ಆಟೋಮೆಟಿಕ್ ಸೈನಿಟೈಸರ್ ಸಿಂಪಡಣೆ ಯಂತ್ರವನ್ನು ಆವಿಷ್ಕರಿಸಿದ ಭಟ್ಕಳದ ವಿದ್ಯಾರ್ಥಿ

Source: so news | Published on 1st August 2020, 1:35 AM | Coastal News | Don't Miss |

 

ಭಟ್ಕಳ: ಕೋವಿಡ್ 19 ಜನರಲ್ಲಿ ಕೇವಲ ಆತಂಕವನ್ನು ಮಾತ್ರ ಹುಟ್ಟು ಹಾಕಿಲ್ಲ,ಮುಖಗವಸು, ಸೆನಿಟೈಸರ್ ಹಾಗೂ ಅದರ ಸಿಂಪಡಣಾ ಯಂತ್ರದವರೆಗೆ ಊರು ಕೇರಿಯಲ್ಲಿ ಆವಿಷ್ಕಾರ, ವಿನ್ಯಾಸಗಳಂತಹ ರಚನಾತ್ಮಕ ಕಾರ್ಯಗಳಿಗೂ ಅವಕಾಶ ಮಾಡಿಕೊಟ್ಟಿದೆ. ಇದೀಗ ಆ ಸಾಲಿಗೆ ಮಂಗಳೂರು ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿರುವ ಭಟ್ಕಳ ಮೂಲದ ವಿದ್ಯಾರ್ಥಿ ಮಹ್ಮದ್ ಸುಹೇಲ್ ಸಿದ್ಧಪಡಿಸಿರುವ ಆಟೋಮೆಟಿಕ್ ಸಿನಿಟೈಸರ್ ಸಿಂಪಡಣಾ ಯಂತ್ರ ಸೇರಿದೆ.
ಯಾರೇ ಆಗಲಿ ಯಂತ್ರದ ಒಳಗೆ ಕೈ ಇಟ್ಟರೆ ಸಾಕು, ತನ್ನಿಂದ ತಾನೆ ಕೈ ಸೆನಿಟೈಸೇಶನ್‍ಗೆ ಒಳಪಡುತ್ತದೆ. ಸೆನ್ಸರ್‍ನ್ನು ಬಳಸಿ ಸುಹೇಲ್ ಈ ಕಡಿಮೆ ಖರ್ಚಿನ ಯಂತ್ರವನ್ನು ಆವಿಷ್ಕರಿಸಿದ್ದಾನೆ. ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಈ ಯಂತ್ರವನ್ನು ಬಳಸಬಹುದಾಗಿದೆ. ಈಗಾಗಲೇ ಭಟ್ಕಳದ 2 ಪ್ರಮುಖ ಮಸೀದಿಗಳಲ್ಲಿ ಈ ಯಂತ್ರದ ಬಳಕೆ ಆರಂಭವಾಗಿದೆ. ವಿದ್ಯಾರ್ಥಿಯ ಈ ಸಾಧನೆಗೆ ಮಂಗಳೂರು ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ಭಟ್ಕಳದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಅಭಿನಂದನೆ ಸಲ್ಲಿಸಿದ್ದಾರೆ.

Read These Next

ಸೌದಿ ಅರೇಬಿಯಾದ ತಾಯಿಫ್‌ನಲ್ಲಿ ಕಾರು ಅಪಘಾತ ಉಡುಪಿ ಜಿಲ್ಲೆಯ ಯುವಕನ ಸಾವು ಮತ್ತೊಬ್ಬ  ಗಂಭೀರ

ಭಟ್ಕಳ:  ಸೌದಿ ಅರೇಬಿಯಾದ ತಾಯಿಫ್‌ ಎಂಬಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ  ಉಡುಪಿ ಜಿಲ್ಲೆಯ ಗಂಗೋಳಿ ನಿವಾಸಿಗಳಾದ ಮುಹಮ್ಮದ್ ...