“ಭಾರತದ ವೀರರೆ, ನನಗೆ ನಿಮ್ಮ ರಕ್ತ ನೀಡಿ ; ನಿಮಗೆ ನಾನು ಸ್ವಾತಂತ್ರ್ಯ ಕೊಡುತ್ತೇನೆ”

Source: S O News service | By Staff Correspondent | Published on 19th January 2017, 8:18 PM | Coastal News | Special Report | Don't Miss |

ಜ. ೨೩ ರಂದು ಸುಭಾಷಚಂದ್ರ ಬೋಸ ಜಯಂತಿ ಅಂಗವಾಗಿ ಲೇಖನ


ದಾಸ್ಯದಲ್ಲಿದ್ದ ಭಾರತದ ಜನತೆಗೆ ಮೈನವಿರೇಳಿಸುವ ಈ ಕರೆಯನ್ನು ಕೊಟ್ಟವರು ನೇತಾಜಿ ಸುಭಾಷ್ ಚಂದ್ರ ಬೋಸ.
ಸುಭಾಷಚಂದ್ರ ಬೋಸ ೧೮೯೭ ಜನವರಿ ೨೩ ರಲ್ಲಿ ಓರಿಸ್ಸಾದಲ್ಲಿ ಜನಿಸಿದರು. ಮೆಟ್ರಿಕ್ ಪರೀಕ್ಷೆ ಮುಗಿಸಿ ೧೯೧೩ರಲ್ಲಿ ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜನ್ನು ಸುಭಾಷ ಸೇರಿದರು. ೧೯೧೪ ರಲ್ಲಿ ಕೆಲವು ಮಿತ್ರರ ಒಡಗೂಡಿ ಬ್ರಹ್ಮಚಾರ್ಯ ಮತ್ತು ದೇಶಸೇವೆಯ ವ್ರತಗೊಂಡರು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಾಪಕರೊಬ್ಬರು ಭಾರತದ ಸಂಸ್ಕ್ರತಿಯನ್ನು ಕುರಿತು ಹಗುರವಾಗಿ ಮಾತನಾಡಿದರು. ಸುಭಾಷಚಂದ್ರರೂ ಕೆಲವು ಗೆಳೆಯರೂ ಆ ಅಧ್ಯಾಪಕರನ್ನು ಥಳಿಸಿದರು. ಇದರಿಂದ ಅವರು ಕೆಲವು ದಿನ ಕಾಲೇಜಿನಿಂದ ಹೊರಗಿರಬೇಕಾಯಿತು.
ಆಗಿನ ಕಾಲದಲ್ಲಿ ಐ.ಸಿ.ಎಸ್. ಇಂಡಿಯನ್ ಸಿವಿಲ್ ರ್ವೀಸ್  - ಪಾಸು ಮಾಡಲು ಇಂಗ್ಲೆಂಡಿಗೆ ಹೋಗಬೇಕಾಗಿತ್ತು. ಸುಭಾಷ್‌ಚಂದ್ರ ಬೋಸರು ಹಿರಿಯರ ಮಾತಿಗೆ ಮನ್ನಣೆ ಕೊಟ್ಟು ೧೯೧೯ರಲ್ಲಿ ಪರದೇಶಕ್ಕೆ ಹೋಗಿ ಅಲ್ಲಿ ಐ.ಸಿ.ಎಸ್.ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಹಾಗೆ ತೇರ್ಗಡೆ ಹೊಂದಿದ್ದು ತಮ್ಮ ದೌರ್ಬಲ್ಯ ಎಂದು ಒಂದು ಪತ್ರದಲ್ಲಿ ಸುಭಾಷ್ ಹೇಳಿದ್ದಾರೆ. “ಬ್ರಿಟಿಷ್ ಸರಕಾರದ ಸೇವೆಯ ಗುಲಾಮಗಿರಿ ಬೇಡ. ಮಾತೃಭೂಮಿಯ ಬಂಧ ವಿಮೋಚನೆಗೆ ಈ ಜೀವ ಮೀಸಲೂ” ಎಂದು ನಿರ್ಧರಿಸಿ ಐ.ಸಿ.ಎಸ್. ಪದವಿಗೆ ರಾಜೀನಾಮೆ ಇತ್ತರು.
೧೯೨೧ ರಲ್ಲಿ ಭಾರತಕ್ಕೆ ಹಿಂದಿರುಗಿ ನೇರವಾಗಿ ಗಾಂಧೀಜಿಯನ್ನು ಕಾಣಲು ಹೋದರು. ಆ ವರ್ಷಕ್ಕೆ ನಿರಂಕುಶ ಪ್ರಭುತ್ವದ ವಿರೋಧವಾಗಿ ಗಲಭೆ ನಡೆಸಿದರೆಂಬ ಆರೋಪದ ಮೇಲೆ ಚಿತ್ತರಂಜನದಾಸ್ ಅಬ್ದುಲ್ ಕಲಾಂ ಆಜಾದ್ ಮತ್ತು ಸುಭಾಷರನ್ನು ಸೆರೆಯಲಿಟ್ಟರು. ಆರು ತಿಂಗಳ ನಂತರ ಬೋಸರ ಬಿಡುಗಡೆಯಾಯಿತು.
೧೯೨೩ರಲ್ಲಿ ೨೬ ವಯಸ್ಸಿನ ಸುಭಾಷ ಬಂಗಾಳ ಪ್ರಾಂತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಸಿಡಿಲಿನ ವ್ಯಕ್ತಿತ್ವದ ಸುಭಾಸ, ಯುವಕ ವರ್ಗದ ಉತ್ಸಾಹ ದೇಶಾಭಿಮಾನ ಕ್ರಿಯಾಶೀಲತೆಗಳ ಪ್ರತೀಕವಾದರು. ೧೯೨೯ರಲ್ಲಿ “ಪೂರ್ಣ ಸ್ವಾತಂತ್ತ್ಯವೇ ನಮ್ಮ ಗುರಿ” ಎಂದು ಘೋಷಿಸಿದರು. ವಿದೇಶಿ ಸರಕಾರ ಮತ್ತೆ ಮತ್ತೆ ಇವರನ್ನು ಸೆರೆಮನೆಗೆ ಕಳುಹಿಸಿತು. ೧೯೩೧ರಲ್ಲಿ ಆರೋಗ್ಯವನ್ನು ಸುಧಾರಿಸಲು ಐರೋಪ್ಯ ಯಾತ್ರೆಯನ್ನು ಕೈಗೊಂಡ ಸುಭಾಷರು ಫ್ರಾನ್ಸ್, ಐರ್‌ಲೆಂಡ್ ಮೊದಲಾದ ಹಲವು ದೇಶಗಳಲ್ಲಿ ಭಾರತದ ಸ್ವಾತಂತ್ರ್ಯದ ಹೋರಾಟವನ್ನು ವಿವರಿಸಿ. ಅಲ್ಲಿ ಬೆಂಬಲ ಗಳಿಸಿದರು. ಅವರು ಆಗ ಬರೆದ “ಭಾರತದ ಸ್ವಾತಂತ್ರ್ಯ ಸಂಗ್ರ್ರಾಮ” ಎನ್ನುವ ಪುಸ್ತಕ ಭಾರತದೊಳಗೆ ಬರಬಾರದೆಂದು ಬ್ರಿಟಿಷ್  ಸರಕಾರ ತಡೆಯಾಜ್ಞೆ ನೀಡಿತು.
ಸುಮಾರು ಹದಿನಾರು ವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿದ್ದು, ಆ ಸಂಸ್ಥೆಯ ಅಧ್ಯಕ್ಷರೂ ಆದ ಸುಭಾಷರು. ಗಾಂಧೀಜೀರವರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಿ ೧೯೩೮ರಲ್ಲಿ ಕಾಂಗ್ರೆಸ್ಸಿನಿಂದ ಹೊರಬಂದರು. ಕ್ರಾಂತಿಕಾರಿ ಮಾರ್ಗದಿಂದ ಭಾರತದ ಸ್ವಾತಂತ್ರ್ಯವನ್ನು ಸಾಧಿಸಬೇಕೆಂಬುದು ಅವರ ನಿಲುಮೆಯಾಗಿತ್ತು.
ದ್ವಿತೀಯ ಮಹಾಯುದ್ದ ಆರಂಭವಾಯಿತು. ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ತೀವ್ರಗೊಂಡವು. ಆಳುತ್ತಿದ್ದ ಸರಕಾರ ಸುಭಾಷರನ್ನು ಸೆರೆಮನೆಗೆ ದೂಡಿತು. ಸೆರೆಮನೆಯಲ್ಲಿ ಕುಳಿತರೆ ಸ್ವಾತಂತ್ರ್ಯ ಸಂಪಾದನೆಯಾಗದು ಎಂದು ಅವರ ಅಭಿಮತ. ೧೯೪೦ ರಲ್ಲಿ ಆಮರಣ ಉಪವಾಸವನ್ನು ಆರಂಭಿಸಿದರು. ಈ ಮಧ್ಯೆ ನಡೆದ ಕೇಂದ್ರ ಶಾಸನ ಸಭೆಯ ಉಪಚುನಾವಣೆಯಲ್ಲಿ ಜನತೆ ಸೆರೆಮನೆಯಲ್ಲಿದ್ದ ಬೋಸರನ್ನೇ ಚುನಾಯಿಸಿತು. ಅವರ ಬಿಡುಗಡೆಯಾಯಿತು. ಆದರೆ ಅವರನ್ನು ಗ್ರಹ ಬಂಧನದಲ್ಲಿಟ್ಟರು.
೧೯೪೧ ರಲ್ಲಿ ಸರಕಾರದ ಬಂಧನದಿಂದ ಸುಭಾಷ್ ತಪ್ಪಿಸಿಕೊಂಡರು. ಪರದೇಶಗಳ ಸಹಾಯದಿಂದಲೂ ತಾಯ್ನಾಡನ್ನು ಬಂಧಮುಕ್ತಗೊಳಿಸಬೇಕೆಂದು ಕಾಬೂಲಿನ ದಾರಿಯಾದ ರಷ್ಯಾವನ್ನು ಹಾದು ಜರ್ಮನಿಗೆ ಹೋದರು. ಜರ್ಮನಿಯಲ್ಲಿ ‘ಆಜಾದ್ ಹಿಂದ್’ ಕೇಂದ್ರವನ್ನು ಸ್ಥಾಪಿಸಿದರು. ಮುಂದೆ ಜರ್ಮನರ ನೆರವಿನಿಂದ ಸಿಂಗಪುರಕ್ಕೆ ಬಂದು ಜಪಾನರ ಸಹಾಯವನ್ನು ಪಡೆದು ಸೆರೆಯಾಳುಗಳಾಗಿದ್ದ ಭಾರತೀಯ ಸೈನಿಕರ ಮನ ಒಲಿಸಿ ಆಜಾದ್ ಹಿಂದ್ ಫೌಜನ್ನು ೧೯೪೩ ರಲ್ಲಿ ಕಟ್ಟಿದ್ದರು. ಅದೇ ವರ್ಷ ಸುಭಾಷರು ‘ಚಲೋ ದೆಹಲಿ’ ಕರೆಯನ್ನು ಕೊಟ್ಟರು. ಅಸಂಖ್ಯಾತ ಭಾರತೀಯ ತರುಣರು ತಮ್ಮ ರಕ್ತದಲ್ಲಿ ಲೇಖನಿಯನ್ನು ಅದ್ದಿ ಪ್ರತಿಜ್ಞಾಪತ್ರಕ್ಕೆ  ಸಹಿ ಹಾಕಿದರು.
೧೯೪೩ ನವೆಂಬರ್ ೧೭ ರಂದು ರಂಗೂನಿನಲ್ಲಿ ಆಜಾದ್ ಹಿಂದ್ ಸರಕಾರದ ಸ್ಥಾಪನೆಯಾಯಿತು. ದಂಡನಾಯಕ ಪೋಷಕರನ್ನು ಧರಿಸಿದ ಧೀರ ನಿಲುವಿನ ಸುಭಾಷ್ ಸ್ವತಂತ್ರ ಭಾರತ ಸರಕಾರದ  ಸ್ಥಾಪನೆಯನ್ನು ಘೋಷಿಸಿದರು. ಇದೇ ವರ್ಷ ಡಿಸೆಂಬರ್‌ನಲ್ಲಿ ಅಂಡಮಾನ ಮತ್ತು ನಿಕೋಬಾರ್ ದ್ವೀಪಗಳು ಸ್ವತಂತ್ರ ಭಾರತದ ಅಧೀನ, ಅವು ಸ್ವರಾಜ್ಯ ದ್ವೀಪಗಳು ಎಂದು ಸಾರಿದರು. ೧೯೪೪ ರ ಜನೇವರಿ ೨೪ ರಂದು ರಂಗೂನಿನಲ್ಲಿ ಭಾರತೀಯರು ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು. ಅವರ ಸಾಧನೆಗಳು ಭಾರತೀಯರಲ್ಲಿ ಹೆಮ್ಮೆಯನ್ನು ಆತ್ಮವಿಶ್ವಾಸವನ್ನೂ ಹುಟ್ಟಿಸಿದವು.

೧೯೪೫ರಲ್ಲಿ ಸುಭಾಷರು ಟೋಕಿಯೊಂದಿಗೆ ಪ್ರಯಾಣ ಮಾಡುತ್ತಿದ್ದಾಗ ಅದರ ವಿಮಾನಕ್ಕೆ ಬೆಂಕಿ ಹತ್ತಿತ್ತು. ಆಸ್ಪತ್ರೆಯೊಂದರಲ್ಲಿ ಅವರ ಅಂತ್ಯವಾಯಿತು. ಸುಭಾಷರು ಆ ವಿಮಾನ ಅಪಘಾತದಲ್ಲಿ ಸಾಯಲಿಲ್ಲ ಎಂದು ಭಾರತದಲ್ಲಿ ಹಲವರು ಭಾವಿಸಿದರು. ಸಾಹಸವೇ ಮನುಷ್ಯ ರೂಪ ತಾಳಿ ಬಂದಂತಿದ್ದ ಸುಭಾಷ್, ಭಾರತದ ಯುವಕರ ಕಣ್ಣಿಯಾಗಿದ್ದರು. ಮಹಾತ್ಯಾಗಿ ಧೀರ ಸುಭಾಷರ ಬಳಿ ಸಣ್ಣತನವೆನ್ನುವುದು ಸುಳಿಯುವಂತಿಲ್ಲ. ದೇಶಕ್ಕಾಗಿ ಪ್ರಾಣತೆತ್ತ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮ ಧುರೀಣರಲ್ಲೊಬ್ಬರು. ಸುಭಾಷ ಚಂದ್ರ ಬೋಸರನ್ನು ಭಾರತದಲ್ಲಿ ‘ನೇತಾಜಿ’ ಎಂದು ಪ್ರೀತಿ, ಗೌರವಗಳಿಂದ ಕರೆಯುತ್ತಾರೆ.

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ, ಬಾಡ, ಕಾರವಾರ
ಮೊ : ೯೬೩೨೩೩೨೧೮೫


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...