ನಾಸಿಕ್: ಆಸ್ಪತ್ರೆಯಲ್ಲಿ ಆಮ್ಲಜನಕ ಟ್ಯಾಂಕ್ ಸೋರಿಕೆ ಕನಿಷ24 ಕೊರೋನಸೋಂಕಿತರ ಸಾವು

Source: VB | By S O News | Published on 22nd April 2021, 3:29 PM | National News |

ನಾಸಿಕ್: ಇಲ್ಲಿಯ ಝಾಕಿರ್ ಹುಸೇನ್ ಆಸ್ಪತ್ರೆಯ ಹೊರ ಆವರಣದಲ್ಲಿಯ ಟ್ಯಾಂಕ್‌ನಿಂದ ಬುಧವಾರ ನಸುಕಿನಲ್ಲಿ ಆಮ್ಲಜನಕ ಸೋರಿಕೆಯುಂಟಾಗಿ ಕನಿಷ್ಠ 24 ಕೋವಿಡ್-19  ರೋಗಿಗಳು ದಾರುಣ ಸಾವನ್ನಪ್ಪಿದ್ದಾರೆ.

ಸೋರಿಕೆಯಿಂದಾಗಿ ಆಮ್ಲಜನಕ ಪೂರೈಕೆಯು ಸುಮಾರು 30 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಎಲ್ಲ ರೋಗಿಗಳು ವೆಂಟಿಲೇಟರ್‌ ಗಳಲ್ಲಿದ್ದರು ಮತ್ತು ನಿರಂತರ ಆಮ್ಲಜನಕ ಪೂರೈಕೆ ಅಗತ್ಯವಾಗಿತ್ತು. ನಾಸಿಕ್ ಮಹಾನಗರ ಪಾಲಿಕೆ ಅಧೀನದ ಝಾಕಿರ್ ಹುಸೇನ್ ಆಸ್ಪತ್ರೆಯು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಿಯೋಜಿತಗೊಂಡಿದೆ.

ಸದ್ಯದ ಮಾಹಿತಿಯಂತೆ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ 24 ರೋಗಿಗಳು

ನಾಸಿಕ್‌ನ ಆಸ್ಪತ್ರೆಯಲ್ಲಿ ಆಮ್ಲಜನಕ ಸೋರಿಕೆಯಿಂದ ಸಂಭವಿಸಿರುವ ಅವಘಡವು ತೀವ್ರ ನೋವನ್ನುಂಟು ಮಾಡಿದೆ. ಅದರಿಂದಾದ ಜೀವಹಾನಿಯು ದುಃಖದಾಯಕವಾಗಿದ್ದು,ಮೃತರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪಗಳು.

॥  ನರೇಂದ್ರ ಮೋದಿ, ಪ್ರಧಾನಿ

ನನ್ನ ದುಃಖವನ್ನು ಶಬ್ದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಪ್ರತಿ ಯೊಬ್ಬ ಕೋವಿಡ್-19 ರೋಗಿ ಯನ್ನು ಉಳಿಸಲು ನಾವು ತೀವ್ರ ಪ್ರಯತ್ನಗಳನ್ನು ಮಾಡುತ್ತಿರುವಾಗ ಇಂತಹ ಘಟನೆಗಳು ವಿನಾಶಕಾರಿಯಾಗಿವೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹೇಗೆ ಸಾಂತ್ವನಗೊಳಿಸುವುದು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಇದೊಂದು ಆಕಸ್ಮಿಕವಾಗಿದ್ದರೂ ಈ ಬಗ್ಗೆ ವಿವರವಾದ ತನಿಖೆಯನ್ನು ನಡೆಸಲಾಗುವುದು.

॥ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯ ಮಂತ್ರಿ

ನಾ ಸಿಕ್‌ನ ಝಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಅತ್ಯಂತ ದುಃಖದಾಯಕವಾಗಿದೆ. ಶೋಕತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು.

॥ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

ಮೃತಪಟ್ಟಿದ್ದಾರೆ. ಮಹಾನಗರ ಪಾಲಿಕೆಯು ತಕ್ಷಣವೇ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆಯಿಲ್ಲದ ಇತರ ಆಸ್ಪತ್ರೆಗಳಿಂದ ಆಮ್ಲಜನಕ ಸಿಲಿಂಡರ್‌ಗಳನ್ನು ಝಾಕಿರ್ ಹುಸೇನ್ ಆಸ್ಪತ್ರೆಗೆ ಸ್ಥಳಾಂತರಿಸಿದೆ ಎಂದು ಜಿಲ್ಲಾಧಿಕಾರಿ ಸೂರಜ್ ಮಾಂಡರೆ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ದುರಂತದ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ್ದ ಶಿವಸೇನೆ ನಾಯಕ ಸುಧಾಕರ ಬಡಗುಜರ್ ಅವರು,ಸಾವುಗಳ ಸಂಖ್ಯೆ 30-35ಕ್ಕೆ ಏರುವ ಭೀತಿಯನ್ನು ವ್ಯಕ್ತಪಡಿಸಿದರು. ಅಗ್ನಿಶಾಮಕ ದಳ ಮತ್ತು ತಂತ್ರಜ್ಞರ ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.

ಆಮ್ಲಜನಕದ ಅಗತ್ಯವಿರುವ 80 ರೋಗಿಗಳ ಪೈಕಿ 31 ಜನರನ್ನು ಝಾಕಿರ್ ಹುಸೇನ್ ಆಸ್ಪತ್ರೆಯಿಂದ ಇತರ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.

ಬಿಳಿಯ ಹೊಗೆಯ ರೂಪದಲ್ಲಿ ಆಮ್ಲಜನಕ ಸೋರಿಕೆಯು ಸುತ್ತುಮುತ್ತಲಿನ ಪ್ರದೇಶಗಳಿಗೆ ವ್ಯಾಪಿಸುತ್ತಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳು ತೋರಿಸಿವೆ. ದೇಶದಲ್ಲಿ ತೀವ್ರ ಕೊರೋನ ವೈರಸ್ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕ ಪೂರೈಕೆಯ ಕೊರತೆಯ ಬಗ್ಗೆ ಹಾಹಾಕಾರವೆದ್ದಿರುವ ಸಮಯದಲ್ಲಿಯೇ ಈ ಅವಘಡ ಸಂಭವಿಸಿದೆ.

ನಾಸಿಕ್‌ನ ದ್ವಾರಕಾ ಪ್ರದೇಶದಲ್ಲಿರುವ ಝಾಕಿರ್ ಹುಸೇನ್ ಆಸ್ಪತ್ರೆಯ ಆವರಣದಲ್ಲಿ 13,000 ಲೀ.ಸಾಮರ್ಥ್ಯದ ಆಮ್ಲಜನಕ ಟ್ಯಾಂಕ್ ಅನ್ನು ಸ್ಥಾಪಿಸಲಾಗಿತ್ತು. ಮಂಗಳವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಟ್ಯಾಂಕ್‌ನ ಸಾಕೆಟ್‌ವೊಂದು ಮುರಿದು ಸೋರಿಕೆ ಆರಂಭಗೊಂಡಿತ್ತು. ಇದನ್ನು ಗಮನಿಸಿದ ಆಸ್ಪತ್ರೆಯ ಸಿಬ್ಬಂದಿ ರೋಗಿಗಳಿಗೆ ಆಮ್ಲಜನಕ ಪೂರೈಕೆಗಾಗಿ ಜಂಬೋ ಸಿಲಿಂಡರ್ ಗಳನ್ನು ನಿಯೋಜಿಸಿದ್ದರು ಮತ್ತು ಕೆಲವು ರೋಗಿಗಳ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದರು. ನಸುಕಿನ 12:30ರ ಸುಮಾರಿಗೆ ಸೋರಿಕೆ ತೀವ್ರಗೊಂಡಿದ್ದು ಜನರು ಆಸ್ಪತ್ರೆಗಳ ವಾರ್ಡ್‌ಗಳಿಗೆ ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯನ್ನುಂಟು ಮಾಡಿತ್ತು. ಇದೇ ವೇಳೆ ಆಮ್ಲಜನಕದ ಟ್ಯಾಂಕರ್ ವೊಂದು ಆಸ್ಪತ್ರೆಗೆ ಬಂದಿದ್ದು, ಅದರಲ್ಲಿದ್ದ ಮತ್ತು ಆಸ್ಪತ್ರೆಯ ತಂತ್ರಜ್ಞರು ದಾಸ್ತಾನು ಟ್ಯಾಂಕ್‌ನ ಬೀಗವನ್ನೊಡೆದು ವಾಲ್ಟ್ ಅನ್ನು ಮುಚ್ಚುವ ಮೂಲಕ ಇನ್ನಷ್ಟು ಆಮ್ಲಜನಕ ಸೋರಿಕೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಭಾಗಾಧಿಕಾರಿ ರಾಧಾಕೃಷ್ಣ ಗಾಮೆ ತಿಳಿಸಿದರು.

ಘಟನೆಯ ಬಗ್ಗೆ ತನಿಖೆಯನ್ನು ನಡೆಸುವುದಾಗಿ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು, ಈ ರೋಗಿಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಟ್ಯಾಂಕ್‌ನಲ್ಲಿ ಸೋರಿಕೆ ಪತ್ತೆಯಾಗಿದೆ ಎಂದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ನಾಸಿಕ್ ಮಹಾನಗರ ಪಾಲಿಕೆಯು ತನಗೆ ಮಾಹಿತಿ ನೀಡಿದ್ದು, ತಾನು ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.

ನಾಸಿಕ್ ಉಸ್ತುವಾರಿ ಸಚಿವ ಛಗನ್ ಭುಜಬಲ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ಕೇಂದ್ರ ಗೃಹಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪಗಳನ್ನು ಸೂಚಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ ಎಂದು ಹೇಳಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ ಅವರು, ಈ ಬಗ್ಗೆ ವಿಚಾರಣೆ ನಡೆಸುವ ಭರವಸೆಯನ್ನು ನೀಡಿದರು.

ದುರಂತದಲ್ಲಿ ಮೃತರ ಕುಟುಂಬಗಳಿಗೆ ತಲಾ ಐದು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಯಾವುದೇ ರೀತಿಯ ರಾಜಕೀಯದಲ್ಲಿ ತೊಡಗದಂತೆ ಜನರನ್ನು ತಾನು ಕೋರಿಕೊಳ್ಳುತ್ತಿದ್ದೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಆಘಾತವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಸಾಧ್ಯವಿರುವ ಎಲ್ಲ ನೆರವು ಒದಗಿಸುವಂತೆ ರಾಜ್ಯ ಸರಕಾರ ಮತ್ತು ಪಕ್ಷದ ಕಾರ್ಯಕರ್ತರನ್ನು ಕೋರಿಕೊಂಡಿದ್ದಾರೆ.

ಕೋವಿಡ್-19 ರೋಗಿಗಳ ಸಾವುಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ಔಷಧಿ ನಿಯಂತ್ರಣ ಸಚಿವ ರಾಜೇಂದ್ರ ಶಿಂಗಾಣೆ ತಿಳಿಸಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...