ಧ್ವನಿಯಿಲ್ಲದವರಿಗೆ ಧ್ವನಿಯಾದ ವಾರ್ತಾ ಭಾರತಿ: ಮಾಜಿ ಸಿಎಂ ಸಿದ್ದರಾಮಯ್ಯ

Source: sonews | By Staff Correspondent | Published on 5th December 2018, 5:58 PM | State News |

"ವಾರ್ತಾ ಭಾರತಿ ಧ್ವನಿಯಿಲ್ಲದವರಿಗೆ ಧ್ವನಿಯಾಗಿ, ಪರಿಣಾಮಕಾರಿಯಾಗಿ ಬರುತ್ತಿದೆ. ಪತ್ರಿಕೆಗಳು ಧ್ವನಿಯಿಲ್ಲದ ಜನರಿಗೆ ಧ್ವನಿಯಾಗಬೇಕಾದದ್ದು ಈ ಸಂದರ್ಭದ ಅತ್ಯಂತ ಮುಖ್ಯ ಕೆಲಸವಾಗಿದೆ. ಈ ಕೆಲಸ ಮಾಡುತ್ತಿರುವ ವಾರ್ತಾ ಭಾರತಿ ಪತ್ರಿಕೆಯ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ವಾರ್ತಾ ಭಾರತಿಯನ್ನು ಪ್ರತಿ ದಿನ ಓದುತ್ತಿದ್ದೇನೆ. ಈ ಪತ್ರಿಕೆ ತಳ ವರ್ಗಗಳ ಪರವಾಗಿ ಅತ್ಯುತ್ತಮ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಪತ್ರಿಕೆ ನಾಡಿನ ಉದ್ದಗಲಕ್ಕೆ ಎಲ್ಲರಿಗೂ ತಲುಪುವಂತಾಗಲಿ" ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಗರಾಭಿವೃದ್ಧಿ, ವಸತಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಝಮೀರ್ ಅಹ್ಮದ್, ಶಾಸಕ ಎನ್.ಎ. ಹಾರಿಸ್, ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮಜ್ಲಿಸೆ ಇಸ್ಲಾಹ್ -ವ- ತಂಝೀಮ್ ಭಟ್ಕಳ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಝಿಯ, ವಾರ್ತಾ ಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ, ವಿಶ್ವಾಸ್ ಬಾವಾ ಬಿಲ್ಡರ್ಸ್ ಆಡಳಿತ ನಿರ್ದೇಶಕ ಅಬ್ದುಲ್ ರವೂಫ್ ಪುತ್ತಿಗೆ, ಬೆಂಗಳೂರಿನ ಹಮೀದ್ ಶಾ ಟ್ರಸ್ಟ್ ಅಧ್ಯಕ್ಷ ಜಿ.ಎ. ಬಾವಾ, ವಾರ್ತಾಭಾರತಿಯ ಬೆಂಗಳೂರು ಬ್ಯೂರೊ ಮುಖ್ಯಸ್ಥ ಬಸವರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಎಸ್.ಎಂ. ಅಲಿ, ಹಿರಿಯ ವರದಿಗಾರ ಪ್ರಕಾಶ್, ಓದುಗರ ಪ್ರತಿನಿಧಿಗಳಾದ ಧನಲಕ್ಷ್ಮೀ ಪಿ ಮಂಡ್ಯ, ಸಂಜೀವ್ ಕುಮಾರ್ ರಾಯಚೂರು ಮೊದಲಾದವರು ಭಾಗವಹಿಸಿದ್ದರು.

ವಾರ್ತಾಭಾರತಿ ಪತ್ರಿಕೆಯು ಉತ್ತಮವಾಗಿ ಮೂಡಿ ಬರುತ್ತಿದೆ. ಇದೇ ರೀತಿ ಭವಿಷ್ಯದಲ್ಲಿಯೂ ಈ ಪತ್ರಿಕೆ ಬೆಳೆದು, ಜನಪರವಾಗಿ ಕೆಲಸ ಮಾಡಲಿ

- ಸಚಿವ ಝಮೀರ್ ಅಹ್ಮದ್‌ ಖಾನ್

‘ಉಳ್ಳವರಿಗೆ ಬಹುಪರಾಕ್ ಹೇಳಲು ಬಹಳಷ್ಟು ಪತ್ರಿಕೆಗಳಿವೆ. ಆದರೆ, ಧ್ವನಿ ಇಲ್ಲದವರ ಪರ ‘ವಾರ್ತಾ ಭಾರತಿ ಪತ್ರಿಕೆ’ ನಿಂತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಈ ಪತ್ರಿಕೆ ರಾಜ್ಯಾದ್ಯಂತ ಪಸರಿಸಬೇಕು, ಜತೆಗೆ ಎಲ್ಲ ಜನರಿಗೆ ತಲುಪಬೇಕು. 16ನೆ ವರ್ಷದ ವಾರ್ಷಿಕ ವಿಶೇಷಾಂಕ ಬಹಳ ಅದ್ಭುತವಾಗಿ ಮೂಡಿಬಂದಿದೆ’

- ಧನಲಕ್ಷ್ಮೀ ಪಿ. ಓದುಗ ಪ್ರತಿನಿಧಿ ಮಂಡ್ಯ 

‘ಶೋಷಿತ ವರ್ಗದ ಜನರೆಲ್ಲರೂ ತಪ್ಪದೇ ಓದಲೇಬೇಕಾದ ಪತ್ರಿಕೆಯೇನಾದರೂ ಇದ್ದರೆ, ಅದು ವಾರ್ತಾ ಭಾರತಿ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ತನ್ನ ವಾರ್ಷಿಕ ವಿಶೇಷಾಂಕ ಬಿಡುಗಡೆಗೆ ಓದುಗ ಪ್ರತಿನಿಧಿಯನ್ನು ಕರೆಸಿದ್ದು, ಈ ಪತ್ರಿಕೆಯ ವೈಶಿಷ್ಟತೆಗೆ ಸಾಕ್ಷಿಯಾಗಿದೆ’

-ಸಂಜೀವ್‌ ಕುಮಾರ್ ಓದುಗ ಪ್ರತಿನಿಧಿ ರಾಯಚೂರು

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...