ಜೆ.ಎನ್.ಯು. ವಿದ್ಯಾರ್ಥಿ ನಜೀಬ್ ನನ್ನು ಹುಡುಕಿಕೊಡುವಂತೆ ವಿದ್ಯಾರ್ಥಿಗಳ ಆಗ್ರಹ

Source: sonews | By Staff Correspondent | Published on 15th October 2019, 7:05 PM | Coastal News | Don't Miss |


ಭಟ್ಕಳ: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್.ಐ.ಓ) ಭಟ್ಕಳ ಶಾಖೆಯ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ಇಲ್ಲಿನ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳ ಹಿಂದೆ ಜೆ.ಎನ್.ಯು ವಿಶ್ವವಿದ್ಯಾಲಯದಿಂದಕಣ್ಮರೆಯಾಗಿರುವ ನಜೀಬ್ ನನ್ನು ಹುಡುಕಿಕೊಡುವಂತೆ ಆಗ್ರಹಿಸಿದರು. 

ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಮುಂದೆ ಸೇರಿದ ವಿದ್ಯಾರ್ಥಿಗಳ ನಜೀಬ್ ಎಲ್ಲಿ? ಆತನನ್ನು ಹುಡುಕಿಕೊಡಿ ಎಂಬ ಘೋಷಣೆಗಳನ್ನು ಮೊಳಗಿಸುವುದರ ಮೂಲಕ ಪೊಲೀಸ್ ವೈಫಲ್ಯವನ್ನು ಖಂಡಿಸಿದ್ದು ಪ್ರಧಾನಿಯ ಸಂಬಂಧಿಯ ಪರ್ಸ್‍ನ್ನು ಹುಡುಕಿಕೊಟ್ಟಿರುವ ಪೊಲೀಸರು ನಜೀಬನನ್ನೇಕೆ ಹುಡುಕುತ್ತಿಲ್ಲ ಎಂದು ಪ್ರಶ್ನಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಝೌರೇಝ್ ಮಷಾಯಿಖ್, ಪ್ರತಿವರ್ಷ ತನ್ನ ಜನ್ಮದಿನದಂದು ತಾಯಿಯನ್ನು ಭೇಟಿ ಮಾಡುವ ಪ್ರಧಾನಿಗಳಿಗೆ ನಾವು ನೆನಪಿಸುವುದೇನಂದರೆ ಪ್ರತಿವರ್ಷ ನಜೀಬ್ ನ ಜನ್ಮದಿನಾಚರಣೆಯಾಗುತ್ತೇ ಆತನ ತನ್ನ ಮಗನ ಬರುವಿಕೆಗಾಗಿ ಕಾಯುತ್ತಿದ್ಧಾಳೆ ನಿಮಗೆ ನಿಮ್ಮ ತಾಯಿಯನ್ನು ಕಾಣುವ ಆತುರ ಹೇಗೂ ಹಾಗೆಯೇ ನಜೀಬ್ ತಾಯಿಗೆ ತನ್ನ ಮಗನನ್ನು ಕಾಣುವ ಆತುರವಿದೆ ಪ್ರಧಾನಿಗಳೇ ನಜೀಬ್ ನನ್ನು ಹುಡುಕಿಕೊಡಿ ಎಂದು ಒತ್ತಾಯಿಸಿದರು.  

ಎಸ್.ಐ.ಓ ಅಧ್ಯಕ್ಷ ಸನಾವುಲ್ಲಾ ಅಸಾದಿ ಮಾತನಾಡಿ ನಜೀಬ್ ನನ್ನು ಹುಡುಕದೇ ಇದ್ದರೆ ಇಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ನಜೀಮ್ ಮತ್ತು ರೋಹಿತ್ ವೆಮುಲನಾಗಿ ಕೇಂದ್ರ ಯುನಿವರ್ಸಿಟಿ ತಲುಪಬೇಕಾದೀತು ಎಂದರು. 

ಜಮಾಅತೆ ಇಸ್ಲಾಮಿ ಹಿಂದ್ ಉತ್ತರಕನ್ನಡ ಜಿಲ್ಲಾ ಸಂಚಾಲಕ ತಲ್ಹಾ ಸಿದ್ದಿಬಾಪ ಮಾತನಾಡಿ, ವಿದ್ಯಾರ್ಥಿಗಳಿಗೆ ಸುರಕ್ಷತೆ ಬೇಕಾಗಿದೆ. ನಾವು ಇಂದು ಪ್ರತಿಭಟನೆಯ ಮೂಲಕ ನಜೀಬ್ ನ ವಾಸ್ತವಿಕತೆಯನ್ನು ಜನರ ಮುಂದೆ ತರಬೇಕೆಂದು ಆಗ್ರಹಿಸುತ್ತೇವೆ. ಮೂರು ವರ್ಷಗಳು ಕಳೆದರೂ ಓರ್ವ ವ್ಯಕ್ತಿಯ ಪತ್ತೆಯನ್ನು ಮಾಡದ ಪೊಲೀಸ್ ಇಲಾಖೆಯ ಮೇಲೆ ನಮಗೆ ಅನುಮಾನ ಮೂಡುವಂತಾಗಿದೆ ಎಂದರು.

ನಜೀಬ್ ಆಹ್ಮದ್ ರನ್ನು ಮರಳಿ ತರಬೇಕು, ಜೆ.ಎನ್.ಯು. ನಿಂದ ಬಲವಂತವಾಗಿ ಕಣ್ಮರೆಯಾಗುವ ಮೊದಲು ನಜೀಮ್ ಮೇಲೆ ಹಲ್ಲೆ ನಡಿಸಿದ ಎ.ಬಿ.ವಿ.ಪಿ. ಸದಸ್ಯರನ್ನು ಬಂಧಿಸಿ ತನಿಖೆ ನಡೆಸಬೇಕು, ಆದಷ್ಟು ಬೇಗ ನ್ಯಾಯ ದೊರಕಬೇಕು ಎಂಬ ಭರವಸೆಯನ್ನು ವಿದ್ಯಾರ್ಥಿ ಸಮುದಾಯಕ್ಕೆ ನೀಡುವುದು ಮತ್ತು ರಾಷ್ಟ್ರದ್ಯಂತ ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಮುದಾಯಕ್ಕೆ ಅವರ ಸುರಕ್ಷತೆಯ ಬಗ್ಗೆ ಭರವಸೆ ನೀಡಬೇಕು ಎಂಬ ಬೇಡಿಕೆಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ. 

Read These Next

ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ...