ಶ್ರೀನಿವಾಸಪು: ಪುರಸಭೆ ಸಾಮಾನ್ಯಸಭೆಯಲ್ಲಿ ಬೀದಿ ನಾಯಿ ನಿಯಂತ್ರಣಕ್ಕೆ ತೀರ್ಮಾನ

Source: sonews | By Staff Correspondent | Published on 14th December 2017, 1:02 AM | State News | Don't Miss |

ಶ್ರೀನಿವಾಸಪುರ:  ಪುರಸಭೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗದಲ್ಲಿ ಕಡು ಬಡವರು ಮನೆಗಳನ್ನು ನಿರ್ಮಿಸಿಕೊಂಡಿರುವವರಿಗೆ ತಹಶೀಲ್ದಾರ್ ಅನುಮತಿಯ 94ಸಿ.ಸಿ.ನಿಯಮದಂತೆ ಹಕ್ಕು ಪತ್ರ ನೀಡಿರುವವರಿಗೆ ಪುರಸಭೆಯಲ್ಲಿ ಖಾತೆ ಮಾಡಿಕೊಡುವ ಬಗ್ಗೆ ವಿರೋದ ಪಕ್ಷದ ಜೆಡಿಎಸ್ ಸದಸ್ಯರಾದ ಏಜಾಜ್ ಮತ್ತು ಷಬ್ಬೀರ್ ನಕಲಿ ಹಕ್ಕುಪತ್ರಗಳನ್ನು ಹೊಂದಿರುವುದರಿಂದ ಖಾತೆ ಮಾಡಬಾರದು ಎಂದು ವಿರೋದಿಸಿದರು.

ಆಡಳಿತ ಕಾಂಗ್ರೆಸ್‍ಪಕ್ಷದ ಸದಸ್ಯರಾದ ಬಿ.ಎಂ.ಪ್ರಕಾಶ್ ಮತ್ತು ಮುನಿರಾಜು ತಹಶೀಲ್ದಾರ್ ರವರು ನೀಡಿರುವ ಹಕ್ಕುಪತ್ರಗಳಿಗೆ ವಿರೋದಿಸುವುದು ಸರಿಯಲ್ಲ ನಕಲಿ ಪತ್ರಗಳಿದ್ದರೆ ತಹಶೀಲ್ದಾರರಿಗೆ ದೂರು ನೀಡಿ ಬಡವರ ಮನೆಗಳಿಗೆ ವಿರೋದ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಕೆಲಕಾಲ ಮಾತಿನ ಚಕಮಕಿ ನಡೆಸಿದರು. 
   

ಪಟ್ಟಣದ ಪುರಸಭೆ ಕಛೇರಿಯಲ್ಲಿ ಪುರಸಭಾದ್ಯಕ್ಷೆ ರತ್ನಮ್ಮನಾಗರಾಜ್ ರವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ ಸಾಮಾನ್ಯ ಸಭೆ ನಡೆಯಿತು. ಬೀದಿ ನಾಯಿಗಳು ಹೆಚ್ಚಾಗಿರುವುದರಿಂದ ಅವುಗಳನ್ನು ನಿಯಂತ್ರಣ ಮಾಡಬೇಕು ಎಂದು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಚೌಡೇಶ್ವರಿ ದೇವಾಯದ ಬಳಿ ನಿರ್ಮಿಸಿರುವ ಪಂಪ್‍ಹೌಸ್ ಮತ್ತು ವರದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿರುವ ಪಂಪ್‍ಹೌಸ್‍ಗಳನ್ನು ತೆರವುಗೊಳಿಸುವ ಮುಂಚೆ ಬದಲೀ ವ್ಯವಸ್ಥೆ ಮಾಡಿಕೊಂಡ ನಂತರ ತೆರವುಗೊಳಿಸಬೇಕು. ಪಟ್ಟಣದ ಕೆಲ ಬಡಾವಣೆಗಳಿಗೆ ಇವುಗಳ ಮುಖಾಂತರ ನೀರು  ಸರಬರಾಜು ಆಗುತ್ತಿವೆ ಎಂದು ಸದಸ್ಯ ಸತ್ಯನಾರಾಯಣ ತಿಳಿಸಿದರು.

ಬಾಡಿಗೆ ಕಟ್ಟಡದಲ್ಲಿರುವ ಪುರಸಭೆ ಕಛೇರಿಯನ್ನು ಪಟ್ಟಣದ ಬಸ್‍ನಿಲ್ದಾಣದ ಬಳಿ ನಿರ್ಮಿಸಿರುವ ಪುರಸಭೆಯ ಭೃಹತ್ ಮಳಿಗೆಗಳ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮುಖ್ಯಾಧಿಕಾರಿ ಸತ್ಯನಾರಾಯಣ ಸದಸ್ಯರಿಗೆ ತಿಳಿಸಿದರು. ಸರ್ವಾನುಮತದಿಂದ ಒಪ್ಪಿಗೆಯನ್ನು ನೀಡಿ ಆದಷ್ಟು ಬೇಗ ವರ್ಗಾಯಿಸಲು ಕೋರಿದರು. ಪೌರಕಾರ್ಮಿಕರಿಗೆ ನೀಡುತ್ತಿರುವ ಬೆಳಗಿನ ಉಪಹಾರವನ್ನು 2017-18ನೇ ಸಾಲಿಗೂ ಮುಂದುವರೆಸಿಕೊಂಡು ಹೋಗಲು ತೀರ್ಮಾನಿಸಿದರು. ಪುರಸಭೆ ವಾಹನಗಳಿಗೆ ವಿಮೆ ಮತ್ತು ಕಾಲಕಾಲಕ್ಕೆ ದುರಸ್ಥಿ ಮಾಡಿಸಿಕೊಂಡು ಸುಸ್ಥಿಯಲ್ಲಿ ಇಟ್ಟುಕೊಳ್ಳಬೇಕೆಂದು ಸದಸ್ಯರು ತಿಳಿಸಿದರು. ಕೊಳವೆ ಬಾವಿಗಳ ಪಂಪು ಮತ್ತು ಮೋಟಾರ್ ಪ್ಯಾನಲ್ ಬೋರ್ಡುಗಳನ್ನು ದುರಸ್ಥಿ ಪಡಿಸುವ ಗುತ್ತಿಗೆ ಅವಧಿ ಮುಗಿದಿದ್ದು ಈಗಿರುವವರಿಗೆ ಮುಂದುವರೆಸಿಕೊಂಡು ಹೋಗಲು ಅನುಮತಿ ನಿಡಿದಲ್ಲದೆ ಬಾಕಿ ಇರುವ ಹಣವನ್ನು ಪಾವತಿಸಲು ತೀರ್ಮಾನಿಸಿದರು.

ಕಸಸಂಗ್ರಹ ಗಾಡಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಮತ್ತು ಮನೆಯಿಂದ ಕಸತೆಗೆದು ಕೊಂಡು ಬರುವಷ್ಟರಲ್ಲಿ ಹೊರಟು ಹೋಗುತ್ತವೆ. ಮಹಿಳೆಯರು ಮತ್ತು ಮಕ್ಕಳು ಕಸದ ಗಾಡಿಗೆ ಕಸಹಾಕಲು ಎತ್ತರವಿರುವುದರಿಂದ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯ ಸತ್ತಾರ್ ಅಪಾದನೆ ಮಾಡಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಇನ್ನೂ ಎರಡು ವಾಹನಗಳ ಅವಶ್ಯಕತೆ ಇದ್ದು ಡಿಪಿಆರ್ ಮಾಡಿ ಕಳುಹಿಸಲಾಗಿದೆ. ಅವುಗಳು ಬಂದ ನಂತರ ಕಸ ಸಂಗ್ರಹ ವಿಲೇವಾರಿ ಸರಿಯಾಗಿ ನಡೆಯುತ್ತದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರು ಕಸವನ್ನು ರಸ್ತೆಗೆ ಹಾಕುವುದು ಕಂಡು ಬಂದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲು ತೀರ್ಮಾನಿಸಲಾಯಿತು. ಪಟ್ಟಣ ವ್ಯಾಪ್ತಿಯ ಮುಳಬಾಗಿಲು ರಸ್ತೆಯ ಬಳಿ ಇರುವ ಸ್ಮಶಾನದಲ್ಲಿ ಮತ್ತು ಕಸ ಸಂಗ್ರಹ ಮತ್ತು ವಿಲೇವಾರಿ ಘಟಕದ ಬಳಿ ಹೈ ಮಾಸ್ಕ್ ಅಳವಡಿಸಲು ಯೋಜನೆ ಮಾಡಲಾಗಿದೆ ಎಂದು ಮುಖ್ಯಾಧಿಕಾರಿಗಳ ಮಾತಿಗೆ ಸದಸ್ಯ ಸತ್ತಾರ್ ಶಂಕರಮಠದ ಬಳಿ ಮೂರು ದೇವಸ್ಥಾನಗಳು ಇದ್ದು ನಾಲ್ಕು ರಸ್ತೆಗಳು ಕೂಡುವ ದೊಡ್ಡ ಸರ್ಕಲ್ ಆಗಿರುವುದರಿಂದ ಇಲ್ಲಿ ಹೈ ಮಾಸ್ಕ್ ಲೈಟ್ ಅಳವಡಿಸಲು ಸೂಚಿಸಿದರು.

ಪಟ್ಟಣದಲ್ಲಿರುವ ಖಾಸಗಿ ಶಾಲಾ ಕಾಲೇಜುಗಳು, ನರ್ಸಿಂಗ್‍ಹೋಂಗಳು, ಕಲ್ಯಾಣ ಮಂಣಟಪಗಳಿಗೆ ಸರ್ವಿಸ್ ಚಾರ್ಜ ಪಡೆಯಬೇಕೆಂದು ಸದಸ್ಯ ಶ್ರೀನಿವಾಸಪ್ಪ ಆಗ್ರಹಿಸಿದರು. ಎಲ್ಲರಿಗೂ ನೋಟೀಸ್ ನೀಡಿ ಸಭೆ ನಡೆಸಿ ಅವರಿಂದ ಮಾಹಿತಿ ಪಡೆದು ಸೂಚಿಸಿ ಶುಲ್ಕವನ್ನು ಪಡೆಯಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಮನೆಯ ಅಂಗಳದಲ್ಲಿ ಕೈತೋಟ: ತೋಟಗಾರಿಕೆ ಇಲಾಖೆಯಿಂದ ಶ್ರೀನಿವಾಸಪುರ ಪಟ್ಟಣದಲ್ಲಿ 500ಮನೆಗಳಿಗೆ ಮನೆಯ ಮುಂಬಾಗ ಅಥವಾ ಟೆರೇಸ್‍ನಲ್ಲಿ ಜಾಗ ಇರುವವರಿಗೆ ಕೈತೋಟ ಮಾಡಲು ಉಚಿತವಾಗಿ ಬೀಜ ಮತ್ತು ಗ್ರೋಬ್ಯಾಗ್ಸ್ ಜೊತೆಗೆ ಸಾವಯವ ಗೊಬ್ಬರವನ್ನು ನೀಡಲಾಗುವುದು. ಆಸಕ್ತರು ಮನೆಯ ಅಂಗಳದಲ್ಲಿ ತರಕಾರಿ ಹಾಗೂ ಹೂ ಬಿಡುವ ಅಲಂಕಾರಿಕ ಸ್ಸಯಗಳನ್ನು ಒದಗಿಸಲಾಗುವುದು. 23ವಾರ್ಡುಗಳಲ್ಲಿ ಎಲ್ಲಾ ಸದಸ್ಯರು 20ಮನೆಗಳನ್ನು ಗುರುತಿಸಿ ಪಟ್ಟಿ ನೀಡಿದರೆ ಅವರಿಗೆ ತರಬೇತಿ ಮತ್ತು ಉಚಿತ ಸಾಮಗ್ರಿಗಳನ್ನು ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ಧೇಶಕ ಶ್ರೀನಿವಾಸ್ ಮಾಹಿತಿ ನೀಡಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಟಿ.ಎಂ.ಬಿ.ಮುಖ್ತಿಯಾರ್, ಸದಸ್ಯರಾದ ಶಂಕರ್, ಮುನಿರಾಜು, ಬಿ.ಎಂ.ಪ್ರಕಾಶ್, ಏಜಾಜ್, ಷಬ್ಬೀರ್, ಶ್ರೀನಿವಾಸಪ್ಪ, ಸೈಯದ್‍ಅಬ್ದುಲ್‍ಸತ್ತಾರ್, ಲಕ್ಷ್ಮಿದೇವಮ್ಮ ನಾಮನಿರ್ಧೇಶನ ಸದಸ್ಯರಾದ ಹರ್ಷ, ವೆಂಕಟೇಶ್, ರಮೇಶ, ಜಯಣ್ಣ ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇತರರು ಹಾಜರಿದ್ದರು.
   
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...