ಕೋಸ್ಟಲ್ ಎಕನಾಮಿಕ್ ಝೋನ್ ಮಾಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ-ಅನಂತ್ ಕುಮಾರ್ ಹೆಗಡೆ

Source: sonews | By Staff Correspondent | Published on 10th August 2020, 7:02 PM | Coastal News | Don't Miss |

ಭಟ್ಕಳ: ಕರಾವಳಿಯ ತಾಲೂಕುಗಳ ಅಭಿವೃದ್ಧಿಯು ಬಂದರ ಅಭಿವೃದ್ಧಿಯಿಂದ ಮಾತ್ರ ಸಾಧ್ಯವಾಗುವುದು. ಈಗಾಗಲೇ ಕೋಸ್ಟಲ್ ಎಕನಾಮಿಕ್ ಝೋನ್ ಮಾಡುವ ಕುರಿತು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು ಒಪ್ಪಿಗೆ ದೊರೆತಿದೆ.  ಆ ದಿಶೆಯಲ್ಲಿ ಹೊನ್ನಾವರ, ಬೇಲೇಕೇರಿ ಹಾಗೂ ಕಾರವಾರದ ಬಂದು ಅಭಿವೃದ್ಧಿಯಾಗಲಿದ್ದು ಆರ್ಥಿಕ ಅಭಿವೃದ್ಧಿಯ ಹೆಬ್ಬಾಗಿಲು ತೆರೆದುಕೊಳ್ಳಲಿದೆ ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಿಳಿಸಿದರು. 

ಅವರು ಸೋಮವಾರ ಇಲ್ಲಿನ ಮಾರುತಿ ನಗರದಲ್ಲಿನ ನೂತನ ಕಟ್ಟಡದಲ್ಲಿ ತಾಲೂಕಾ ಬಿ.ಜೆ.ಪಿ. ಕಚೇರಿಯನ್ನು  ಉದ್ಘಾಟಿಸಿ ಮಾತನಾಡಿದರು. 

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 1ನೇ ಹಂತದ ಕಾಮಗಾರಿ ಆರಂಭ ಮಾಡುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಎರಡನೇ ಹಂತದ ಕಾಮಗಾರಿಗಳ ಪ್ರಯೋಜನ ಕೂಡಾ ಜನತೆಗೆ ದೊರೆಯಲಿದೆ. ಎಂದ ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಅಲ್ಲಿನ ಬಂದರುಗಳ ಕೊಡುಗೆಯೇ ಮುಖ್ಯವಾಗಿದೆ ಎಂದರು. ಜನರು ಆರ್ಥಿಕ ಚಟುವಟಿಕೆಗಳ ಲಾಭ ಪಡೆಯುವಂತಾಗಬೇಕು ಎಂದ ಅವರು ರಾಜಕಾರಣವೆಂದರೆ ಕೇವಲ ಓಟ್ ಕೇಳುವುದಲ್ಲ, ಜನರಿಗೆ ಆರ್ಥಿಗ ಚಟುವಟಿಕೆಗಳ ಲಾಭವನ್ನು ತಲುಪಿಸುವುದು ಕೂಡಾ ರಾಜಕಾರಣದ ಭಾಗ ಎಂದರು. 

ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮುಂದಾದರೆ ಪರಿಸರದ ಹೆಸರಿನಲ್ಲಿ, ಬೇರೆ ಬೇರೆ ಹೆಸರಿನಲ್ಲಿ ವಿರೋಧಗಳು ಹುಟ್ಟಿಕೊಳ್ಳುತ್ತವೆ ಎಂದ ಅವರು ಅಂತವರಿಗೆ ಅಭಿವೃದ್ಧಿಯ ಅರ್ಥ ತಿಳಿದಿಲ್ಲ ಎಂದರು.  

ಹಳ್ಳಿಗಳಲ್ಲಿ ಎ.ಟಿ.ಎಂ. ಮಾದರಿಯಲ್ಲಿ ಮೈಕ್ರೋ ಎ.ಟಿ.ಎಂ. ಆರಂಭವಾಗಿದ್ದು ಹಳ್ಳಿ ಹಳ್ಳಿಗಳಲ್ಲಿ ಕೇಂದ್ರ ಆರಂಭಿಸಿ ಎಲ್ಲಾ ಹಣಕಾಸು ವ್ಯವಹಾರವನ್ನು ಅಲ್ಲಿಯೇ ನಡೆಸಲು ಅನುಕೂಲವಾಗುತ್ತದೆ. ಈಗಾಗಲೇ 32 ಕೇಂದ್ರಗಳನ್ನು ತೆರೆಯಲಾಗಿದ್ದು ಯಾರು ಬೇಕಾದರೂ ಕೇಂದ್ರವನ್ನು ತೆರೆದು ವ್ಯವಹಾರ ಮಾಡಬಹುದು ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಸುನಿಲ್ ನಾಯ್ಕ ಮಾತನಾಡಿ ಬಿ.ಜೆ.ಪಿ.ಗೆ ಕಚೇರಿಯಿಲ್ಲದೇ ಕಾರ್ಯಕರ್ತರಿಗೆ ತೊಂದರೆಯಾಗಿರುವುದನ್ನು ಮನಗಂಡು ಕಚೇರಿಯನ್ನು ಆರಂಭಿಸಲಾಗಿದೆ. ಪ್ರತಿಯೋರ್ವ ಕಾರ್ಯಕರ್ತರೂ ಕೂಡಾ ಇಲ್ಲಿ ಬಂದು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಬಹುದು. ಅಗತ್ಯವಿದ್ದರೆ ಅರ್ಜಿಗಳನ್ನು ಕೂಡಾ ಇಲ್ಲಿಯೇ ನೀಡಬಹುದು ಎಂದರು. 

ನೂತನ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರನ್ನು ಬಿ.ಜೆ.ಪಿ. ಮಂಡಳದ ವತಿಯಿಂದ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು ಬುಡಕಟ್ಟು ಜನಾಂಗದವರೊಂದಿಗೆ ಕೆಲಸ ಮಾಡುತ್ತಿರುವ ತನಗೆ ರಾಜ್ಯ ಸರಕಾರ ದೊಡ್ಡದೊಂದು ಜವಾಬ್ದಾರಿಯನ್ನು ನೀಡಿದ್ದು ಅದನ್ನು ನಿಭಾಯಿಸುವುದಾಗಿ ಹೇಳಿದರು. ಭಟ್ಕಳ ಮಂಡಳದ ಅಧ್ಯಕ್ಷ ಸುಬ್ರಾಯ ನಾಯ್ಕ ಮಾತನಾಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಎಸ್. ಹೆಗಡೆ, ಭಟ್ಕಳ ಪ್ರಭಾರಿ ಪ್ರಶಾಂತ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಶಿವಾನಿ ಶಾಂತಾರಾಮ, ಹಿಂದುಳಿದ ಮೋರ್ಚಾ ಅಧ್ಯಕ್ಷ ರವಿ ನಾಯ್ಕ ಜಾಲಿ, ಭಟ್ಕಳ ಮಂಡಳದ ನಿಕಟಪೂರ್ವ ಅಧ್ಯಕ್ಷ ರಾಜೇಶ ನಾಯ್ಕ, ಕೃಷ್ಣಾ ನಾಯ್ಕ ಆಸರಕೇರಿ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. 

ಮಂಡಳದ ಪ್ರಧಾನ ಕಾರ್ಯದಶಿ ಮೋಹನ ಕೆ. ನಾಯ್ಕ ಸ್ವಾಗತಿಸಿದರು. ಪಕ್ಷದ ಪ್ರಮುಖ ಡಿ.ಕೆ. ಜೈನ್ ನಿರ್ವಹಿಸಿದರು. ಶ್ರೀನಿವಾಸ ನಾಯ್ಕ ವಂದಿಸಿದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...