ಶ್ರೀನಿವಾಸಪುರ: ರಾಧಾಕೃಷ್ಣನ್ ರವರ ಮಾರ್ಗದರ್ಶನವನ್ನು ಪ್ರತಿ ಶಿಕ್ಷಕನೂ ಮೈಗೂಡಿಸಿಕೊಳ್ಳಲು ರಮೇಶ್ ಕುಮಾರ್ ಕರೆ

Source: shabbir | By Arshad Koppa | Published on 18th September 2017, 8:21 AM | State News |

ಶ್ರೀನಿವಾಸಪುರ: ಸರ್ವೆಪಲ್ಲಿ ರಾಧಾಕೃಷ್ಣನ್ ರವರ ಮಾರ್ಗದರ್ಶನವನ್ನು ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಂಡು ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಕಂಕಣಬದ್ದರಾಗಬೇಕೆಂದು ಆರೋಗ್ಯ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಶಿಕ್ಷಕರಿಗೆ ಕಿವಿ ಮಾತು ಹೇಳಿದರು.   
    ಪಟ್ಟಣದ ಹೊರವಲಯದ ರಾಜಧಾನಿ ಮಾವಿನಕಾಯಿ ಮಂಡಿಯಲ್ಲಿ 2017-18ನೆ ಸಾಲಿನ ಸರ್ವೆಪಲ್ಲಿ ರಾಧಕೃಷ್ಣನ್ ನೆನಪಿನಲ್ಲಿ ಶಿಕ್ಷಕರ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆರೋಗ್ಯ ಸಚಿವರು, ರಾಧಾಕೃಷ್ಣನ್ ರವರು ನಡೆದು ಬಂದ ದಾರಿ ಅವರಿಗೆ ಬಂದ ಪ್ರಶಸ್ತಿ ಶಿಕ್ಷಕರಿಗೆ ಸಲ್ಲಬೇಕೆಂದು ಅಂದು ಹೇಳಿದ ಅವರ ಘನತೆಗೆ ನಮ್ಮ ದೇಶವೆ ಇಂದು ಕೃತಜ್ನತೆ ಸಲ್ಲಿಸಬೇಕಾಗಿದೆ. 
 ಗುರುವಿಗೆ ಪರಬ್ರಹ್ಮ ಎಂದು ಹೇಳುತ್ತೇವೆ.  ಮನುಕುಲದ ಸೃಷ್ಟಿಕರ್ತ ಬ್ರಹ್ಮ, ಆ ಬ್ರಹ್ಮನಿಗೆ ಸರಿಸಮಾನವಾಗಿ ಗುರುಗಳನ್ನು ಹೋಲಿಕೆ ಮಾಡುತ್ತೇವೆ.  ಹಾಗಾಗಿ ಗುರುಗಳಾದವರು ಪ್ರಾಥಮಿಕ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತಳಹದಿ ಪಾಯವನ್ನು ಹಚ್ಚುಕಟ್ಟಾಗಿ ಹಾಕಿದಾಗ ವಿದ್ಯಾರ್ಥಿಗಳು ಮುಂದಿನ ಭವಿಷ್ಯತ್‍ನಲ್ಲಿ ನವಸಮಾಜವನ್ನು ಕಟ್ಟಲು ನಾಂದಿಯಾಗುತ್ತದೆ. ಇದಕ್ಕೆ ಪೂರ್ವಕವಾಗಿ ಶಿಕ್ಷಕರು ಕೆಲಸ ಮಾಡಬೇಕೆಂದು ತಿಳಿಸಿದರು. 
    ತಾಲ್ಲೂಕಿನಲ್ಲಿ ಪಿ.ಯು.ಬಾಲಕರ ಬಾಲಕಿಯರ ಇತರೆ ಶಾಲಾ ಕಾಲೇಜುಗಳಿಗೆ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲ ಸಿದ್ದತೆಗೆಳು ನಡೆಯುತ್ತಿವೆ. ಮನುಷ್ಯ ತುಂಬಾ ಸುಲಭವಾಗಿ ತನ್ನ ಬದುಕನ್ನು ನಡೆಸಲು ಉಪಾಯ ಕಂಡು ಕೊಂಡು ಬದಲಾದಂತೆ ಶಿಕ್ಷಣ ವ್ಯವಸ್ಥೆಯು ಸರಳವಾಗಿ ಬದಲಾಗಿದೆ. 
 ಸರ್ಕಾರಿ ಶಾಲೆಗಳು ಇತ್ತೀಚಿನ  ದಿನಗಳಲ್ಲಿ ದುರ್ಬಲವಾಗುತ್ತಿವೆ. ಖಾಸಗಿ ಶಾಲೆಗಳು ಅವರದೆ ಆದಂತ ನಿಟ್ಟಿನಲ್ಲಿ ಸಮಾಜಕ್ಕೆ ಕೆಲಸ ಮಾಡುತ್ತಿವೆ.  ಪ್ರಾಥಮಿಕ ಶಾಲೆಗಳು ಈ ದೇಶದ ಆಸ್ತಿಯಾಗಬೇಕು.  ಮುಂದೆ ಯಾವ ರೀತಿ ಕಾಲ ಬದಲಾಗುತ್ತದೆ ಗೊತ್ತಿಲ್ಲ.  ಹಾಗಾಗಿ ನಾಗರೀಕ ಸಮಾಜದಲ್ಲಿ ಪ್ರತಿಯೊಬ್ಬರು ಮುಂದೆ ಬರಬೇಕಾದರೆ ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳನ್ನು ಸೈನಿಕರಂತೆ ತಯಾರು ಮಾಡಬೇಕೆಂದರು.  
    ಅಡ್ಡಗಲ್ ಹೆಸರು ನನ್ನ ಅಂತ್ಯಕ್ಕೆ ಕೊನೆಯಾಗುತ್ತದೆಯೊ ಎಂಬ ಸಂಕೋಚವಿತ್ತು, ಆದರೆ ಇಂದು ಅಡ್ಡಗಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಈ ಸಭೆಯಲ್ಲಿ ಕೋಲಾಟ. ಇತರೆ ನೃತ್ಯವನ್ನು ಮಾಡಿದ್ದಕ್ಕೆ ನನ್ನ ತದನಂತರ ಈ ವಿದ್ಯಾರ್ಥಿಗಳು ಅಡ್ಡಗಲ್ ಹೆಸರು ಹೇಳುತ್ತಾರೆ ಎಂಬ ಹರ್ಷ ವ್ಯಕ್ತಪಡಿಸಿದರು. 
    ಸಂಸದ ಕೆ.ಹೆಚ್. ಮುನಿಯಪ್ಪ ಮಾತನಾಡಿದರು.  ವಿಧಾನಾಪರಿಷತ್ ಸದಸ್ಯರಾದ ಚೌಯ್ಡರೆಡ್ಡಿ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕುಎಸ್.ಎಸ್.ಎಲ್.ಸಿ.ಯಲ್ಲಿ  ಜಿಲ್ಲೆಯಲ್ಲಿ ಮೊದಲ ಸ್ಥಾನ ಬಂದಿದ್ದು,  ರಾಜ್ಯದಲ್ಲಿ 4ನೆ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ.  ಮುಂದಿನ ವರ್ಷ ನಮ್ಮ ತಾಲ್ಲೂಕು ರಾಜ್ಯದಲ್ಲಿ ಮೊದಲನೆ ಸ್ಥಾನ ಗಳಿಸಲು ಶಿಕ್ಷಕರು ಶ್ರಮ ಪಡಬೇಕು, ತಾಲ್ಲೂಕಿನ ಶಾಲೆಗಳ ಅಭಿವೃದ್ದಿ ವಿಷಯದಲ್ಲಿ ಸಚಿವರ ಜೊತೆಗೆ ನಾನು ಕೈ ಜೋಡಿಸುತ್ತೇನೆಂದು ತಿಳಿಸಿದರು.  


    ಇದೆ ಸಮಯದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮತ್ತು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕರ  ಪುರಸ್ಕೃತರಿಗೆ ಹಾಗೂ ತಾಲ್ಲೂಕು ಮಟ್ಟದ ಶಿಕ್ಷಕರಿಗೆ ಜೊತೆಗೆ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಮುರಳೀಬಾಬು ಜನಪದ ಕಲಾ ತಂಡದವರು ಅತ್ಯುತ್ತಮವಾಗಿ ನೃತ್ಯ ಪ್ರದರ್ಶಿಸಿದರು.  
ಈ ಸಂದರ್ಭದಲ್ಲಿ ಮಾವು ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷಣ  ಸುಗುಣಮ್ಮ, ಪುರಸಭೆ ಅಧ್ಯಕ್ಷಣ  ಅರುಣ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದರೆಡ್ಡಿ, ಮುಖಂಡರಾದ ರಾಜೇಂದ್ರಪ್ರಸಾದ್, ಮತ್ತಿತರರು ಶಿಕ್ಷಕರ ಸಂಘದ ಪದಾದಿಕಾರಿಗಳು, ಶಿಕ್ಷಕರು ಹಾಜರಿದ್ದರು.  
ಶಿಕ್ಷಕರ ದಿನಾಚರಣೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಶಿಕ್ಷಕರ ಅಶಿಸ್ತಿನ ಪ್ರದರ್ಶನ
ಅಧ್ಯಕ್ಷರ ಭಾಷಣ ಅತಿಥಿಗಳ ಭಾಷಣ ಮಾಡುತ್ತಿರುವ ವೇಳೆ ಹಾಜರಿದ್ದ ಶಿಕ್ಷಕರು ಅಗೌರವ ತರುವ ನಿಟ್ಟಿನಲ್ಲಿ ಗುಂಪುಗಾರಿಕೆ ಮತ್ತು ಸಭೆಯಿಂದ ನಿರ್ಗಮಿಸಿದ ಹಲವಾರು ಶಿಕ್ಷಕರು ಸಭೆಯಿಂದ ನಿರ್ಗಮಿಸಿದರು. ಶಿಕ್ಷಕರ ದಿನಾಚರಣೆ ಸಮಯ ಬೆಳಿಗ್ಗೆ 9.30ಕ್ಕೆ ನಿಗಧಿಯಾಗಿದ್ದರೂ ಸಹ ಸುಮಾರು 1.00 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಯಿತು.  ಸಭೆಯು ನಡೆಯುತ್ತಿದ್ದ ಮಧ್ಯದಲ್ಲಿ ಹಲವಾರು ಶಿಕ್ಷಕರು ಸಭೆಯಿಂದ ನಿರ್ಗಮಿಸಿದಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೋವಿಂದರೆಡ್ಡಿ  ಮತ್ತು ಕಲಾ ಶಂಕರ್ ಸಭೆಯಿಂದ ಹೊರಗೆ ಹೋಗುತ್ತಿದ್ದ ಶಿಕ್ಷಕರನ್ನು ಪುಟ್ಟಮಕ್ಕಳನ್ನು ಕೇಳಿಕೊಂಡಂತೆ ಶಿಕ್ಷಕರನ್ನು ಪದೆ ಪದೆ ಸಭೆಯಲ್ಲಿ ಆಸೀನರಾಗಿ ಎಂದು ಕೇಳಿಕೊಳ್ಳುತ್ತಿದ್ದ ದೃಷ್ಯ ಕ್ಯಾಮರಾ ಕಣ ್ಣಗೆ ಕಂಡಿತು.  

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...