ಅರಣ್ಯ ಇಲಾಖೆಯಿಂದ 85 ಸಾವಿರ ರೂ ಮೌಲ್ಯದ ಅಕ್ರಮ ಕಟ್ಟಿಗೆ ವಶ 

Source: sonews | By Staff Correspondent | Published on 6th October 2018, 4:59 PM | Coastal News | Incidents | Don't Miss |

ಮುಂಡಗೋಡ : ಮನೆಯೊಂದರಲ್ಲಿ ಅಕ್ರಮವಾಗಿ ಸಾಗವಾನಿ ಕಟ್ಟಿಗೆಯನ್ನು ದಾಸ್ತಾನು ಇಟ್ಟ ಖಚಿತ ಮಾಹಿತ ಪಡೆದ ಅರಣ್ಯ ಇಲಾಖೆ ಶುಕ್ರವಾರ ದಾಳಿ ನಡೆಸಿ  ಆರೋಪಿಗಳ ಸಮೇತ ಸುಮಾರು 85 ಸಾವಿರ ರೂ ಮೌಲ್ಯದ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ.

ತಾಲೂಕಿನ ಚವಡಳ್ಳಿ ಗ್ರಾ.ಪಂ ವ್ಯಾಪ್ತಿಯ ಬ್ಯಾನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬ್ಯಾನಳ್ಳಿ ಗ್ರಾಮದ ಸಿದ್ದು ಲಾಂಬೂರೆ ಮನೆಯಲ್ಲಿ ಅಕ್ರಮವಾಗಿ ಬೆಲೆಬಾಳುವ ಸಾಗವಾನಿ ತುಂಡುಗಳನ್ನು ಕಡಿದು ದಾಸ್ತಾನು ಇಟ್ಟಿದ್ದ ಎನ್ನಲಾಗಿದೆ. ಈ ಕೃತ್ಯಕ್ಕೆ ಸಂಬಂದ ಪಟ್ಟ ಸಿದ್ದು ಜಾನು ಲಾಂಬುರೆ, ಕ್ಯಾಸನಕೇರಿಯ ತುಕಾರಾಮ ಕಳಂತ್ರಿ ಮತ್ತು ಕೃಷ್ಣಾ ಕಳಂತ್ರಿ ಬಂದಿತ ಆರೋಪಿಗಳಾಗಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ ಜಿ.ಆರ್. ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೋಳ್ಳಿ ತಂಡ ದಾಳಿ ನಡೆಸಿ ತುಂಡುಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳಾದ ಫಕ್ಕೀರೇಶ ಸುಣಗಾರ, ಅರುಣಕುಮಾರ ಕಾಶಿ,  ಎಲ್.ಆರ್. ನಾಯ್ಕ, ಶ್ರೀಧರ ಭಜಂತ್ರಿ, ಎಲ್.ವಾಯ್.ಹಮಾನಿ, ದೇವರಾಜ ಆಡಿನ್, ಮಂಜು, ಶಿವಪ್ಪಾ, ಇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...