ಸಮಾಜದ ಸ್ವಚ್ಚತೆಗೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಿ - ಸಿ.ಆರ್.ಅಶೋಕ್

Source: sonews | By Staff Correspondent | Published on 12th August 2018, 11:48 PM | State News |

ಕೋಲಾರ: ದೇಶದ ಸಮಗ್ರ ಸ್ವಚ್ಚತೆ ಕಾಪಾಡಿ ನಿರ್ಮಿಲ ವಾತಾವರಣ ಸೃಷ್ಠಿಸುವಲ್ಲಿ ವಿದ್ಯಾರ್ಥಿ ಯುವ ಜನರ ಪಾತ್ರ ಮುಖ್ಯವಾಗಿದ್ದು, ತಮ್ಮ ಗ್ರಾಮ, ಮನೆ, ಚರಂಡಿ ಸೇರಿದಂತೆ ಇಡೀ ಸಮಾಜ ಸ್ವಚ್ಚತೆಗೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಸಲಹೆ ನೀಡಿದರು.
    
ತಾಲ್ಲೂಕಿನ ಹರಟಿಯಲ್ಲಿ ಶನಿವಾರ ನೆಹರು ಯುವ ಕೇಂದ್ರ, ಗ್ರಾಮ ಪಂಚಾಯಿತಿ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಪಕ್ವಾಡ ಜಾಥಾಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡುತ್ತಿದ್ದರು.
    
ದೇಶದ ಪ್ರಧಾನ ಮಂತ್ರಿಗಳು ಕಸಗುಡಿಸಲು ಮುಂದಾಗುತ್ತಿರುವುದನ್ನು ಮಾದರಿಯನ್ನಾಗಿಸಿಕೊಂಡು ಪ್ರತಿಯೊಬ್ಬ ಪ್ರಜೆಯನ್ನು ಸ್ವಚ್ಚತೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಳ್ಳಬೇಕು. ಈಗಾಗಲೇ ರಾಜ್ಯದಲ್ಲಿ 22 ಲಕ್ಷ 20 ಸಾವಿರದ 39 ಶೌಚಾಲಯ ನರ್ಮಿಸಿದ್ದು, ಇನ್ನು 5 ಲಕ್ಷ 53164 ಶೌಚಾಲಯ ನಿರ್ಮಿಸಲು ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.
    
ಗಾಂಧೀ ಜಯಂತಿ ಸಂದರ್ಭಕ್ಕೆ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಯಲು ಬಹಿರ್ದೆಸೆ ಮುಕ್ತ ವಾತಾವರಣ ನಿರ್ಮಿಸಲು ನೆರವಾಗಬೇಕಾಗಿದೆ ಎಂದರು.

ನೆಹರು ಯುವ ಕೇಂದ್ರದ ಎಸ್.ಪ್ರವೀಣ್ ಕುಮಾರ್ ಮಾತನಾಡಿ ಮಾನ್ಯ ಪ್ರಧಾನ ಮಂತ್ರಿಗಳ ಪ್ಲಾಗ್‍ಶೀಫ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ಆಗಸ್ಟ್ 1 ರಿಂದ ಕಾರ್ಯೋನ್ಮುಖರಾಗಿದ್ದು, 15 ಆಗಸ್ಟ್‍ವರೆಗೂ ಸ್ವಚ್ಚತ ಪಕ್ವಾಡ್ ಮೂಲಕ ಹತ್ತು ಹಲವಾರು ಕಾರ್ಯಕ್ರಮಗಳಿಂದ ಜಾಗೃತಿ ಉಂಟುಮಾಡಲಾಗುತ್ತಿದೆ. ಹಾಗಾಗಿ ಎಲ್ಲರೂ ದೇಶಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಎಂದರು.

ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ಮಾತನಾಡಿ ಸ್ವಾತಂತ್ರ್ಯಕ್ಕಿಂತಲೂ ಸ್ವಚ್ಚತೆಯೇ ಶ್ರೇಷ್ಠ ಎಂಬ ಗಾಂದೀಜಿಯವರ ಸ್ವಚ್ಚತೆ ಪಾಠ ಎಲ್ಲಿರಗೂ ಮುಟ್ಟಬೇಕು ಎಂದರು.

ಜಾಥಾ-ಸಭೆ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ವೆಂಕಟರಾಮ್, ಎನ್.ವೈ.ಕೆ. ಪಾಲ್ ಹೆರಾಲ್ಡ್, ನಾರಾಯಣಸ್ವಾಮಿ, ಅದ್ಯಾಪಕರುಗಳಾದ ಎಂ.ಕೃಷ್ಣಪ್ಪ, ಪಿ.ಎಂ. ಗೋವಿಂದಪ್ಪ, ಎಂ.ಆರ್.ಮೀನಾ, ಆರ್.ಮಂಜುಳ, ಎಂ.ಮುನಿಯಪ್ಪ, ಕೆ. ಮಮತಾ, ಗ್ರಾಮ ಪಂಚಾಯಿತಿ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಜಾಥಾ ಮೂಲಕ ಪ್ರತಿ ಮನೆಗೂ ಬೇಟಿ ನೀಡಿ ಜನಜಾಗೃತಿ ಮೂಡಿಸಲಾಯಿತು.
                                
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...