ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 200ಮೀ ಎಳೆದುಕೊಂಡು ಹೋದ ಪಿಕ್‍ಅಪ್ ವಾಹನ

Source: sonews | By Staff Correspondent | Published on 1st December 2019, 11:52 PM | Coastal News | Incidents | Don't Miss |

ಭಟ್ಕಳ: ಶಿರಾಲಿಯಿಂದ ಭಟ್ಕಳ ಕಡೆ ಬರುತ್ತಿದ್ದ ಪಿಕ್‍ಅಪ್ ವಾಹನವೊಂದು ವಿದ್ಯುತ್ ಚಾಲಕನ ಅಜಾರೂಕತೆಯಿಂದಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸುಮಾರು 200ಮೀ. ದೂರ ಎಳೆದುಕೊಂಡು ಹೋದ ಘಟನೆ ಭಾನುವಾರ ಇಲ್ಲಿನ ರಾ.ಹೆ.66ರ ಶಿಫಾ ಕ್ರಾಸ್ ಬಳಿ ನಡೆದಿದೆ. 

ಪಿಕ್‍ಅಪ್ ವಾಹನದಲ್ಲಿ ರೇತಿ(ಮರಳು) ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದ್ದು ಶಿರಾಲಿ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದರೂ ಅವರನ್ನು ಚಳ್ಳೆಹಣ್ಣು ತಿನ್ನಿಸಿ ಅತಿವೇಗವಾಗಿ ವಾಹನ ಚಲಾಯಿಸಿಕೊಂಡು ಬಂದ ಕಾರಣ ಶಿಫಾ ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಹೆಸ್ಕಾಂ ಇಲಾಖೆÀಗೆ 15ಸಾವಿರ ರೂ ನಷ್ಟವುಂಟಾಗಿದ್ದು ಅಪಘಾತ ಮಾಡಿದ ವ್ಯಕ್ತಿಯೆ ಹಣವನ್ನು ಭರಿಸಿದ್ದಾನೆ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.  

ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...