ಶಿಡ್ಲಘಟ್ಟ:ಒಂದೆಡೆ ತುಂಬಿ ತುಳುಕಿದ ಕೆರೆಗಳು, ಇನ್ನೊಂದೆಡೆ ನೀರಿನ ಕೊರತೆ

Source: tamim | By Arshad Koppa | Published on 23rd October 2017, 7:56 AM | State News |

ಅಕ್ಟೋಬರ್22:(ಎಂ.ಎ.ತಮೀಮ್ ಪಾಷ)  ಶಿಡ್ಲಘಟ್ಟ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಸುರಿದ ಮಳೆಯಿಂದ ಬಹುತೇಕ ಕೆರೆ-ಕುಂಟೆಗಳು ತುಂಬಿತುಳಕಾಡಿ ಕೋಡಿ ಹರಿದು ರೈತರು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಬಾಗಿನ ಅರ್ಪಿಸಿದರೆ ಮತ್ತೊಂದಡೆ ತಾಲೂಕಿನ ಚೀಮಂಗಲ ಗ್ರಾಮದಲ್ಲಿ ಮಾತ್ರ ಕೆರೆಯಲ್ಲಿ ನೀರಿಲ್ಲದೆ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
    ಹೌದು ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು ಈ ಗ್ರಾಮದಲ್ಲಿ ಕೆರೆಯಲ್ಲಿ ಬೆಳೆದಿರುವ ಜಾಲಿಮರಗಳು ಮತ್ತು ಬುರಜಾಲಿ ಹಾಗೂ ಬಿದಿರು ಮರಗಳಿಂದ ಮಳೆ ನೀರಿನ ದರ್ಶನ ಇಲ್ಲದೆ ದನಕರುಗಳಿಗೆ ಕನಿಷ್ಠ ಕುಡಿಯುವ ನೀರಿಲ್ಲದಂತಾಗಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು ನೆಟ್ಟಿರುವ ಬಿದಿರು ಆಟಕ್ಕೆ ಉಂಟು ಲೆಕ್ಕಿಕ್ಕೆ ಇಲ್ಲದಂತಾಗಿದೆ.
    ಸುಮಾರು 120 ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಚೀಮಂಗಲ ಗ್ರಾಮದ ಕೆರೆಯಂಗಳ 20-30 ವರ್ಷಗಳಿಂದ ಬೆಳೆದಿರುವ ಜಾಲಿ ಮರ ಮತ್ತು ಬಿದಿರು ಮರಗಳನ್ನು ಆವರಿಸಿಕೊಂಡು ನೀರು ನಿಲ್ಲಲು ಮಾತ್ರವಲ್ಲದೆ ದನಕರುಗಳು ಮೇವು ಹುಡುಕಾಡಲು ಸ್ಥಳಾವಕಾಶ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಲ್ಲಿ ನೋಡಿದರು ಜಾಲಿ ಮರಗಳು ಕಾಣಿಸಿಕೊಳ್ಳುವುದರಿಂದ ಮಳೆಯ ನೀರು ಶೇಖರಣೆಯಾಗದೆ ಕೆರೆ ಬತ್ತಿಹೋಗಿ ಒಂದು ರೀತಿಯ ಬರಗಾಲದ ಪರಿಸ್ಥಿತಿ ಬಂದೂದಗಿದೆ ಎಂದರೆ ತಪ್ಪಾಗಲಾರದು ನೆರೆಹೊರೆಯ ಗ್ರಾಮಗಳಲ್ಲಿ ಕೆರೆ-ಕುಂಟೆಗಳು ತುಂಬಿ ಕೋಡಿ ಹರಿದರು ಸಹ ನಮ್ಮೂರಿನ ಕೆರೆಯಲ್ಲಿ ನೀರಿನ ದರ್ಶನ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
    ಜಿಲ್ಲಾದ್ಯಂತ ಚೆಕ್‍ಡ್ಯಾಂಗಳು ತುಂಬಿ ತುಳಕಾಡುತ್ತಿದೆ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡಲು ಮೂಲವಾಗಿರುವ ಕೆರೆಯಲ್ಲಿ ಮಳೆಯ ನೀರಿ ನಿಲ್ಲದಂತೆ ತೊಡಕಾಗಿರುವ ಜಾಲಿಮರಗಳು ಮತ್ತು ಬಿದಿರು ಮರಗಳನ್ನು ತೆರವುಗೊಳಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಲು ಆಸಕ್ತಿವಹಿಸದಿದ್ದ ಪಕ್ಷದಲ್ಲಿ ಹೋರಾಟ ನಡೆಸಲಾಗುವುದೆಂದು ಚೀಮಂಗಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಈಶ್ವರ್,ಮಾಜಿ ಸದಸ್ಯ ಯಣ್ಣೂರು ನಾಗರಾಜ್,ಮುಖಂಡರಾದ ವೈ,ಬಿ.ಮಂಜುನಾಥ್,ದ್ಯಾವಪ್ಪ, ಯಲಿಯೂರು ಮಂಜುನಾಥ್, ಸಿದ್ದಪ್ಪ, ಲೋಕೇಶ್, ದೇವರಾಜ್ ಮತ್ತಿತರರು ಎಚ್ಚರಿಕೆ ನೀಡಿದ್ದಾರೆ.
     
     "ಮಳೆಗಾಲದಲ್ಲಿ ಸುರಿಯುವ ನೀರು ಸಂರಕ್ಷಣೆ ಮಾಡಿ ಅದರಿಂದ ಅಂತರ್ಜಲ ಮಟ್ಟ ವೃಧ್ಧಿಗೊಳಿಸಲು ಪೂಜ್ಯರು ನಿರ್ಮಿಸಿರುವ ಕೆರೆಗಳನ್ನು ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಸಾರ್ವತ್ರಿಕ ದೂರಿನ ಮಧ್ಯೆ ಕೆರೆಯ ಅಂಗಳದಲ್ಲಿ ಅವೈಜ್ಞಾನಿಕವಾಗಿ ಬೆಳೆದಿರುವ ಜಾಲಿಮರಗಳು ಮತ್ತು ಬುರಜಾಲಿ ಹಾಗೂ ಬಿದಿರಿನ ಮರಗಳಿಂದ ನೀರು ಶೇಖರಣೆಯಾಗುತ್ತಿಲ್ಲ"
                  ಯಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೀರಭದ್ರಪ್ಪ 
    
      "ಸಾಮಾನ್ಯವಾಗಿ ಚೀಮಂಗಲ ಕೆರೆಗೆ ಹೇಮಾರ್ಲಹಳ್ಳಿ ಮತ್ತು ಕೆಜಿಪುರ ಕೆರೆಗಳಿಂದ ನೀರು ಹರಿದು ಬರುತ್ತದೆ ಆದರೇ ಕೆರೆಯಲ್ಲಿ ಬೆಳೆದಿರುವ ಜಾಲಿಮರಗಳು ಮತ್ತು ಅರಣ್ಯ ಇಲಾಖೆಯಿಂದ ಬೆಳೆದಿರುವ ಬಿದಿರು ಮರಗಳು ಕೆರೆಗೆ ನೀರು ಬರದಂತೆ ತಡೆಯೊಡ್ಡಿದ್ದು ಕೂಡಲೇ ಸರಕಾರ ಕೆರೆಯಲ್ಲಿರುವ ಬೆಳೆದಿರುವ ಜಾಲಿ ಇನ್ನಿತರೆ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ"
                                ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಣ್ಣೂರು ನಾಗರಾಜ್ ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಯಣ್ಣೂರಿನ ನಾಗರಾಜ್ 


    
      "ಕೆರೆಯಲ್ಲಿ ಬೆಳೆದಿರುವ ಜಾಲಿ ಮರಗಳನ್ನು ತೆರವುಗೊಳಿಸಲು ಗ್ರಾಮಸ್ಥರ ಮನವಿಯನ್ನು ಪುರಸ್ಕರಿಸಿ ಅಕ್ಟೋಬರ್25 ರಂದು ನಡೆಯುವ ಗ್ರಾಮಸಭೆಯಲ್ಲಿ ವಿಷಯವನ್ನು ಅಜೆಂಡದಲ್ಲಿ ಮಂಡಿಸಲಾಗಿದೆ ಈ ವಿಚಾರದಲ್ಲಿ ಚರ್ಚೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರಬರೆದು ಜಾಲಿ ಇನ್ನಿತರೆ ಮರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
                          ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಳಿನಾ ಮಂಜುನಾಥ್ 

" ಕೆರೆಯಂಗಳದಲ್ಲಿ ಬೆಳೆದಿರುವ ಜಾಲಿಮರಗಳನ್ನು ತೆರವುಗೊಳಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಭಿವೃಧ್ಧಿ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಕಾನೂನು ರೀತಿಯಲ್ಲಿ ಜಾಲಿಮರಗಳನ್ನು ತೆರವುಗೊಳಿಸಲು ಆಸಕ್ತಿವಹಿಸಬೇಕಾಗಿದೆ" 
                            
ಅಜೀತ್‍ಕುಮಾರ್ ರೈ ತಹಶೀಲ್ದಾರ್ ಶಿಡ್ಲಘಟ್ಟ 


 ಶಿಡ್ಲಘಟ್ಟ ತಾಲೂಕಿನ ಚೀಮಂಗಲ ಗ್ರಾಮದ ಕೆರೆಯಂಗಳದಲ್ಲಿ ಬೃಹದಕಾರವಾಗಿ ಬೆಳೆದಿರುವ ಜಾಲಿಮರಗಳು..

ಯಣ್ಣೂರು ಎಂಪಿಸಿಎಸ್ ಅಧ್ಯಕ್ಷ ವೀರಭದ್ರಪ್ಪ 
 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...