ಪುರಸಭೆ ಚುನಾವಣೆ; ಸೂಚಕರ ತೆರಿಗೆ ಬಾಕಿ ಕುರಿತ ಗೊಂದಲಕ್ಕೆ ಮಾಜಿ ಅಧ್ಯಕ್ಷ ಪರ್ವೇಝ್ ಕಾಸಿಮಜಿ ಆಕ್ಷೇಪ

Source: sonews | By Staff Correspondent | Published on 15th May 2019, 10:07 PM | Coastal News | Don't Miss |

ಭಟ್ಕಳ: ಭಟ್ಕಳ ಪುರಸಭೆ ಚುನಾವಣೆಯಲ್ಲಿ ಸೂಚಕರ ತೆರಿಗೆ ಬಾಕಿ ವಿಷಯಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಆಕ್ಷೇಪಿಸಿ ತಹಸಿಲ್ದಾರ್ ಎನ್.ಬಿ.ಪಾಟೀಲ್ ರೊಂದಿಗೆ ಮಾತುಕತೆ ನಡೆಸಿದ ಅವರು ಚುನಾವಣಾಧಿಕಾರಿಗಳ ನಡೆಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿದರು. 

ಪುರಸಭಾ ಚುನಔಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಸೂಚಕರ ತೆರಿಗೆ ಬಾಕಿಯ ಕುರಿತಂತೆ ನಾಮಪತ್ತ ಸಲ್ಲಿಕೆಯ ಸಂದರ್ಭದಲ್ಲಿ ಗೊಂದಲಮಯ ವಾತರವರಣ ಸೃಷ್ಟಿಯಾಗಿದ್ದು ಅಭ್ಯರ್ಥಿಪರ ಸೂಚಕರ ತೆರಿಗೆ ಪಾಪತಿ ರಶಿದಿ ಸಲ್ಲಿಸುವ ಬಗ್ಗೆ ಎಲ್ಲಿಯೂ ನಿಯಮವಿಲ್ಲ. ಅಭ್ಯರ್ಥಿಗಳಿಗೆ ಮಾತ್ರ ಇದು ಕಡ್ಡಾಯವಾಗಿದ್ದು ಚುನಾವಣ ನಿಯಮದಂತೆ ಓರ್ವ ಅಭ್ಯರ್ಥಿ 4 ಸೆಟ್ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಪ್ರತಿ ನಾಮಪತ್ರಕ್ಕೆ 4 ಸೂಚಕರಂತೆ 16 ಸೂಚಕರಾಗುತ್ತಾರೆ. ನಾಮಪತ್ರಸಲ್ಲಿಕೆ ಕೊನೆ ದಿನ ಬಾಕಿ ಇರುವಾಗ ಎಲ್ಲರ ತೆರೆಗೆ ಬಾಕಿಯನ್ನು ನೋಡಿಕೊಳ್ಳುತ್ತ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ. ತೆರಿಗೆ ಬಾಕಿಯ ವಿಷಯದಲ್ಲಿ ಪುರಸಭಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಚುನಾವಣಾ ವಿಷಯದಲ್ಲಿ ಅಧಿಕಾರಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ಕಾಶಿಮಜಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತಹಸಿಲ್ದಾರೆ ಪಾಟೀಲ್, ನಾವು ಸೂಚಕರ ತೆರಿಗೆ ಪಾವತಿ ರಶಿದಿಯನ್ನು ಪ್ರಸ್ತಾಪಿಸಿಲ್ಲ, ತೆರೆಗೆ ಪಾವತಿಯ ಸಂಬಂಧ ನಾವು ನೋಟೀಸ್ ಜಾರಿ ಮಾಡುತ್ತೇವೆ. ಮೂರು ತಿಂಗಳ ಒಳಗೆ ಬಾಕಿ ಶುಲ್ಕವನ್ನು ಪಾವತಿಸಲು ಅವಕಾಶವಿರುತ್ತದೆ ಎಂದು ಸಮಧಾನಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...