರ ಮಾನವೀಯ ದೃಷ್ಟಿಯಲ್ಲಿ ಬದುಕಲು ಅವಕಾಶ ನೀಡುತ್ತಿಲ್ಲ. ಅಂಗವಿಕಲರಿಗೆ ಜನಸಾಮಾನ್ಯರಂತೆ ಬದುಕಲು ಅವಕಾಶವಿದ್ದು, ಅವರಿಗೆ ಬದುಕಲು ಅವಕಾಶ ನೀಡುತ್ತಿಲ್ಲ. ಎಷ್ಟೋ ಅಂಗವಿಕಲರು ಪೋಷಕರಿಲ್ಲದೆ ಭಿಕ್ಷೆ ಬೇಡಿ ಬದುಕಬೇಕಾದ ಪರಿಸ್ಥಿತಿ ಉಂಟಾಗಿದೆ. ಅಂಗವಿಕಲರು ಅಸಹಾಯಕರಾಗಿದ್ದರು ಸಹ ಉತ್ತಮ ಜೀವನ ನಡೆಸುವ ಮನಸ್ಸು ಅವರಲ್ಲಿರುತ್ತದೆ. ಸರ್ಕಾರ ಅಧಿಕಾರಕ್ಕಾಗಿ ದಿನಕಳೆಯದೇ ಅಂಗವಿಕಲರು ಹಾಗೂ ಹಿರಿಯ ನಾಗರಿಕರು ಉತ್ತಮ ಮಟ್ಟದ ಜೀವನ ನಡೆಸಲು ಸಹಕರಿಸಬೇಕೆಂದು ಹಲವು ಬೇಡಿಕೆಗಳನ್ನು ಪೂರೈಸಬೇಕೆಂದು ಅಂಗವಿಕಲರ ದಿನಾಚರಣೆ ಮುಖಾಂತರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಬೇಡಿಕೆಗಳಾದ:
2016 ರ ಕಾನೂನನ್ನು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಅನುಷ್ಠಾನಕ್ಕೆ ತರಲು, ಅನುಮೋದನೆ ನೀಡಲು ಸಹಕರಿಸಬೇಕು. ಅಂಗವಿಕಲರ ಮಾಸಾಶನ ಪ್ರತಿ ತಿಂಗಳು 5000/- ಹೆಚ್ಚಿಸುವುದು. ವಿದ್ಯಾರ್ಹತೆ ಹೊಂದಿರುವ ಎಲ್ಲಾ ಅಂಗವಿಕಲರಿಗೆ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಉದ್ಯೋಗ ಕಲ್ಪಿಸುವುದು. ಸರ್ಕಾರದ ಆದೇಶದಂತೆ ಅಳಿದು ಶೇ 5% ಅನುದಾನ ಎಲ್ಲ ಕ್ಷೇತ್ರದಲ್ಲಿ ಕಲ್ಪಿಸುವುದು. ಗ್ರಾಮ ಪಂಚಾಯಿತಿಯಿಂದ ಕೇಂದ್ರ ಸರ್ಕಾರದವರೆಗೆ ಅಂಗವಿಕಲರ ಚುನಾವಣೆ ಸ್ಪರ್ಧಿಸಲು ಮೀಸಲಾತಿ ಕಲ್ಪಿಸಬೇಕು. 75 ಶೇಕಡ ಕ್ಕಿಂತ ಹೆಚ್ಚಿರುವ ಅಂಗವಿಕಲರಿಗೆ ಪೋಷಣಾ ಭತ್ಯೆ ನೀಡಬೇಕು. ಬಸ್ಸು, ರೈಲ್ವೆಯಲ್ಲಿ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಮೀಸಲಿರುವ ಸ್ಥಳದಲ್ಲಿ ಕಡ್ಡಾಯವಾಗಿ ಬಳಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಂಗವಿಕಲರ ಕಲೆ, ಸಾಂಸ್ಕೃತಿಕ ಮತ್ತು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಿ ಅಂಗವಿಕಲರ ಪಾಲಿಗೆ ಬೆಳಕಾಗಬೇಕೆಂದು ಈ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.  

ಈ ಸಂಧರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಕುಮಟಾದ ಅಧ್ಯಕ್ಷ ಪ್ರವೀಣಕುಮಾರ ಆರ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಎನ್. ಗಾವಡಿ ಹಾಗೂ ಸಂಘದ ಸದಸ್ಯರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...