ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್‌ಬಿ ಎಜೆಂಟರತೆ ವರ್ತಿಸುವುದು ಸರಿಯಲ್ಲ:ರಾಜೇಶ ನಾಯಕ ಎಚ್ಚರಿಕೆ

Source: so news | By MV Bhatkal | Published on 30th January 2023, 12:12 AM | Coastal News | Don't Miss |

ಭಟ್ಕಳ:ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಮತ್ತು ಕಾಮಗಾರಿಯ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿಯವರು  ಭಟ್ಕಳ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿ ಮತ್ತು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾದೀತು ಎಂದು ರಾಷ್ಟಿಯ ಹೆದ್ದಾರಿ ಅಭಿವೃದ್ಧಿ ಸಮಿತಿಯ ಪ್ರಮುಖ ರಾಜೇಶ ನಾಯಕ ಎಚ್ಚರಿಕೆ ನೀಡಿದರು. 
ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಐಆರ್‌ಬಿ ಕಂಪೆನಿಯವರು ಭಟ್ಕಳ ಪಟ್ಟಣದಲ್ಲಿ ತರಾತುರಿಯಲ್ಲಿ ಕಾಮಗಾರಿ ಮುಗಿಸುವ ತವಕದಲ್ಲಿದ್ದಾರೆ. ಭಟ್ಕಳ ಪಟ್ಟಣದಲ್ಲಿ ಪ್ಲೆಓವರ್ ಮಾಡದೇ ಚತುಸ್ಪಥ ಹೆದ್ದಾರಿ ಕಾಮಗಾರಿ ಮಾಡಲಾಗುತ್ತಿದೆ ಎನ್ನುವ ಸುದ್ದಿ ಹಬ್ಬಿದ್ದು,ಇಲ್ಲಿ ಯಾವ ರೀತಿಯ ಕಾಮಗಾರಿ ನಡೆಸಲಾಗುತ್ತದೆ ಎನ್ನುವುದನ್ನು ಜನತೆಗೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿಯವರು ಸ್ಪಷ್ಟಪಡಿಸಬೇಕು. ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಐಆರ್‌ಬಿ ಎಜೆಂಟರAತೆ ವರ್ತಿಸುವುದು ಸರಿಯಲ್ಲ ಎಂದ ಅವರು ಭಟ್ಕಳ ಪಟ್ಟಣದಲ್ಲಿ ಚತುಸ್ಪಥ ಕಾಮಗಾರಿ ಮಾಡುವ ಸಂದರ್ಭದಲ್ಲಿ ಐಆರ್‌ಬಿಯವರು ಸರ್ವಿಸ್ ರಸ್ತೆ ಮಾಡುವುದು. ಬೀದಿ ದೀಪ ಅಳವಡಿಸುವುದು, ಮಳೆಗಾಲದ ನೀರು ಹೋಗಲು ಸಮರ್ಪಕ ಗಟಾರದ ವ್ಯವಸ್ಥೆ,  ಬಸ್ ನಿಲ್ದಾಣಕ್ಕೆ ತೆರಳಲು ಹೆದ್ದಾರಿಯಿಂದ ಪ್ರತ್ಯೇಕ ರಸ್ತೆ ವ್ಯವಸ್ಥೆ, ಬಸ್‌ನಿಲ್ದಾಣಕ್ಕೆ ಜನರು ಹೋಗಲು ಮೇಲುಸೇತುವೆ, ರೈಲ್ವೆ ನಿಲ್ದಾಣಕ್ಕೆ ಮತ್ತು ಮೂಡಭಟ್ಕಳ ಬೈಪಾಸ ಬಳಿ ಅಂಡರಪಾಸ್ ಮಾಡಿಕೊಡಬೇಕು ಹಾಗೂ ಈಗಿರುವ ರಸ್ತೆಯನ್ನು ಎತ್ತರಿಸದೇ ಇದ್ದ ಸ್ಥಿತಿಯಲ್ಲೇ ಅಗಲ ಮಾಡಿಕೊಂಡು ಹೋಗಬೇಕು ಎನ್ನುವುದು ನಮ್ಮ ಬೇಡಿಕೆ ಆಗಿದ್ದು, ಕಾಮಗಾರಿಯ ಪೂರ್ವದಲ್ಲಿ ನಮ್ಮ ಸಮಿತಿಯ ಪ್ರಮುಖರ ಜೊತೆಗೆ ಐಆರ್‌ಬಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಚರ್ಚಿಸಿ ನಮಗೆ ಕಾಮಗಾರಿ ಹೇಗೆ ನಡೆಸಲಾಗುತ್ತದೆ ಎನ್ನುವ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗೆ ಸ್ಪಂದಿಸದೇ ಕಾಮಗಾರಿಯನ್ನು ತರಾತುರಿಯಲ್ಲಿ ಮುಗಿಸಲು ಯತ್ನಿಸಿದಲ್ಲಿ  ಸಂಘ, ಸಂಸ್ಥೆಗಳು,ಸಾರ್ವಜನಿಕರೊಡಗೂಡಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದರು.
ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿಯವರು ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಭಟ್ಕಳದ ಜನರನ್ನು ನಿರ್ಲಕ್ಷö್ಯ ಮಾಡಿರುವುದು ಸರಿಯಲ್ಲ. ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳುವ ಪೂರ್ವದಲ್ಲಿ ಬೇಡಿಕೆಯ ಈಡೇರಿಸುವ ಬಗ್ಗೆ ಚರ್ಚೆ ಆಗಬೇಕು. ಜಿಲ್ಲಾಧಿಕಾರಿಯವರು ಭಟ್ಕಳದಲ್ಲಿ ಹೆದ್ದಾರಿ ಕಾಮಗಾರಿ ತರಾತುರಿಯಲ್ಲಿ ಮುಗಿಸುವುದರಿಂದ ಉಂಟಾಗುವ ಸಮಸ್ಯೆ ಬಗ್ಗೆ ತಿಳಿದು ನಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಉಪಸ್ಥಿತರಿದ್ದ ತಂಝೀ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಸಮಿತಿಯ ಪ್ರಮುಖರಾದ ಸತೀಶಕುಮಾರ ನಾಯ್ಕ, ಮೊಹ್ಮದ್ ಮೊತೆಶ್ಯಾಂ, ರುಕ್ನುದ್ದೀನ ಕ್ವಾಜಾ,ತಂಝೀ ಕಾರ್ಯದರ್ಶಿ ಅಬ್ದುಲ್ ರಖೀಬ್ ಮುಂತಾದವರು ಇದ್ದರು.ಪತ್ರಿಕಾಗೋಷ್ಟಿಯಲ್ಲಿ  ಜೈರಾಮ ಶಾನಭಾಗ, ಎಸ್ ಎಂ ಪರ್ವೇಜ್ ಮುಂತಾದವರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...