ರೋಟರಿ ಸಂಸ್ಥೆ ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ- ಮಂಜುನಾಥರೆಡ್ಡಿ

Source: sonews | By Staff Correspondent | Published on 18th July 2018, 10:09 PM | State News | Don't Miss |

ಶ್ರೀನಿವಾಸಪುರ: ರೋಟರಿ ಸಂಸ್ಥೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಸಾಮಾಜಿಕ ಕೆಲಸಗಳನ್ನು ನಡೆಸುತ್ತಿದ್ದು ಸಮಾಜ ಸೇವೆಗೆ ಎಲ್ಲರನ್ನು ಒಗ್ಗೂಡಿಸುವ ಕೆಲಸಗಳಿಗೆ ಪ್ರೇರಣೆ ನಿಡುತ್ತಿದೆ ಎಂದು ಶ್ರೀನಿವಾಸಪುರ ರೋಟರಿ ಸೆಂಟ್ರಲ್‍ನ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮಂಜುನಾಥರೆಡ್ಡಿ ತಿಳಿಸಿದರು.
   
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ಶ್ರೀನಿವಾಸಪುರ ರೊಟರಿ ಸೆಂಟ್ರಲ್ ವತಿಯಿಂದ ನೂತನ ಅಧ್ಯಕ್ಷರ ಪದಗ್ರಹಣ ಮತ್ತು ಪ್ರತಿಭಾವಂತ ವಿಧ್ಯಾರ್ಥಿಗಳ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ರೋಟರಿ ಸಂಸ್ಥೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಉಚಿತ ಆರೋಗ್ಯ ತಪಾಸಣಾ ಶಿಭಿರ, ಸರ್ಕಾರಿ ಆಸ್ಪತ್ರೆಯ ಕೇಂದ್ರಗಳಿಗೆ ಉಚಿತವಾಗಿ ಡಯಾಲಿಸಿಸ್ ಯಂತ್ರಗಳನ್ನು ನೀಡಿ ಬಡ ರೋಗಿಗಳ ಆರೋಗ್ಯ ಸುಧಾರಣೆಯನ್ನು ಮಾಡುತ್ತಿದೆ. ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿರುವ ರೋಗಿಗಳಿಗೆ ಸಹಾಯ ಹಸ್ತ ನೀಡುವಲ್ಲಿ ರೋಟರಿ ಸಂಸ್ಥೆ ಸದಾ ಸಿದ್ದವಿದೆ ಎಂದರು.
   
ಗ್ರಾಮೀಣ ಭಾಗದ ಬಡ ವಿಧ್ಯಾರ್ಥಿಗಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಶೈಕ್ಷಣಿಕ ಮುಂದುವರಿಕೆಗೆ ಬೇಕಾದ ಪಠ್ಯ ಮತ್ತು ಪಠ್ಯೇತರ ಸಾಮಗ್ರ್ರಿಗಳನ್ನು ಉಚಿತವಾಗಿ ವಿvರಣೆ ಮಾಡುತ್ತಿದೆ. ಉಚಿತವಾಗಿ ವಿಧ್ಯಾರ್ಥಿಗಳಿಗೆ ನಿಘಂಟು, ಸೋಲಾರ್ ವಿಧ್ಯುತ್ ದೀಪಗಳನ್ನು ನೀಡಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಹಕಾರಿಯಾಗಿದೆ. ಎಲ್.ಗೋಪಾಲಕೃಷ್ಣ ರವರು ನಮಗೆ ಮಾರ್ಗದರ್ಶಕರಾಗಿ ನಮ್ಮನ್ನು ಮುನ್ನಡೆಸುತ್ತಿದ್ದು ಈ ತಾಲೂಕಿನಲ್ಲಿ ಮತ್ತಷ್ಟು ಕಾರ್ಯಕ್ರಮಗಳನ್ನು ನಡೆಸಲು ಉತ್ಸುಕರಾಗಿದ್ದೇವೆ ಎಂದರು.
  
2017-18ನೇ ಸಾಲಿನಲ್ಲಿ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಗಳಿಸಿ ವೈಧ್ಯಕೀಯ ಪದವಿಗೆ ಪ್ರವೇಶವನ್ನು ಪಡೆದ ತಾಲೂಕಿನ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಹಾಗೂ ಗಣಕಯಂತ್ರ ಮತ್ತು ಕನ್ನಡ ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ನೀಡಿ ಸತ್ಕರಿಸಿ ಪ್ರತಿಭಾ ಪುರಸ್ಕಾರವನ್ನು ನೀಡಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ನಾಮ ನಿರ್ಧೇಶಿತ ಜಿಲ್ಲಾ ರಾಜ್ಯಪಾಲ ರೋ.ನಾಗೇಂದ್ರಪ್ರಸಾದ್, ಸಹಯಾಕ ರಾಜ್ಯಪಾಲ ರೋ.ಸೆಂದಿಲ್‍ಕುಮಾರ್, ಜಿಲ್ಲ ನಿರ್ಧೇಶಕರ ಸಂಯೋಜಕ ರೋ.ಶ್ರೀನಾಥ್, ಎಸ್.ವಿ.ಸುಧಾಕರ್, ಚಾರ್ಟರ್ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ಕಾರ್ಯದರ್ಶಿ ಎಸ್.ಶಿವಮೂರ್ತಿ, ನಿಕಟ ಪೂರ್ವ ಅಧ್ಯಕ್ಷ ರಾಜೇಂದ್ರಪ್ರಸಾದ್ ಇತರರು ಹಾಜರಿದ್ದರು.


 

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...