ಗಾಲಿಗಳ ಮೇಲೆ ವಿಜ್ಞಾನ ಎಂಬ ವಸ್ತು ಪ್ರದರ್ಶನ

Source: sonews | By Staff Correspondent | Published on 20th September 2018, 10:53 PM | State News | Don't Miss |

ಕೋಲಾರ : ಮೌಡ್ಯತೆಯನ್ನು ನಂಬದೆ  ಪ್ರಕೃತಿಯ ಮುಂದೆ ಸತ್ಯವನ್ನು ಪ್ರತಿಪಾದಿಸುವುದೇ ವಿಜ್ಞಾನವೆಂದು ಶಿಕ್ಷಣ ಸಂಯೋಜಕ ಆರ್. ಶ್ರೀನಿವಾಸನ್ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೂಲೂರಿನಲ್ಲಿ ಅಗಸ್ತ್ಯ ಪೌಂಡೇಷನ್ ವತಿಯಿಂದ ಗಾಲಿಗಳ ಮೇಲೆ ವಿಜ್ಞಾನ ಎಂಬ ವಸ್ತು ಪ್ರದರ್ಶನದಲ್ಲಿ ಮಾತನಾಡುತ್ತಿದ್ದರು.

ಮೌಡ್ಯ ಮತ್ತು ಸತ್ಯಗಳ ನಡುವಿನಲ್ಲಿ ಮನುಷ್ಯ ಒದ್ದಾಡುತ್ತಿದ್ದಾನೆ. ಕೆಲವರು ಇಂದು ವಿಜ್ಞಾನದವೆಂದು ನಂಬುವರು. ಕೆಲವು ಆತ್ಮ ವಂಚನೆಯಿಂದ ಮೌಡ್ಯವನ್ನು ಇದೆ ಸತ್ಯವೆಂದು ನಂಬಿ ಮೋಸಹೋಗುವರು. ಆದಿ ಮಾನವನಿಂದ ಇಂದಿನ ಪ್ರಸ್ತುತ ಶರವೇಗದ ಜನಸಂಖ್ಯೆಗೆ ವಿಜ್ಞಾನದಿಂದ ಅಪಾರ ಕೊಡುಗೆ ಪಡೆದಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ. ಆದರೆ ದುರಾಸೆಯ ಮನುಷ್ಯ ಎಷ್ಟು ಜ್ಞಾನವಂತನಾದರೂ ಪ್ರಕೃತಿಯ ಮೇಲೆ ನಿರಂತರ ದಾಳಿ ಮಾಡುತ್ತಿದ್ದು, ಒಂದಲ್ಲಾ ಒಂದು ದಿನ ಇಡೀ ಮನುಕುಲ ಸರ್ವನಾಶಕ್ಕೆ ಕಾರಣಕರ್ತನಾಗುತ್ತಿದ್ದಾನೆ ಎಂದರು.

ಈಗಾಗಲೇ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಕಾಗದದ ಮೇಲೆ ಆದೇಶಗಳು ಜಾರಿಯಾಗದೇ ಕಾಯ ಪ್ರವೃತ್ತರಾಗಿ ಹಸಿರು ಹೊದಿಕೆ, ಬೀಜದುಂಡೆ, ಮರಗೀಡ ಉಳಿಸಿ ಎಂದರು.

ಕಾರ್ಯಕ್ರಮದಲ್ಲಿ ಸಿ.ಆರ್.ಪಿ. ಬಸವರಾಜ ಗ್ರಾಮ ಪಂಚಾಯಿತಿ ಸದಸ್ಯರಾದ ಮುನಿರತ್ನಮ್ಮ ಮುಖ್ಯ ಶಿಕ್ಷಕ ಲಕ್ಷ್ಮಿನಾರಾಯಣ ಎಸ್.ಡಿ.ಎಂ.ಸಿ. ಮಂಜುಳಮ್ಮ, ಶಿಕ್ಷಕರಾದ ನಂದೀಶ್, ಗೋಪಾಲ, ಮೃತ್ಯುಂಜಯ್ಯ, ಸುನೀತ, ಅಗಸ್ತ್ಯ ಪೌಂಡೇಷನ್ ನಾಗಪ್ಪ, ವೆಂಕಟೇಶ್, ಮಹೇಶ್ ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...