ಅಂಗನವಾಡಿಯನ್ನು ತಟ್ಟಿದ ಮೊಟ್ಟೆ ಬೆಲೆ ಏರಿಕೆಯ ಬಿಸಿ ಮೊಟ್ಟೆ ಖರೀದಿಸಲು ಹಿಂದೇಟು ; ನೌಕರರ ಪ್ರತಿಭಟನೆ

Source: S.O. News Service | By MV Bhatkal | Published on 30th November 2017, 9:07 PM | Coastal News | Don't Miss |

ಭಟ್ಕಳ: ದಿನದಿಂದ ದಿನಕ್ಕೆ ಜನಸಾಮಾನ್ಯರ ಚಿಂತೆಗೆ ಕಾರಣವಾಗುತ್ತಿರುವ ಕೋಳಿಮೊಟ್ಟೆ ದರ ಏರಿಕೆಯ ಬಿಸಿ ಇದೀಗ ಅಂಗನವಾಡಿ ಕೇಂದ್ರಗಳನ್ನೂ ತಟ್ಟಿದೆ. ಮೊಟ್ಟೆ ದರದ ಏರಿಕೆಯಿಂದಾಗಿ ನಮಗೆ ಮೊಟ್ಟೆ ಖರೀದಿಸಲು ಕಷ್ಟವಾಗಿದೆ ಎಂದು ಅಳಲನ್ನು ತೋಡಿಕೊಂಡಿರುವ ತಾಲೂಕಿನ ಅಂಗನವಾಡಿ ನೌಕರರು ಗುರುವಾರ ಸಂಜೆ ಪ್ರತಿಭಟನೆ ನಡೆಸಿ ಭಟ್ಕಳ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.
 ಇಲ್ಲಿನ ಪ್ರವಾಸಿ ಮಂದಿರದ ಮುಂದಿನ ಆವರಣದಲ್ಲಿ ಸೇರಿದ ನೂರಾರು ನೌಕರರು ಪ್ರತಿಭಟನಾ ಮೆರವಣಿಗೆ ನಡೆಸಿ ಭಟ್ಕಳ ಸಿಡಿಪಿಓ ಮತ್ತು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು. ಸರಕಾರ ಪ್ರತಿ ಮೊಟ್ಟೆಗೆ ರು.5ರಂತೆ ನಿಗದಿ ಮಾಡಿದೆ. ಆದರೆ ಇಲ್ಲಿಯವರೆಗೆ ಅಂಗನವಾಡಿ ನೌಕರರು ಖರೀದಿಸಿದ ಮೊಟ್ಟೆಯ ಖರ್ಚಿನ ಹಣವನ್ನು ಕಾರ್ಯಕರ್ತೆಯರ ಖಾತೆಗೆ ಜಮೆ ಮಾಡಿಲ್ಲ. ಇದೂ ಸಾಲದೆಂಬಂತೆ ಮೊಟ್ಟೆಯ ದರ ಪ್ರತಿ ಮೊಟ್ಟೆಗೆ ರು.7ಕ್ಕೆ ಜಿಗಿದಿದ್ದರೂ ಸರಕಾರ ರು.5ನ್ನು ದಾಟುತ್ತಿಲ್ಲ. ಪರಿಸ್ಥಿತಿಯನ್ನು ನಿಭಾಯಿಸಲು ನಮಗೆ ಕಷ್ಟವಾಗುತ್ತಿದೆ. ನಮಗೆ ಮೊಟ್ಟೆ ಖರೀದಿ ನಿಲ್ಲಿಸದೇ ಬೇರೆ ದಾರಿಯೇ ಇಲ್ಲವಾಗಿದೆ. ಭಟ್ಕಳದಲ್ಲಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗುತ್ತಿಲ್ಲ. ಗರ್ಭೀಣಿ, ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ ಊಟಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಿದ್ಯುತ್ ಸಂಪರ್ಕದ ಹೆಸರಿನಲ್ಲಿಯೂ ನೌಕರರನ್ನು ಶೋಷಿಸಲಾಗುತ್ತಿದೆ ಎಂದು ನೌಕರರು ಅಳಲನ್ನು ತೋಡಿಕೊಂಡರು. ಅಧಿಕಾರಿಗಳು ಕುಡಿಯುವ ನೀರಿನ ಸಂಪರ್ಕ ಇರದ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು. 2015ರಲ್ಲಿ ನಡೆದ ಅಂಗನವಾಡಿ ನೌಕರರ 11 ದಿನಗಳ ಮುಷ್ಕರರ ಅವಧಿಯ ಗೌರವ ಧನವನ್ನು ಸರಕಾರ ನೌಕರರ ಖಾತೆಗೆ ಕೂಡಲೇ ಜಮೆ ಮಾಡುವಂತೆಯೂ ನೌಕರರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಭಟ್ಕಳ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಪುಷ್ಪಾವತಿ ನಾಯ್ಕ,  ಕಾರ್ಯದರ್ಶಿ ಸುಧಾ ಭಟ್, ಕವಿತಾ ನಾಯ್ಕ, ಪದ್ಮಾ ಹೊಸ್ಮನೆ, ಶಾಂತಿ ಮೊಗೇರ, ಜಯಲಕ್ಷ್ಮೀ, ಸುಧಾ ಬೆಳ್ನಿ ಮೊದಲಾದವರು ಉಪಸ್ಥಿತರಿದ್ದರು. ಭಟ್ಕಳ ಪ್ರಭಾರ ಸಿಡಿಪಿಓ ಸುಶೀಲಾ ಮೊಗೇರ ಮನವಿಯನ್ನು ಸ್ವೀಕರಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...