ಉತ್ತರ ಕೊರಿಯಾದ ಮೇಲೆ ಅಮೆರಿಕ ಬಾಂಬರ್‌, ಯುದ್ಧ ವಿಮಾನಗಳ ಹಾರಾಟ: ಯುದ್ಧ ಭೀತಿ

Source: TNN/VK | By I.G. Bhatkali | Published on 25th September 2017, 1:39 AM | Global News | Don't Miss |

ಸೋಲ್‌/ಬೀಜಿಂಗ್‌:  ಉತ್ತರ ಕೊರಿಯಾ ಮತ್ತು ಅಮೆರಿಕ ನಡುವೆ ಹೆಚ್ಚುತ್ತಿರುವ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರುವ ಯುದ್ಧಭೀತಿ ಈಗ ಮತ್ತಷ್ಟು ಹೆಚ್ಚಿದೆ.

ಅಮೆರಿಕ ಮತ್ತು ವಿಶ್ವಸಂಸ್ಥೆಯ ವಿರೋಧದ ನಡುವೆಯೂ 6 ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿರುವ ಉತ್ತರ ಕೊರಿಯಾ ಶುಕ್ರವಾರ ಗುಪ್ತವಾಗಿ ಮತ್ತೊಂದು ಅಂತಹದ್ದೇ ದುಸ್ಸಾಹಸ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ತನ್ನ ಬಾಂಬರ್‌ಗಳನ್ನು, ಯುದ್ಧ ವಿಮಾನಗಳು ಉತ್ತರ ಕೊರಿಯಾದ ಗಡಿ ಭಾಗದಲ್ಲಿ ಹಾರಾಟ ನಡೆಸಿವೆ.

ಇದು ಉತ್ತರ ಕೊರಿಯಾಕ್ಕೆ ಅಮೆರಿಕ ನೀಡಿರುವ ಸ್ಪಷ್ಟ ಎಚ್ಚರಿಕೆಯಾಗಿದೆ. ನಮ್ಮ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಲು ಈ ಯುದ್ಧ ವಿಮಾನಗಳನ್ನು ಉತ್ತರ ಕೊರಿಯಾದ ಗಡಿ ಭಾಗದಲ್ಲಿ ಹಾರಾಟ ನಡೆಸಲಾಗಿದೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಉತ್ತರ ಕೊರಿಯಾ ನಡೆಸಿರುವ ಕ್ಷಿಪಣಿ ಪರೀಕ್ಷೆಯ ನಂತರ ಈ ಭಾಗದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಕೊರಿಯಾ ನಡೆಸಿರುವ ಅಣ್ವಸ್ತ್ರ ಪರೀಕ್ಷೆಯೇ ಕಾರಣವಿರಬಹುದೆಂದು ಚೀನಾ ಸಮೇತ ಹಲವು ದೇಶಗಳು ಬಲವಾಗಿ ಶಂಕಿಸಿವೆ.

ಗ್ವುವಾಮ್‌ ವಾಯು ನೆಲೆಯಿಂದ B-1B ಬಾಂಬರ್‌ಗಳು ಹಾಗೂ ಜಪಾನಿನ ಒಕಿನಾವ ವಾಯುನೆಲೆಯಲ್ಲಿ F-15C ಈಗಲ್‌ ಯುದ್ಧ ವಿಮಾನಗಳು ಉತ್ತರ ಕೊರಿಯಾದ ಅಂತಾರಾಷ್ಟ್ರೀಯ ವಾಯು ಗಡಿಯಲ್ಲಿ ಹಾರಾಟ ನಡೆಸಿವೆ.

ಭೂಕಂಪನದ ಕೇಂದ್ರ ಬಿಂದು ಉತ್ತರ ಕೊರಿಯಾದ ಅಣುಬಾಂಬ್‌ ಪರೀಕ್ಷಾ ಕೇಂದ್ರದ ಬಳಿಯೇ ಇರುವುದು ಈ ಕುರಿತ ಶಂಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹಿಂದೆಯೂ ಅಣ್ವಸ್ತ್ರ ಪರೀಕ್ಷೆ ನಡಸಿದ್ದಾಗ ಕೊರಿಯಾ ಸುತ್ತಮುತ್ತಲೂ 4.3ರಿಂದ 6.3 ತೀವ್ರತೆಯ ಕಂಪನಗಳು ಉಂಟಾಗಿದ್ದರಿಂದ ಈ ಬಾರಿಯ ಭೂಕಂಪಕ್ಕೂ ಇದೇ ಕಾರಣವಿರಬಹುದೆಂದು ತಜ್ಞರು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಉತ್ತರ ಕೊರಿಯವನ್ನು ನಿರ್ನಾಮ ಮಾಡುವ ಬೆದರಿಕೆಯನ್ನು ಒಡ್ಡಿದ್ದರು. ಅಲ್ಲದೆ ಟ್ರಂಪ್‌ ಮತ್ತು ಕಿಮ್‌ ಇಬ್ಬರೂ ನಾಯಕರು ಶುಕ್ರವಾರ ಪರಸ್ಪರ ಕೀಳು ಪದಗಳನ್ನು ಬಳಸಿ ವಾಗ್ದಾಳಿ ನಡೆಸಿಕೊಂಡಿದ್ದರು.

Read These Next

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...