ವಿಕಿಪೀಡಿಯಾ ತಿದ್ದಲು ಬಾಡಿಗೆ ಬಳಕೆದಾರರನ್ನು ನೇಮಕ ಮಾಡಿದ ಅದಾನಿ ಗ್ರೂಪ್

Source: Vb | By I.G. Bhatkali | Published on 23rd February 2023, 8:44 AM | National News | Don't Miss |

ಹೊಸದಿಲ್ಲಿ: ತನಗೆ ಸಂಬಂಧಿತ ವಿಕಿಪೀಡಿಯಾ ಪುಟಗಳನ್ನು ಬರೆಯಲು ಮತ್ತು ತಿದ್ದುಪಡಿಗಳನ್ನು ಮಾಡಲು ಅದಾನಿ ಗ್ರೂಪ್ ಅಘೋಷಿತ ಬಾಡಿಗೆ ಸಂಪಾದಕರನ್ನು ನೇಮಕಗೊಳಿಸಿತ್ತು ಎನ್ನುವುದನ್ನು ತನ್ನ ತನಿಖೆಯು ಬಹಿರಂಗಗೊಳಿಸಿದೆ ಎಂದು ಸಮುದಾಯದ ಸದಸ್ಯರೇ ಬರೆಯುವ ಮತ್ತು ಎಡಿಟ್ ಮಾಡುವ ವಿಕಿಪೀಡಿಯಾದ ಆನ್‌ಲೈನ್ ವೃತ್ತಪತ್ರಿಕೆ 'ದಿ ಸೈನ್‌ ಪೋಸ್ಟ್' ಪ್ರಕಟಿಸಿರುವ ವರದಿಯು ಹೇಳಿದೆ.

ದಿ ಸೈನ್‌ಪೋಸ್ಟ್ ಇಂಗ್ಲಿಷ್ ವಿಕಿಪೀಡಿಯಾ, ಅದರ ಸಹ ಯೋಜನೆಗಳು, ವಿಕಿಪೀಡಿಯಾ ಫೌಂಡೇಷನ್ ಮತ್ತು ವಿಕಿಪೀಡಿಯಾ ಆಂದೋಲನದ ಮೇಲೆ ಹೆಚ್ಚಾಗಿ ಗಮನವನ್ನು ಕೇಂದ್ರೀಕರಿಸುತ್ತದೆ.

ವಿಕಿಪೀಡಿಯಾ ಸಮುದಾಯ ಬಳಕೆದಾರ ಸ್ಟಾಲ್‌ಬೋನ್ಸ್ ಬರೆದಿರುವ ವರದಿಯನ್ನು 'ತಪ್ಪು ಮಾಹಿತಿಯ ವರದಿ 'ವರ್ಗದಡಿ ಟ್ಯಾಗ್ ಮಾಡಲಾಗಿದೆ.

ಅದಾನಿ ಮತ್ತು ಅವರ ಕಂಪೆನಿಗಳು ವಂಚನೆಯಲ್ಲಿ ತೊಡಗಿಕೊಂಡಿವೆ ಎಂದು ಆರೋಪಿಸಿರುವ ಹಿಂಡನ್‌ ಬರ್ಗ್ ವರದಿ ಯನ್ನು ಬೆಟ್ಟು ಮಾಡಿರುವ ಸೈನ್‌ಪೋಸ್ಟ್ ವರದಿಯು ಕಂಪೆನಿಯು 67 ಶತಕೋಟಿ ಡಾ.ನಿವ್ವಳ ಸಂಪತ್ತನ್ನು ಕಳೆದುಕೊಂಡಿರುವುದನ್ನು ಉಲ್ಲೇಖಿಸಿ,ಸಂಬಂಧಿತ ವಿಕಿಪೀಡಿಯಾ ಲೇಖನಗಳ ಆವೃತ್ತಿಗಳೊಂದಿಗೆ ತಟಸ್ಥವಲ್ಲದ ವಿಕಿಪೀಡಿಯಾ ಓದುಗರನ್ನೂ ವಂಚಿಸಲು ಅದಾನಿ ಮತ್ತು ಅವರ ಉದ್ಯೋಗಿಗಳು ಪ್ರಯತ್ನಿಸಿದ್ದರೇ? ಖಂಡಿತವಾಗಿಯೂ ಅವರು ಹಾಗೆ ಮಾಡಿದ್ದಾರೆ ಎಂದು ಹೇಳಿದೆ.

ದಿ ಸೈನ್ ಪೋಸ್ಟ್ ಪ್ರಕಾರ 40ಕ್ಕೂ ಹೆಚ್ಚು ಸಾಕ್ಪಪೆಟ್'ಗಳು ಅಥವಾ ಅಘೋಷಿತ ಬಾಡಿಗೆ ಸಂಪಾದಕರು ಅದಾನಿ ಕುಟುಂಬ ಮತ್ತು ಕುಟುಂಬ ವ್ಯವಹಾರ ಕುರಿತು ಒಂಭತ್ತು ಸಂಬಂಧಿತ ಲೇಖನಗಳನ್ನು ಸೃಷ್ಟಿಸಿದ್ದರು ಅಥವಾ ಪರಿಷ್ಕರಿಸಿದ್ದರು. “ಸಾಕ್ ಪಪೆಟರಿ' ಬಹು ವಿಕಿಪೀಡಿಯಾ ಖಾತೆಗಳ ದುರುಪಯೋಗವನ್ನು ಸೂಚಿಸುತ್ತದೆ. ಈ ಎಲ್ಲ ಖಾತೆಗಳನ್ನು ವಿಕಿಪೀಡಿಯಾ ನಂತರ ನಿರ್ಬಂಧಿಸಿತ್ತು ಅಥವಾ ನಿಷೇಧಿಸಿತ್ತು.

ಅದಾನಿ ಕುರಿತು ಲೇಖನಗಳನ್ನು ತಿರುಚಿದ್ದವರಲ್ಲಿ ಕಂಪೆನಿಯೊಂದರ ಐಪಿ ವಿಳಾಸವನ್ನು ಬಳಸುತ್ತಿರುವ ವ್ಯಕ್ತಿಯು ಸೇರಿದ್ದು,ಈತ ಅದಾನಿ ಗ್ರೂಪ್'ಗಾಗಿ ಅದರ ಮೂಗಿಗೆ ನೇರವಾಗಿ ಲೇಖನವನ್ನು ಸಂಪೂರ್ಣವಾಗಿ ಮರುರಚಿಸಿದ್ದ ಎಂದು ಸೈನ್‌ ಪೋಸ್ಟ್ ವರದಿಯು ಹೇಳಿದೆ. ಅವರಲ್ಲಿ ಅನೇಕರು ಹಲವಾರು ಲೇಖನಗಳನ್ನು ಎಡಿಟ್ ಮಾಡಿದ್ದರು ಮತ್ತು ತಟಸ್ಥವಲ್ಲದ ಹಾಗೂ ವಾಸ್ತವಕ್ಕೆ ದೂರವಾದ ವಿಷಯಗಳನ್ನು ಸೇರಿಸಿದ್ದರು. ಕಂಪೆನಿಯೊಂದರ ಐಪಿ ವಿಳಾಸವನ್ನು ಬಳಸುತ್ತಿರುವ ಘೋಷಿತ ಬಾಡಿಗೆ ಸಂಪಾದಕನೋರ್ವ ಅದಾನಿ ಗ್ರೂಪ್ ಕುರಿತು ಲೇಖನವನ್ನು ಸಂಪೂರ್ಣವಾಗಿ ಮರುರಚಿಸಿದ್ದ. ಇತರರು ಹಿತಾಸಕ್ತಿ ಸಂಘರ್ಷದ ಎಡಿಟಿಂಗ್ ಕುರಿತು ಎಚ್ಚರಿಕೆಗಳನ್ನು ತೆಗೆದುಹಾಕಿದ್ದರು. ಕೆಲವರು ವಿಕಿಪೀಡಿಯಾದ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯಿಂದ ನುಣುಚಿಕೊಂಡು ಅಸಾಮಾನ್ಯ ವಿಧಾನಗಳಿಂದ ಲೇಖನಗಳನ್ನು ಸೃಷ್ಟಿಸಿದ್ದರು ಎಂದಿರುವವರದಿಯು, ಲೇಖನಗಳನ್ನು ಪುನರ್‌ ಪರಿಶೀಲಿಸುವ ಹ್ಯಾಚೆನ್ಸ್' ಎಂಬ ಬಳಕೆದಾರನನ್ನು ತನ್ನಸ್ಥಾನದ ದುರುಪಯೋಗಕ್ಕಾಗಿ ಮತ್ತು ಹಲವರು ಅದಾನಿ ಲೇಖನಗಳನ್ನು ಭ್ರಷ್ಟ ರೀತಿಯಲ್ಲಿ ಅನುಮೋದಿಸಿದ್ದಕ್ಕಾಗಿ ನಿಷೇಧಿಸಿರುವುದು ಬಹುಶಃ ನಾವು ಕಂಡುಕೊಂಡಿರುವ ಅತ್ಯಂತ ಕಳವಳಕಾರಿ ಅಂಶವಾಗಿದೆ ಎಂದಿದೆ. ಸೈನ್‌ಪೋಸ್ಟ್ ಪರಿಶೀಲಿಸಿರುವ ಒಂಭತ್ತು ಲೇಖನಗಳ ಪೈಕಿ ಏಳನ್ನು ಹ್ಯಾಚೆನ್ಸ್ ಎಡಿಟ್ ಮಾಡಿದ್ದ ಹೀಗೆ ತಿರುಚಲಾದ ಪುಟಗಳಲ್ಲಿ ಗೌತಮ್ ಅದಾನಿ, ಅವರ ಪತ್ನಿ ಪ್ರೀತಿ ಅದಾನಿ, ಪುತ್ರ ಕರಣ ಅದಾನಿ, ಗೌತಮರ ಸೋದರಪುತ್ರ ಪ್ರಣವ ಅದಾನಿ ಹಾಗೂ ಅದಾನಿ ಗ್ರೂಪ್, ಅದಾನಿ ಎಂಟರ್‌ಪೈಸಸ್, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಪೋರ್ಟ್ಸ್ ಕುರಿತ ಲೇಖನಗಳು ಸೇರಿವೆ ಎಂದು ಸೈನ್‌ಪೋಸ್ಟ್ ವರದಿಯು ತಿಳಿಸಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...