ಮದ್ಯದಂಗಡಿಗಳನ್ನು ಮುಚ್ಚಿ ಪ್ರಾರ್ಥನಾ ಕೇಂದ್ರಗಳಿಗೆ ಅನುಮತಿ ನೀಡುವಂತೆ ಡಾ.ಬೆಳ್ಗಾಮಿ ಆಗ್ರಹ

Source: sonews | By Staff Correspondent | Published on 4th May 2020, 7:58 PM | State News | Don't Miss |

ಬೆಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಸಂಪೂರ್ಣ ಮಧ್ಯೆ ಮಾರಾಟವನ್ನು ನಿಷೇಧಿಸಿದ್ದ ರಾಜ್ಯ ಸರಕಾರವು ಪರಿಸ್ಥಿತಿಯು ಇನ್ನೇನೊ ಸ್ವಲ್ಪ ಮಟ್ಟಿಗೆ ಹತೋಟಿಗೆ ಬರುತ್ತಿರುವ ಈ ಹೊತ್ತಿನಲ್ಲಯೇ ಮತ್ತೆ ಈಗ ಮದ್ಯ ಮಾರಾಟಕ್ಕೆ ಮುಕ್ತ ಅವಕಾಶ ನೀಡಿರುವುದು ಖಂಡನೀಯವಾಗಿದ್ದು ಕೂಡಲೇ ಮದ್ಯದಂಗಡಿಗಳನ್ನು ಮುಚ್ಚಿ ಪ್ರಾರ್ಥನಾ ಕೇಂದ್ರಗಳಿಗೆ ಅನುಮತಿ ನೀಡಬೇಕೆಂದು ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

ಕಳೆದ ನಲ್ವತ್ತು ದಿನಗಳಿಂದ ಮದ್ಯವನ್ನು ನಿಷೇಧಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗಿದೆ ಎಂದಾದರೇ ಮುಂಬರುವ ದಿನಗಳಲ್ಲಿಯೂ ಈ ನಿಷೇಧವನ್ನು ಮುಂದುವರೆಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುವುದೇ ಅರ್ಥವಾಗದ ಸಂಗತಿಯಾಗಿದೆ,  ಮದ್ಯದಿಂದಾಗಿ ಈಗಾಗಲೇ ಅನೇಕ ಕುಟುಂಬಗಳು ಸರ್ವನಾಶವಾಗುತ್ತಿದ್ದು ಇದರ ನೇರ ಪರಿಣಾಮವು ಅನುಭವಿಸುತ್ತಿರುವುದು ಕುಟುಂಬದಲ್ಲಿರುವ ಅಮಾಯಕ ಹೆಣ್ಣು ಮತ್ತು ಚಿಕ್ಕ ಮಕ್ಕಳಾಗಿದ್ದಾರೆ. ಒಂದೆಡೆ ಸರಕಾರವು ಆರೋಗ್ಯ ಇಲಾಖೆಯ ಅಡಿಯಲ್ಲಿ ಜನರನ್ನು ರೋಗದಿಂದ ರಕ್ಷಿಸಲು ಕೋಟಿಗಟ್ಟಲೆ ಹಣ ಸುರಿಯುತ್ತಿದ್ದು ಮಗದೊಂದೆಡೆ ಶರಾಬನ್ನು ಮುಕ್ತವಾಗಿಸಿ ಜನರನ್ನು ಅನಾರೋಗ್ಯ ಪೀಡಿತರನ್ನಾಗಿಸುತ್ತಿರುವ ತನ್ನ ವಿರೋಧಾಭಾಸ ನೀತಿ ಹಾಗೂ ಬೂಟಾಟಿಕೆಯು ನಿಜಕ್ಕು ಆತಂಕಾರಿಯಾಗಿದೆ.  ಕೊರೂನಾ ರೋಗವು ಹರಡದಂತೆ ಅದನ್ನು ತಡೆಗಟ್ಟಲು ಸರಕಾರವು ಈಗಾಗಲೇ ಅನೇಕ ಕ್ರಮಗಳನ್ನು ಕೈಗೊಂಡು ಒಂದು ಹಂತದ ವರೆಗೆ ಸಫಲತೆಯನ್ನು ಕಾಣುತ್ತಿರುವ ಈ ಹೊತ್ತಿನಲ್ಲಿಯೆ ಮದ್ಯವನ್ನು ಮುಕ್ತವನ್ನಾಗಿಸುವುದರÀ ಮೂಲಕ ಪರೋಕ್ಷವಾಗಿ ಮಗದೊಮ್ಮೆ ಈ ರೋಗಕ್ಕೆ ಕರೆ ನೀಡುತ್ತ ಮತ್ತಷ್ಟು ಅಪಾಯಗಳನ್ನು ತನ್ನ ಮೈಮೇಲೆ ಎಳೆದುಕೊಳ್ಳುವಂತಾಗುತ್ತ್ತಿದೆ. ಮದ್ಯವೆಸನಿಗಳಿಗೆ ಮದ್ಯ ಸೇವಿಸಿದ ಬಳಿಕ ತಮ್ಮ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಾಗ ಯಾವುದು ಸರಿ ಯಾವುದು ತಪ್ಪು ಎಂನ್ನುವ ಪರೀವೆಯು ಇರುವುದಿಲ್ಲ, ಇದರ ಆಚೆ ರಾಜ್ಯದಲ್ಲಿ ಈಗಾಗಲೇ ಬಡತನ ಹಸಿವು ಹಾಗೂ ನಿರುದ್ಯೋಗದ ಸಮಸ್ಯೆಗಳು ತಾಂಡವವಾಡುತ್ತಿದ್ದು ಸರಕಾರ ಇವುಗಳನ್ನು ನಿಯಂತ್ರಿಸುವಲ್ಲಿ ವಿಶೇಷ ಗಮನ ಹರಿಸಬೇಕಾಗಿರುವುದು ಅತ್ಯವಶ್ಯಕವಾಗಿದೆ. 

ಮದ್ಯಸೇವನೆ ಮತ್ತು ಅಪರಾಧ ಚಟುವಟಿಕೆಗಳಿಗೆ ನೇರ ಸಂಬಂಧವಿದ್ದು ಸರಕಾರ ಮದ್ಯವನ್ನು ಕೇವಲ ಆದಾಯದ ಮೂಲವಾಗಿ ಮಾತ್ರ ನೋಡುತ್ತಿದೆ, ಇದಲ್ಲದೇ ಮದ್ಯದಿಂದಾಗಿ ಅಪಘಾತಗಳು, ಅನೇಕ ರೋಗಗಳು, ಆರೋಗ್ಯವು ಹದಗೆಡುವುದರ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ನಷ್ಟವು ಉಂಟಾಗುವುದು,   ಮದ್ಯಮುಕ್ತ ಸಮಾಜದಿಂದ ಆಗುವ ಅನುಕೂಲಗಳು ಅಂದಾಜು ಮಾಡಲು ಆಗದಷ್ಟು ಅಗಾಧವಾಗಿರುತ್ತದೆ, ಒಂದು ಸ್ವಸ್ತ ಸಮಾಜವನ್ನು ರೂಗಗ್ರಸ್ತರನ್ನಾಗಿಸುತ್ತಿರುವ ಮದ್ಯದ ವ್ಯವಹಾರಕ್ಕೆ ವಿರಾಮ ಹಾಕಬೇಕು. ರಾಜ್ಯ ಸರಕಾರವು ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡಬೇಕು. ಇಲ್ಲವೆಂದಾದರೇ ಒಂದು ಆರೋಗ್ಯ ಪೂರ್ಣವಾದ ಸಂಸಾರವನ್ನು ಸರಕಾರವೇ ನೇರವಾಗಿ ಹಾಳು ಮಾಡಿದ ಅಪವಾದವನ್ನು ಹೊರಬೇಕಾಗುತ್ತದೆ. ಈ ನಡುವೆ ಸರಕಾರದ ಈ ಕ್ರಮವನ್ನು ಅನೇಕ ಧಾರ್ಮಿಕ ಮುಖಂಡರು ಖಂಡಿಸಿರುವುದು ಸ್ವಾಗತಾರ್ಹವಾಗಿದ್ದು ಇನ್ನಾದರೂ ಸರಕಾರವು ಎಚ್ಚೆತ್ತುಕೊಂಡು ಮದ್ಯ ಮಾರಾಟದ ಯೋಜನೆಯನ್ನು ಕೈಬಿಟ್ಟು ಒಂದು ಆರೋಗ್ಯಪೋರ್ಣ ಸಮಾಜದ ನಿರ್ಮಾಣದತ್ತ ಮುನ್ನಡೆಯಲಿ. ಕುಟುಂಬಗಳ ಕಣ್ಣೀರಿನಿಂದ ಬರುವ ಹಣದಿಂದ ಆಗುವ ಅಭಿವೃಧಿ ನಮಗೆ ಬೇಕಾಗಿಲ್ಲ ಎಂದ ಡಾ. ಸಾದ್ ಅಭಿಪ್ರಾಯಪಟ್ಟಿದ್ದಾರೆ.

ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಕೊರೋನಾ ಭೀತಿಯಿಂದಾಗಿ ಮುಚ್ಚಿರುವ ರಾಜ್ಯದ ದೇಗುಲಗಳ ಬಾಗಿಲುಗಳನ್ನು ತೆರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ ಇದೇ ವೇಳೆ ಮಸೀದಿ, ಚರ್ಚ್‍ಗಳನ್ನೊಳಗೊಂಡಂತೆ ರಾಜ್ಯದ ಎಲ್ಲ ಪ್ರಾರ್ಥಾನಾ ಸ್ಥಳಗಳನ್ನು ತೆರೆಯುವ ಅವಕಾಶವನ್ನು ನೀಡಿ ಅಲ್ಲಿ ಕಟ್ಟುನಿಟ್ಟಿನ ಮಾರ್ಗದರ್ಶದೊಂದಿಗೆ ಭಕ್ತರಿಗೆ ಪ್ರಾರ್ಥನೆ ನಿರ್ವಹಿಸಲು ಸರಕಾರವು ಅನುವು ಮಾಡಿಕೊಡಬೇಕು ಹಾಗೂ ರಮ್‍ಝಾನ್ ತಿಂಗಳಿನ ಕೊನೆಯಲ್ಲಿ ಆಚರಿಸುವ ಈದುಲ್ ಫತ್ರ್ ಹಬ್ಬದ ದಿನ ನಿರ್ವಹಿಸಲ್ಪಡುವ ಸಾಮೂಹಿಕ ಪ್ರಾರ್ಥನೆಗೂ ನಿಯಾಮಾನುಸಾರ ಅನುವು ಮಾಡಿಕೊಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ  ಡಾ. ಬೆಳಗಾಮಿ ಸರಕಾರವನ್ನು ಆಗ್ರಹಿಸಿದ್ದಾರೆ. 
 

Read These Next

ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ...

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು