ಮಾತೃಭೂಮಿ ಹಾಗೂ ಮಾತೃಭಾಷೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ:ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ

Source: S.O. News Service | By MV Bhatkal | Published on 12th August 2018, 9:39 PM | State News |

ಹುಬ್ಬಳ್ಳಿ:ಮಾತೃಭಾಷೆ ಮತ್ತು ಮಾತೃಭೂಮಿಗಿಂತ ಮಿಗಿಲಾದದ್ದು ಯಾವುದೂ ಇಲ್ಲಾ, ರಾಮಾಯಣ ಮಹಾಕಾವ್ಯದಲ್ಲಿ ರಾಮನು “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರಿಯಸಿ” ಎಂದು ಹೇಳಿರುವುದು ತಾಯಿ ನುಡಿ ಮತ್ತು ಹುಟ್ಟಿದ ನೆಲದ ಹಿರಿಮೆಯನ್ನು ಎತ್ತಿ ಹೇಳುತ್ತದೆ. ನ್ಯಾಯಾಲಯಗಳು ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಹೊಂದುವುದರ ಜೊತೆಗೆ ತ್ವರಿತ ನ್ಯಾಯ ವಿಲೇವಾರಿ ಮಾಡಿ ಪ್ರತಿಯೊಬ್ಬ ನಾಗರಿಕರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು. ಸಂವಿಧಾನ ಮತ್ತು ನ್ಯಾಯದ ಪಾಲನೆಗೆ ಎಳ್ಳಷ್ಟೂ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಭಿಪ್ರಾಯ ಪಟ್ಟರು. 
ಕರ್ನಾಟಕ ಉಚ್ಛನ್ಯಾಯಾಲಯ , ಕರ್ನಾಟಕ ಸರ್ಕಾರ ಹಾಗೂ ಹುಬ್ಬಳ್ಳಿ ವಕೀಲರ ಸಂಘದ ಆಶ್ರಯದಲ್ಲಿಂದು ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ, ೧೨೨ ಕೋಟಿ ರೂ.ಗಳ ವೆಚ್ಚದಲ್ಲಿ ಮ.ತಿಮ್ಮಸಾಗರದಲ್ಲಿ ನಿರ್ಮಾಣಗೊಂಡಿರುವ ಹುಬ್ಬಳ್ಳಿ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. 
ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ ಮುಖ್ಯ ನ್ಯಾಯಮೂರ್ತಿಗಳು ಕುವೆಂಪು ವಿರಚಿತ ನಾಡಗೀತೆ ಜಯ ಭಾರತ ಜನನಿಯ ತನುಜಾತೆ ... ಹಾಡಿನ ಸಾಲುಗಳನ್ನು ಪ್ರಸ್ತಾಪಿಸುವ ಮೂಲಕ ದೇಶ ಹಾಗೂ ಹುಟ್ಟಿದ ನೆಲದ ಹಿರಿಮೆಯನ್ನು ಪ್ರಸ್ತಾಪಿಸಿದರು. ಸುಪ್ರಿಕೋರ್ಟನಲ್ಲಿ ಸಹದ್ಯೊಗಿಗಳಾಗಿರುವ ನ್ಯಾಯಮೂರ್ತಿಗಳಾಗಿರುವ ನ್ಯಾ. ಎಸ್ ಅಬ್ದುಲ್ ನಜೀರ್ ಹಾಗೂ ನ್ಯಾ.ಮೋಹನ ಎಂ ಶಾಂತನಗೌಡರ್ ಅವರ ಒತ್ತಾಸೆಯ ಮೇರೆಗೆ ಹುಬ್ಬಳ್ಳಿ ನ್ಯಾಯಾಲಯದ ಉದ್ಘಾಟನೆಗೆ ಬಂದಿದ್ದೆÃನೆ. ಈ ಕಾರ್ಯ ನನಗಷ್ಟೆ ಅಲ್ಲ ಇಡೀ ನಾಡಿಗೆ ಸಂತಸ ಉಂಟುಮಾಡುವ ರೀತಿಯಲ್ಲಿ ನಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಸ್ಥಳೀಯ ಜನರು ಮಳೆಯ ನಡುವೆಯೂ ಕೊಡೆ ಹಿಡಿದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಕಂಡಾಗ ಇದು ಎಲ್ಲರ ಕುಟುಂಬದ ಕಾರ್ಯಕ್ರಮವಾಗಿ ಸಮಸ್ತ ಜನತೆಯ ಮನದಲ್ಲಿ ಸ್ಥಾನ ಪಡೆದಿದೆ ಎಂಬುದು ಸ್ಪಷ್ಟವಾಗುತ್ತದೆ. ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗಗಳು ಎಲ್ಲರ ಕಲ್ಯಾಣಕ್ಕಾಗಿ, ತ್ವರಿತ ನ್ಯಾಯ ನೀಡಿಕೆಗಾಗಿ ಶ್ರಮಿಸುತ್ತಿವೆ. 
ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ತ್ವರಿತ ನ್ಯಾಯದಾನ ಕಾರ್ಯ ಚುರುಕುಗೊಳಿಸಲು ಎಂಬಿಎ ಪದವಿಧರರನ್ನು ಕೋರ್ಟ ಮ್ಯಾನೇಜರುಗಳಾಗಿ ನೇಮಿಸುವುದು ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಆಯಾ ರಾಜ್ಯಗಳ ಹೈಕೊರ್ಟಗಳು ಕಾರ್ಯೋನ್ಮುಖವಾಗಬೇಕು. ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಮತ್ತು ಅವರ ಅಭಿವೃದ್ಧಿಯನ್ನೂ ಸಹ ಗಮನದಲ್ಲಿ ಇಟ್ಟುಕೊಳ್ಳಬೇಕು. ಸಮಾನತೆ, ಗುಣಮಟ್ಟದ ವೃತ್ತಿಮೌಲ್ಯಗಳನ್ನು ವಕೀಲರು ಎತ್ತಿ ಹಿಡಿಯಬೇಕು ಎಂದರು. ಕನ್ನಡ ಕಲಿಯುವ ಮನಸ್ಸು ಬಹಳ ಇದೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೆÃನೆ. ಇಲ್ಲಿನ ಜನ ಹಾಗೂ ಭಾಷೆಯ ಬಗ್ಗೆ ನನಗೆ ಅಪಾರ ಪ್ರಿÃತಿ ಇದೆ ಎಂದು ಅವರು ಹೇಳಿದರು. 
ಸುಪ್ರಿಂಕೋರ್ಟ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮಾತನಾಡಿ, ಶಬರಿಯು ಶ್ರಿÃರಾಮನಿಗಾಗಿ ಕಾದ ಹಾಗೆ ಹುಬ್ಬಳ್ಳಿಯ ನೂತನ ನ್ಯಾಯಾಲಯಗಳ ಸಂಕೀರ್ಣವು ಭಾರತದ ಮುಖ್ಯ ನ್ಯಾಯಮೂರ್ತಿಗಳ ಆಗಮನಕ್ಕಾಗಿ ಕಾಯುತ್ತಿತ್ತೆÃನೋ ಎಂಬಂತೆ ಆಗಿತ್ತು.  ಉದ್ಘಾಟನೆ ಕಾರ್ಯಕ್ರಮ ಕಳೆದ ಎರಡೂವರೆ  ವರ್ಷಗಳಿಂದ ಮುಂದೂಡಲ್ಪಡುತ್ತಲೇ ಬಂದಿತು, ಈ ಸುರ್ವಣ ಘಳಿಗೆ ಇಂದು ಸಾಕಾರವಾಗಿರುವುದು ಸಂತಸ ತಂದಿದೆ ಎಂದರು. 
ಸುಪ್ರಿಂಕೋರ್ಟನ ಇನ್ನೊರ್ವ ನ್ಯಾಯಮೂರ್ತಿ ಮೋಹನ್ ಎಂ ಶಾಂತನಗೌಡರ್ ಮಾತನಾಡಿ, ಕನ್ನಡ ಸೇರಿದಂತೆ ಯಾವುದೇ ಮಾತೃ ಭಾಷೆಗಳಲ್ಲಿ ಸಮರ್ಥವಾಗಿ ಅಧ್ಯಯನ ಮಾಡಿದಾಗ ಉನ್ನತ ಸಾಧನೆ ಮಾಡಲು ಸಾಧ್ಯ. ನಾನೂ ಕೂಡ ಕನ್ನಡ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿದ್ದೆÃನೆ. ಭಾರತದ ಮುಖ್ಯ ನ್ಯಾಯಮೂರ್ತಿಗಳೂ ಸಹ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಮಾತೃಭಾಷೆಯಾದ ಒಡಿಯಾ ಭಾಷೆಯಲ್ಲಿಯೇ ಪೂರೈಸಿದ್ದಾರೆ. ಹುಬ್ಬಳ್ಳಿಯ ಈ ಕಾರ್ಯಕ್ರಮಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಕರೆತರುವ ಮೂಲಕ ಹುಟ್ಟಿದ ನೆಲದ ಹಾಗೂ ನಾನು ಕೆಲಸ ಮಾಡಿದ ಹುಬ್ಬಳ್ಳಿ ಧಾರವಾಡ ವಕೀಲರ ಸಂಘಗಳ ಋಣ ತೀರಿಸಿದ್ದೆÃನೆ ಎಂದರು. ತಮ್ಮ ವಕೀಲಿ ವೃತ್ತಿ ಸಮಯದ ದಿನಗಳನ್ನು ಮೆಲಕು ಹಾಕಿದರು. ಸುಂದರವಾದ ಈ ಕಟ್ಟಡದ ಅಂದ ಕೆಡದ ಹಾಗೆ ನಿರ್ವಹಿಸಿ, ಎಲೆ ಅಡಿಕೆ, ತಂಬಾಕು ಹಾಕಿ ಉಗುಳುವವರಿಗೆ ದಂಡ ಹಾಕಬೇಕು ಹಾಗೂ ಅವರಿಂದಲೇ ಸುಣ್ಣ ಹಚ್ಚಿಸಿ ಸ್ವಚ್ಛಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. 
ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನಾಯಮೂರ್ತಿ ದಿನೇಶ್ ಮಾಹೇಶ್ವರಿ ಮಾತನಾಡಿ ಹುಬ್ಬಳ್ಳಿಯ ಅತ್ಯಾಧುನಿಕ ನ್ಯಾಯಾಲಯ ಸಂಕೀರ್ಣವು ನ್ಯಾಯಾಂಗದಲ್ಲಿ ಹೊಸ ವಿದ್ಯಮಾನ ಸೃಷ್ಟಿಸಿದೆ. ಆಕರ್ಷಕ, ಕಲಾತ್ಮಕ ಹಾಗೂ ವೈಭವೋಪೇತವಾಗಿರುವ ಈ ಕಟ್ಟಡ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದುವ ಮೂಲಕ ನಾಡಿಗೆ ಮಾದರಿಯಾಗಿದೆ. ಜನರಿಗೆ ಶಾಂತಿ, ಪ್ರಗತಿ ಹಾಗೂ ಸಮೃದ್ಧಿ ತಂದು ಕೊಡುವಂತಹ ನ್ಯಾಯ ನೀಡಿಕೆ ಚಟುವಟಿಕೆಗಳು ಇಲ್ಲಿ ನಡೆಯಲಿ ಎಂದರು. 
ವಿಧಾನ ಪರಿಷತ್ ಸಭಾಪತಿ ಬಸವರಾe ಹೊರಟ್ಟಿ, ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆÀಟ್ಟರ್, ಸಂಸದ ಪ್ರಹ್ಲಾದ್ ಜೋಷಿ ಮಾತನಾಡಿದರು. 
ಕರ್ನಾಟಕ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ರವಿ ಮಳಿಮಠ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಮ್.ವಿಜಯ ಭಾಸ್ಕರ್, ರಾಜ್ಯ ಅಡ್ವೊÃಕೇಟ್ ಜನರಲ್ ಉದಯ ಹೊಳ್ಳ, ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಈಶಪ್ಪ ಭೂತೆ ವೇದಿಕೆಯಲ್ಲಿ ಇದ್ದರು. 
ಹೈಕೋರ್ಟ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ, ರಾಘವೇಂದ್ರ ಎಸ್ ಚೌಹಾಣ್, ಜಿಲ್ಲಾಧಿಕಾರಿ ಎಂ ದೀಪಾ, ಪೊಲೀಸ್ ಆಯುಕ್ತ ಎಂ.ಎನ್ ನಾಗರಾಜ್, ಜಿ.ಪಂ. ಸಿಇಒ ಸ್ನೆÃಹಲ್ ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತ,  ಸುಪ್ರಮಾ ದೀಪಕ್ ಮಿಶ್ರಾ, ಸುಮನ್ ದಿನೇಶ್ ಮಾಹೇಶ್ವರಿ ಕಾರ್ಯಕ್ರಮದಲ್ಲಿ ಇದ್ದರು. 
ಹುಬ್ಬಳ್ಳಿ ವಕೀಲರ ಸಂಘದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ಸತ್ಕರಿಸಿ, ಗೌರವಿಸಲಾಯಿತು. ನೂತನ ನ್ಯಾಯಾಲಯದ ಆವರಣದಲ್ಲಿ ನ್ಯಾಯಮೂರ್ತಿಗಳು ಹಾಗೂ ಮುಖ್ಯಮಂತ್ರಿಗಳು ಸಸಿಗಳನ್ನು ನೆಟ್ಟರು. 
ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಧಾರವಾಡ ಜಿಲ್ಲಾ ಆಢಳಿತಾತ್ಮಕ ನ್ಯಾಯಾಧೀಶ ಆರ್.ಬಿ.ಬೂದಿಹಾಳ ಸ್ವಾಗತಿಸಿದರು. ಶಂಕರ್ ಪ್ರಕಾಶ್ ಹಾಗೂ ಅಪರ್ಣಾ ನಿರೂಪಿಸಿದರು. ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷ ಎ.ವಿ.ಬಳಿಗಾರ ವಂದಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...