ಭಾರತೀಯ 'ಕಫ್ ಸಿರಪ್' ಸೇವನೆ ಉಝಕಿಸ್ತಾನದಲ್ಲಿ 18 ಮಕ್ಕಳ ಸಾವು

Source: Vb | By I.G. Bhatkali | Published on 29th December 2022, 8:02 AM | National News |

ತಾಷ್ಠೆಂಟ್: ಭಾರತೀಯ ಫಾರ್ಮಾಕ್ಯೂಟಿಕಲ್ ಕಂಪೆನಿಯೊಂದು ಉತ್ಪಾದಿಸಿರುವ ಕೆಮ್ಮಿನ ಔಷಧಿ (ಕಫ್ ಸಿರಪ್)ಯ ಅಡ್ಡಪರಿಣಾಮಗಳಿಂದಾಗಿ ದೇಶ' ದಲ್ಲಿ ಮಕ್ಕಳು 18 ಮೃತಪಟ್ಟಿರುವುದಾಗಿ ಉಝಕಿಸ್ತಾನದ ಆರೋಗ್ಯ ಸಚಿವಾಲಯವು ಮಂಗಳವಾರ ತಿಳಿಸಿದೆ.

ಮೃತ ಪಟ್ಟ ಮಕ್ಕಳೆಲ್ಲರೂ ಉತ್ತರಪ್ರದೇಶದ ನೊಯ್ದಾ ಮೂಲದ 'ಮಾರಿಯೊನ್ ಬಯೊಟೆಕ್ ಲಿಮಿಟೆಡ್ ಉತ್ಪಾದಿಸಿರುವ ಡಾಕ್ 1 ಮ್ಯಾಕ್ಸ್ ಸಿರಪ್ ಹಾಗೂ ಶೀತನಿರೋಧಕ ಮಾತ್ರೆಗಳನ್ನು ಸೇವಿಸಿದ್ದರೆಂದು ಅದು ಹೇಳಿದೆ.

ಡಾಕ್ 1 ಮ್ಯಾಕ್ಸ್ ಸಿರಪ್ ಮುಖ್ಯ ಅಂಶವು ಪ್ಯಾರಾಸಿಟಾಮಲ್ ಆಗಿದ್ದು, ಈ ಔಷಧಿಯನ್ನು ಪಾಲಕರು ತಮ್ಮ ಮಕ್ಕಳಿಗೆ ಶೀತನಿರೋಧಕವಾಗಿ ಸ್ವಇಚ್ಛೆಯಿಂದ ಅಥವಾ ಫಾರ್ಮಸಿ ಮಾರಾಟಗಾರರ ಶಿಫಾರಸಿನ ಮೇರೆಗೆ ಅಸಮರ್ಪಕವಾಗಿ ನೀಡಿದ್ದರು. ರೋಗಿಗಳ ಆರೋಗ್ಯ ಪರಿಸ್ಥಿತಿ ಹದಗೆಡಲು ಇದು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ಈ ಕೆ ಮ್ಮಿನ ಔಷಧಿಯಲ್ಲಿ ಎಥಿಲಿನ್ ಗೈಕಾಲ್ ರಾಸಾಯನಿಕವು ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿಕೆ ತಿಳಿಸಿದೆ. ಔಷಧಿ ನಿಯಾಮವಳಿಗಳ ಪ್ರಕಾರ ಕೆಮ್ಮಿನ ಸಿರಪ್‌ ಗಳಲ್ಲಿ ಎಥಿಲಿನ್ ಸ್ಟೈಕಾಲ್‌ನ ಅಂಶಗಳು ಇರಕೂಡದು.

ಗಾಂಬಿಯಾ ಬಳಿಕ ಉಝಿಕ್ ಸರದಿ:
ಔಷಧಿ ಕಂಪೆನಿ ಮೆಡಿಯನ್ ಫಾರ್ಮಾದ ಹರ್ಯಾಣ ಘಟಕ ಉತ್ಪಾದಿಸಿದ ಕೆಮ್ಮಿನ ಸಿರಪ್ ಸೇವಿಸಿ ಕಳೆದ ವರ್ಷ ಸೆಪ್ಟೆಂಬರ್ -ಅಕ್ಟೋಬರ್‌ನಲ್ಲಿ ಆಫ್ರಿಕಾ ಖಂಡದ ರಾಷ್ಟ್ರವಾದ ಗಾಂಬಿಯಾದಲ್ಲಿ, ಕನಿಷ್ಠ 70 ಮಕ್ಕಳು ಮೃತಪಟ್ಟ ಘಟನೆ ಜಾಗತಿಕ ಮಟ್ಟದಲ್ಲಿ ಕಳವಳವನ್ನು ಸೃಷ್ಟಿಸಿತ್ತು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...