ವೀನುಗಾರ ಸಾಲ ಮನ್ನಾ ಕ್ಕೆ ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟ ದಿಂದ ಆಗ್ರಹ

Source: so news | Published on 8th October 2019, 12:51 AM | Coastal News | Don't Miss |

 

ಭಟ್ಕಳ:ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪನವರು ಪ್ರಮಾಣ ವಚನ ಸ್ವೀಕರಿಸಿದಂತೆ ಮೀನುಗಾರರು ಸಾಲ ಘೋಷಣೆ ಮಾಡಿದ್ದು ಇಲ್ಲಿವರೆಗೆ ಸಾಲ ಮನ್ನಾ ಪ್ರಕ್ರಿಯೆ ಆರಂಭವಾಗದ ಮೀನುಗಾರ ಹಾಗೂ ಸಹಕಾರಿ ಸಂಘಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಇನ್ನು ತಡಮಾಡದೆ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಭಟ್ಕಳ ತಾಲ್ಲೂಕು ಮೀನುಗಾರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ವಿಠ್ಠಲ್ ದೇವಿಮನೆ ಆಗ್ರಹಿಸಿದ್ದಾರೆ.
ಅವರು ಸತ್ಕಾರ ಹೋಟೆಲಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು.ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರರು ಹೈರಾಣಾಗಿ ಹೋಗಿದ್ದಾರೆ. ಪಡೆದ ಸಾಲವನ್ನು ತುಂಬಲಾಗದ ಅಸಹಾಯಕ ಸ್ಥಿತಿಯನ್ನು
ಅನುಭವಿಸುತ್ತಿದ್ದಾರೆ.ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸಾಲ ಮನ್ನಾ ಯೋಜನೆ ಘೋಷಣೆ ಸುತ್ತಿದ್ದತೆಯೇ ಮೀನುಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ಸಂಬಂಧ ಕಳೆದ ಆಗಸ್ಟ್ 1 ರಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಉಪಸ್ಥಿಯಲ್ಲಿ ನಡೆದ ಸಭೆಗೆ ಸಹಕಾರಿ ಸಂಘಗಳು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಪಾಲ್ಗೊಂಡಿದ್ದರು, ಸದರಿ ಸಭೆಯಲ್ಲಿ 2019 ಮಾರ್ಚ31ರ 
ಕಾಲಾವಾಧಿಯೊಗಿನ ಸಾಲಗಾರರ  ಯಾದಿಯನ್ನು ತಯಾರಿಸುವಂತೆ ತಿಳಿಸಲಾಗಿತ್ತು.ಆದರೆ ಇಲ್ಲಿವರೆಗೆ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಿಲ್ಲ ಅಲ್ಲದೆ ಸಾಲ ಮನ್ನಾ ವಿಚಾರವಾಗಿ ಸಾಮಾಜಿಕ ಜಾಲಗಳ ಸುದ್ದಿ ಹರಿದಾಡುತ್ತಿದ್ದು,ಸಾಲಗಾರರು ಸಾಲ ಮರುಪಾವತಿ  ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಇದ ರಿಂದ ಸಹಕಾರಿ ಸಂಘಗಳ ಮೇಲೆ ದುಷ್ಟಪರಿಣಾಮ  ಬೀರಿದೆ .ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಸದರು, ಎಲ್ಲರೂ ಸೇರಿ ಸರಕಾರದ ಮೇಲೆ ಒತ್ತಡ ಹೇರಿ ಜನರಿಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಸಹಕಾರಿ ಸಂಘಗಳ ಒಕ್ಕೂಟದ ಪ್ರಮುಖರಾದ ಚೋಳರಾಜ್ ರಾಜೇಶ್ ಹರಿಕಾಂತ್ ಗ್ರಾಮ ಗಣಪತಿ ಮೊಗೇರ ಮುಂತಾದವರು ಉಪಸ್ಥಿತರಿದ್ದರು.

Read These Next

ಭಟ್ಕಳದಲ್ಲಿ ಮುಂದಿನ 3 ವಾರಗಳ ಒಳಗೆ ಅಂಗಡಿಕಾರರು ವ್ಯಾಪಾರ ಪರವಾನಿಗೆ ಪತ್ರ ಪಡೆದುಕೊಳ್ಳಬೇಕು

ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ವ್ಯಾಪಾರ ಪರವಾನಿಗೆ (ಟ್ರೇಡಿಂಗ್ ಲೈಸೆನ್ಸ್) ಪತ್ರವನ್ನು ಪಡೆಯಲು 3 ವಾರಗಳ ಕಾಲಾವಕಾಶವನ್ನು ...

ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ : ವಿದ್ಯಾರ್ಥಿಗಳಿಗೆ ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

ಧಾರವಾಡ : ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ...

ನೀರಿನಾಸರೆಗಳ ಗಣತಿ : ಸೆ.23 ರಿಂದ ತರಬೇತಿ ಅಕ್ಟೋಬರ್ 25 ರೊಳಗೆ ಜಿಲ್ಲೆಯ ಗಣತಿ ಕಾರ್ಯ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಧಾರವಾಡ : ಭಾರತ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ರಾಜ್ಯದ ಜಲಸಂಪನ್ಮೂಲ ಇಲಾಖೆಯ ಸಹಯೋಗದೊಂದಿಗೆ ಸಣ್ಣ ನೀರಾವರಿ ಅಂಕಿ ಅಂಶಗಳ ...