ಕೊರೊನ ಬಂದಿದೆ ಎಂದು ಭಯಪಡಬೇಕಾಗಿಲ್ಲ : ಉಪವಿಭಾಗಧಿಕಾರಿ ಈಶ್ವರ ಉಳ್ಳಾಗಡ್ಡಿ

Source: sonews | By Staff Correspondent | Published on 18th May 2020, 10:03 PM | Coastal News | Don't Miss |

ಮುಂಡಗೋಡ: ಎರಡು ಗ್ರಾಮಗಳಲ್ಲಿಯ ಇಬ್ಬರಿಗೆ ಕೊರೊನಾ ಪಾಸೀಟಿವ್ ಬಂದಿದೆ ಎಂದು ತಾಲೂಕಿನ ಜನರು ಭಯ ಪಡಬೇಕಾಗಿಲ್ಲ. ಬಡ್ಡಿಗೇರಿ ಹಾಗೂ ಶಿಡ್ಲಗುಂಡಿ ಎರಡು ಗ್ರಾಮಗಳನ್ನು  ಕಂಟೋನ್ಮೆಂಟ್ ಜೋನ್‍ಗಳನ್ನಾಗಿ ಮಾಡಲಾಗಿದೆ ಎಂದು ಶಿರಸಿ ಉಪವಿಭಾಗಧಿಕಾರಿ( ಅಸ್ಟಿಂಟ್ ಕಮೀಶ್ನರ) ಡಾ.ಈಶ್ವರ ಉಳ್ಳಾಗಡ್ಡಿ ಹೇಳಿದರು.

ಅವರು ಸೋಮವಾರ ತಹಸೀಲ್ದಾರ್ ಕಚೇರಿಯ ಸಭಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಹೊರ ಜಿಲ್ಲೆ ಮತ್ತು ರಾಜ್ಯದಿಂದ ಯಾರೆ ಬಂದರು ಅವರ ಮಾಹಿತಿಯನ್ನು ತಾಲೂಕು ಆಸ್ಪತ್ರೆಗೆ ನೀಡಬೇಕು ಬಹುತೇಕರು ಹೊರ ಭಾಗಗಳಿಂದ ಪಾಸ್ ಪಡೆಯದೆ ಹಾಗೆ ಬಂದಿರುತ್ತಾರೆ ಅಂತವರು ಸಹ ಯಾವೂದೆ ಭಯ ಪಡದೆ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಹೊರ ರಾಜ್ಯದಿಂದ ಬರುವ ವ್ಯಕ್ತಿಗಳಿಗೆ ಹದಿನಾಲ್ಕು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುವುದು. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜಾಗೃತಿ ವಹಿಸಲು ಡಂಗುರ ಸಾರಬೇಕು ಎಂದರು.

ತಾಲೂಕಿನ ಬಡ್ಡಿಗೇರಿ ಗ್ರಾಮಕ್ಕೆ ಒಂದೇ ಕುಟುಂಬದ ನಾಲ್ಕುಜನ ಹಾಗೂ ಶಿಡ್ಲಗುಂಡಿ ಗ್ರಾಮದ ಇಬ್ಬರು ಮಹಾರಾಷ್ಟ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದು ಇವರ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ಪರಿಕ್ಷೆಗೆ ಕಳುಹಿಸಲಾಗಿತ್ತು ಇವರಲ್ಲಿ ಬಡ್ಡಿಗೇರಿ ಗ್ರಾಮದ 8ವರ್ಷದ ಬಾಲಕ ಹಾಗೂ ಶಿಡ್ಲಗುಂಡಿಯ 24ವರ್ಷದ ಯುವಕನಿಗೆ ಕೊರೋನಾ ಪಾಸಿಟಿವ್ ಬಂದಿರುವುದು ದೃಡವಾಗಿದೆ.  ಇವರು ಮಹಾರಾಷ್ಟದಿಂದ ಬಂದ ತಕ್ಷಣ ತಮ್ಮ ಮನೆಗಳಿಗೆ ಹೋಗಿ ಆಸ್ಪತ್ರೆಗೆ ಬಂದ ಕಾರಣ ಎರಡು ಮನೆಯವರನ್ನೂ ಇದೀಗ ಕ್ವಾರಂಟೈನ್ ಮಾಡಲಾಗಿದೆ ಎರಡು ಗ್ರಾಮಗಳಲ್ಲಿನ ಎಲ್ಲ ಜನರ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವ ಹಾಗೂ ರಕ್ತದ ಮಾದರಿಯನ್ನು ತಪಾಸಣೆ ಕಳುಹಿಸಲಾಗುವುದು ಎರಡು ಊರುಗಳ ಜನರನ್ನು ಯಾವುದೇ ಕಾರಣಕ್ಕೂ ಹೊರಗಡೆ ಬಾರದಂತೆ  ತಿಳಿಸಲಾಗಿದೆ. ಕಂಟೋನ್ಮೆಂಟ್ ಆದ ಗ್ರಾಮಗಳಿಗೆ ಅಗತ್ಯ ವಸ್ತುಗಳು ಹಾಗೂ ಬಡ ಕುಟುಂಬಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು

ನಂತರ ಡಿವೈಎಸ್‍ಪಿ ಜಿ.ಟಿ.ನಾಯ್ಕ ಮಾತನಾಡಿ ಹೊರ ಭಾಗದಿಂದ ಯಾರೆ ಬಂದರು ಸಹ ಆರೋಗ್ಯ ತಪಾಸಣೆ ಮಾಡಿಸಿಕೋಳ್ಳಬೇಕು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಚಕ್‍ಪೋಷ್ಟಗಳಲ್ಲಿ ಸರಿಯಾದ ಮಾಹಿತಿ ನೀಡಿ ಬರಬೇಕು ಮಾರುಕಟ್ಟೆಯಲ್ಲಿ ಪ್ರತಿಯೋಬ್ಬ ವ್ಯಕ್ತಿಯೂ ಎರಡು ಮೀಟರನಷ್ಟು ಅಂತರವನ್ನು ಕಾಪಾಡಬೇಕು ಹಳ್ಳಿಗಳಲ್ಲಿ ನಾಲ್ಕೈದು ಜನರು ಸೇರಿ ಗುಂಪಾಗಿ ಕುಳಿತುಕೊಂಡರೆ ಕ್ರಮ ಜರುಗಿಸಲಾಗುವುದು ಎಂದರು.

ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನೆ, ತಾ.ಪಂ ಕಾರ್ಯನಿರ್ವಣಾಧಿಕಾರಿ ಪ್ರವೀಣ ಕಟ್ಟಿ, ಪೊಲೀಸ ಇನ್ಸಪೇಕ್ಟರ ಡಾ.ಶಿವಾನಂದ ಚಲವಾದಿ, ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆ, ಯಲ್ಲಾಪುರ ತಾಲೂಕ ಆಡಳಿತ ವೈದ್ಯಾಧಿಕಾರಿ ಡಾ.ನರೆಂದ್ರ ಪವಾರ ಪ ಪಂ. ಮುಖ್ಯಾಧಿಕಾರಿ ಸಂಗನಬಸಯ್ಯ, ಮುಂತಾದವರಿದ್ದರು. 

  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...