ಶಿಡ್ಲಘಟ್ಟ: ಸರಕಾರಿ ಸೌಲಭ್ಯಕ್ಕಾಗಿ ಆಧಾರ ಕಡ್ಡಾಯ! ಆದರೇ ಆಧಾರ ನೊಂದಣಿ ಕೇಂದ್ರದಲ್ಲಿ ಯಾರು ಬೇಡವೇ!!

Source: tamim | By Arshad Koppa | Published on 21st February 2017, 8:15 AM | State News |

ಶಿಡ್ಲಘಟ್ಟ,ಫೆಬ್ರವರಿ20: ಸರಕಾರಿ ಸೌಲಭ್ಯಗಳನ್ನು ಆಧಾರ ಕಾರ್ಡ್ ಸಂಖ್ಯೆ ಕಡ್ಡಾಯಗೊಳಿಸಿದೆ ಆದರೇ ಆಧಾರಕಾರ್ಡ್ ಮಾಡಿಸಿಕೊಳ್ಳಲು ಸ್ಥಾಪಿಸಿರುವ ನೊಂದಣೆ ಕೇಂದ್ರದಲ್ಲಿ ಹೇಳವರು ಕೇಳವರು ಯಾರು ಇಲ್ಲದಂತಾಗಿದೆ ಎಂದು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
    
ತಾಲೂಕಿನ ಆಡಳಿತದ ಕೇಂದ್ರವೆಂದು ಪ್ರತಿಬಿಂಬಿಸುವ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತೆರೆದಿರುವ ಆಧಾರ ನೊಂದಣೆ ಕೇಂದ್ರದಲ್ಲಿ ನಿಯೋಜಿತ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂಬ ದೂರು ಸರ್ವೇಸಾಮಾನ್ಯವಾಗಿದೆ ಇದರಿಂದ ನಾಗರಿಕರು ಕೂಲಿ ಕೆಲಸಗಳನ್ನು ಬಿಟ್ಟು ಆಧಾರನೊಂದಣೆಗಾಗಿ ಕಾದು ಕಾದು ಬಂದಿದ್ದ ಕೆಲಸಕ್ಕೆ ಸುಂಕವಿಲ್ಲದಂತೆ ವಾಪಸ್ಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
    ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣೆ ಪಡೆಯುತ್ತಿರುವ ಪ್ರತಿಯೊಬ್ಬರು ಬ್ಯಾಂಕಿನ ಉಳಿತಾಯ ಖಾತೆಯೊಂದಿಗೆ ಆಧಾರಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಬೇಕೆಂದು ಆದೇಶಿಸಿ ಕಾಲಾವಧಿಯನ್ನು ನಿಗಧಿಪಡಿಸಿದ ಹಿನ್ನೆಲೆಯಲ್ಲಿ ವಯೋವೃಧ್ಧರು ಆಧಾರಕಾರ್ಡ್‍ಗಳನ್ನು ಮಾಡಿಕೊಳ್ಳಲು ಕೆಲಸ ಕಾರ್ಯಗಳನ್ನು ಬಿಟ್ಟು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಆದರೇ ಆಧಾರನೊಂದಣೆ ಕೇಂದ್ರದಲ್ಲಿ ಒಂದು ದಿನ ಸರ್ವರ್ ಇಲ್ಲ,ಲ್ಯಾಪ್‍ಟ್ಯಾಪ್‍ನಲ್ಲಿ ತಾಂತ್ರಿಕ ದೋಷವಿದೆ ಎಂಬ ಸಿದ್ದ ಉತ್ತರ ದೊರೆಯುತ್ತಿದೆ ಎಂದು ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
    ಸ್ವಾಮಿ ನನ್ನ ರೇಷನ್‍ಕಾರ್ಡ್‍ಗೆ ಕಳೆದ ನಾಲ್ಕು ತಿಂಗಳಿಂದ ಪಡಿತರವನ್ನು ರದ್ದುಗೊಳಿಸಿದ್ದಾರೆ ಕೇಳಿದರೆ ನಿಮ್ಮ ಆಧಾರಕಾರ್ಡ್ ಲಿಂಕ್ ಮಾಡಿ ಎನ್ನುತ್ತಾರೇ ನಾವು ಆಧಾರಕಾರ್ಡ್ ಮಾಡಲು ಬಂದರೇ ಇಲ್ಲಿ ಯಾರು ಇರುವುದಿಲ್ಲ ರೇಷ್ಮೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ನಮಗೆ ಕೂಲಿ ಕೆಲಸವನ್ನು ಬಿಟ್ಟು ಆಧಾರಕಾರ್ಡ್‍ಗಾಗಿ ಕಳೆದ ಮೂರು ದಿನಗಳಿಂದ ಬಂದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಜಾದ್ ನಗರದ ಝರೀನಾ ದೂರಿದ್ದಾರೆ.
    ಮತ್ತೊಂದಡೆ ತಾಲೂಕಿನ ದೇವರಮಳ್ಳೂರಿನ ವೆಂಕಟೇಶ್ ಮಾತನಾಡಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರನ ಹೆಸರು ತಿದ್ದುಪಡಿ ಮಾಡಲು ಕಳೆದ ಮೂರು ದಿನಗಳಿಂದ ಬಂದು ಹೋಗುವ ಕಾಯಕ ಮಾಡಿಕೊಂಡಿದ್ದೇನೆ ಈ ಕೇಂದ್ರ ಯಾರು ನಿರ್ವಹಣೆ ಮಾಡುತ್ತಾರೇ? ಯಾವಾಗ ಬರ್ತಾರೇ? ಎಲ್ಲಿಗೆ ಹೋಗಿರುತ್ತಾರೇ? ಎಂಬುದು ಮಾಹಿತಿ ಇರುವುದಿಲ್ಲ ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಆಧಾರ ನೊಂದಣಿ ಕೇಂದ್ರವನ್ನು ನಿರ್ವಹಿಸಬೇಕೆಂದು ಮನವಿ ಮಾಡಿದ್ದಾರೆ.
    ಒಟ್ಟಾರೇ ಸರಕಾರಿ ಸೌಲಭ್ಯಕ್ಕಾಗಿ ಸರಕಾರಗಳು ಆಧಾರ ನೊಂದಣಿ ಕಡ್ಡಾಯಗೊಳಿಸಿದೆ ಆದರೇ ಆಧಾರಕಾರ್ಡ್ ಮಾಡಿಸಲು ನಾಗರಿಕರು ನಿತ್ಯ ತೊಂದರೆಯನ್ನು ಅನುಭವಿಸುವ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿರುವು ಮಾತ್ರ ಜನಜನಿತವಾಗಿದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತೆರೆದಿರುವ ಆಧಾರ ನೊಂದಣೆ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವೆಂದು ಜರೀನಾ ಮತ್ತು ವೆಂಕಟೇಶ್ ದೂರಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...