ಜೀವದ ಹಂಗು ತೊರೆದು ಪ್ರವಾಸಿಗರನ್ನು ರಕ್ಷಿಸಿದ ಜೀವರಕ್ಷಕ ದಳ

Source: S O News Service | By Staff Correspondent | Published on 14th July 2019, 10:07 PM | Coastal News | Don't Miss |

ಭಟ್ಕಳ :ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಇಂಜಿನಿಯರ್ ಗಳನ್ನು ಲೈಪ್ ಗಾರ್ಡ ಗಳು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ  ಶನಿವಾರ ಜರಗಿದೆ.

ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದ ಐದು ಜನ ಗೆಳೆಯರ ತಂಡ ಸಮುದ್ರದ ಅರ್ಭಟವನ್ನು ಲೆಕ್ಕಿಸದೆ  ಸಮುದ್ರದಲ್ಲಿ ಈಜಲು ತೆರಳಿದ್ದಾಗ ಸಮುದ್ರದಲೆಗಳ ಸೆಳೆತಕ್ಕೆ ಸಿಲುಕಿ ನೀರುಪಾಲಾಗುತ್ತಿದ್ದರು. ಇದನ್ನು ಕಂಡ  ಲೈಪ್ ಗಾರ್ಡಗಳು ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರುಜನರನ್ನು ರಕ್ಷಣೆ ಮಾಡಿದ್ದಾರೆ.

ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್ ಎಸ್.ಸಿ (೨೪), ಆನಂದ್ (೨೪), ಸುರೇಶ್ (೨೪) ಎಂಬುವವರೇ ಜೀವರಕ್ಷಕ ದಳದ ತಂಡದವರಿಂದ  ರಕ್ಷಣೆಗೊಳಗಾದವರಾಗಿದ್ದು ಎಂದು ಗುರುತಿಸಲಾಗಿದೆ.

ಶಶಿಧರ್ ನಾಯ್ಕ, ಚಂದ್ರಶೇಖರ್ ಹರಿಕಾಂತ್ ರಕ್ಷಣೆ ಮಾಡಿದ ಲೈಪ್ ಗಾರ್ಡಗಳಾಗಿದ್ದಾರೆ. ಘಟನೆ ಸಂಬಂಧ ಮುರುಡೇಶ್ವರ  ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...