ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಿಲ್ಲಿಸಿ; ಕೇಂದ್ರಕ್ಕೆ ಅಮ್ನೆಸ್ಟಿ ಆಗ್ರಹ

Source: Vb | By I.G. Bhatkali | Published on 16th June 2022, 12:57 AM | National News |

ಹೊಸದಿಲ್ಲಿ: ದೇಶಾ ದ್ಯಂತ ಶಾಂತಿಯುತವಾಗಿ ಪ್ರತಿ ಭಟಿಸುತ್ತಿರುವವರ ವಿರುದ್ಧ ಪೊಲೀಸ್ ಪಡೆಗಳ ಅತಿಯಾದ ಬಳಕೆ ಹಾಗೂ ಅಂತರ್‌ರಾಷ್ಟ್ರೀಯ ಮಾನವ ಹಕ್ಕು, ಮಾನದಂಡಗಳ ಉಲ್ಲಂಘನೆಗೆ ಅಂತ್ಯ ಹಾಡುವಂತೆ ಆಮೈಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ಭಾರತ ಸರಕಾರವನ್ನು ಆಗ್ರಹಿಸಿದೆ.

'ಟೈಮ್ಸ್ ನೌ' ಟಿ.ವಿ.ಯ ಚರ್ಚಾ ಕಾರ್ಯಕ್ರಮದ ಸಂದರ್ಭ ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಿಜೆಪಿಯಿಂದ ಅಮಾನತು ಗೊಂಡ ನೂಪುರ್ ಶರ್ಮಾ ಹಾಗೂ ವಜಾಗೊಂಡ ನವೀನ್ ಜಿಂದಾಲ್ ಅವರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ಭುಗಿ ಲೆದ್ದ ಹಿನ್ನೆಲೆಯಲ್ಲಿ ಆಮೈಸಿ ಇಂಟರ್‌ನ್ಯಾಷನಲ್‌ನ ಈ ಹೇಳಿಕೆ ಹೊರಬಿದ್ದಿದೆ. ಇಬ್ಬರು ಬಿಜೆಪಿ ನಾಯಕರನ್ನು ಬಂಧಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಉತ್ತರಪ್ರದೇಶ, ಜಾರ್ಖಂಡ್, ಪಶ್ಚಿಮಬಂಗಾಳ, ಕರ್ನಾಟಕ, ಮಹಾರಾಷ್ಟ್ರ, ಜಮ್ಮು ಹಾಗೂ ಕಾಶ್ಮೀರ, ತೆಲಂಗಾಣದಂತಹ ಭಾರತದ ಹಲವು ರಾಜ್ಯಗಳು ಸಾಕ್ಷಿಯಾಗಿವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸ ಲಾಗಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ನೂರಾರು ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಹಾಗೂ ಕೆಲವರು ಸಾವನ್ನಪ್ಪಿದ್ದಾರೆ ಎಂದು ಆಮ್ಮೆಸ್ಟಿ ಇಂಟರ್‌ನ್ಯಾಷನಲ್ ತಿಳಿಸಿದೆ.

ಪೊಲೀಸ್ ಪಡೆಯನ್ನು ಅತಿಯಾಗಿ ಬಳಸುವುದಕ್ಕೆ ಅಂತ್ಯ ಹಾಡುವಂತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ, ಶಾಂತಿಯುತವಾಗಿ ಸಭೆ ಸೇರಿದ ಸಂದರ್ಭ ಬಂಧಿತರಾಗಿರುವವರನ್ನು ಕೂಡಲೇ ಹಾಗೂ ನಿತ್ಯರ್ತವಾಗಿ ಬಿಡುಗಡೆ ಮಾಡುವಂತೆ ಆಮೈಸಿ ತನ್ನ ಹೇಳಿಕೆಯಲ್ಲಿ ಆಗ್ರಹಿಸಿದೆ.

ಶಾಂತಿಯುತವಾಗಿ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ತಮ್ಮ ಹಕ್ಕನ್ನು ಚಲಾಯಿಸುತ್ತಿರುವ ಮುಸ್ಲಿಮರನ್ನು ಕೇಂದ್ರ ಸರಕಾರ ಆಯ್ಕೆ ಮಾಡಿ ಹಾಗೂ ದುರದ್ದೇಶ' ದಿಂದ ಗುರಿ ಮಾಡುತ್ತಿದೆ ಎಂದು ಆಮ್ಮೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಮಂಡಳಿಯ ಅಧ್ಯಕ್ಷ ಆಕಾರ್ ಪಟೇಲ್ ಅವರ ಹೇಳಿಕೆಯನ್ನು ಪತ್ರಿಕಾ ಹೇಳಿಕೆ ಉಲ್ಲೇಖಿಸಿದೆ.

ಭಾರತ ಸರಕಾರ ಪೊಲೀಸ್ ಪಡೆಯನ್ನು ಅತಿಯಾಗಿ ಬಳಸಿ ಪ್ರತಿಭಟನಾಕಾರರಿಗೆ ಥಳಿಸುವುದು, ನಿರಂಕುಶವಾಗಿ ಬಂಧಿಸುವುದು ಹಾಗೂ ದಂಡನೆಯಾಗಿ ಮನೆಗಳನ್ನು ಧ್ವಂಸಗೊಳಿಸುವುದು ಅಂತರ್‌ ರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಹಾಗೂ ಮಾನದಂಡಗಳ ಅಡಿಯಲ್ಲಿ ಭಾರತದ ಬದ್ಧತೆಯ ಸಂಪೂರ್ಣ ಉಲ್ಲಂಘನೆ ಎಂದು ಅದು ಹೇಳಿದ.

ಪಟೇಲ್ ಅವರು ಆಮ್ಲಸ್ಟಿ ಇಂಡಿಯಾದ ಭಾರತೀಯ ಚಾಪ್ಟ‌ನ ಮಾಜಿ ಕಾರ್ಯಕಾರಿ ನಿರ್ದೇಶಕ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲ೦ಘನೆಯ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಆಮ ಇಂಡಿಯಾದ ಸೊತ್ತನ್ನು ಸ್ತಂಭನಗೊಳಿಸಿದ ಬಳಿಕ ಅದು 2020ರಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ನಿಲ್ಲಿಸಿತ್ತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...