ರಾಯಲ್ಪಾಡು: ಸನ್ಮಾನಿತರು ಸಮಾಜದ ಪ್ರಗತಿಯಲ್ಲಿ ಪ್ರಾಮಾಣಿಕ ಪಾತ್ರವಹಿಸಿದಾಗ ಮಾತ್ರ ಅವರಿಗೆ ಗೌರವ, ಘನತೆ ಸಿಗುತ್ತದೆ-ವೆಲ್ಲಾಲ ಸಿ.ಎಸ್.ವಿಶ್ವನಾಥಶಾಸ್ತ್ರಿ

Source: shabbir | By Arshad Koppa | Published on 28th May 2017, 3:31 PM | State News |

ರಾಯಲ್ಪಾಡು : ಸನ್ಮಾನ, ಗೌರಗಳು ನಿಷ್ಠೆ ಹಾಗು ಜವಾಬ್ದಾರಿಗಳನ್ನು ಹೆಚ್ಚಿಸುತ್ತವೆ. ಇವನ್ನು ಸ್ವೀಕರಿಸಿದ ವ್ಯಕ್ತಿಯಿಂದ ಉತ್ತಮ ಕಾರ್ಯಗಳನ್ನು ಸಮಾಜ ನಿರೀಕ್ಷಿಸುತ್ತದೆ. ಸನ್ಮಾನಿತರು ಸಮಾಜದ ಪ್ರಗತಿಯಲ್ಲಿ ಪ್ರಾಮಾಣಿಕ ಪಾತ್ರವಹಿಸಿದಾಗ ಮಾತ್ರ ಅವರಿಗೆ ಗೌರವ, ಘನತೆ ಸಿಗುತ್ತದೆ. ಇದನ್ನು ಉಳಿಸಿಕೊಳ್ಳಬೇಕಿದೆ ಎಂದು ಧಾರ್ಮಿಕ ಮಾರ್ಗದರ್ಶಿ ಹಾಗು ಪತ್ರಕರ್ತ ವೆಲ್ಲಾಲ ಸಿ.ಎಸ್.ವಿಶ್ವನಾಥಶಾಸ್ತ್ರಿ ಅಭಿಪ್ರಾಯಪಟ್ಟರು.
 
ಅವರು ಅವಗಾನಪಲ್ಲಿಯ ಶ್ರೀ ಯೋಗಿನಾರೇಯಣ ಸಾಂಸ್ಕøತಿಕ ಕಲಾ ಟ್ರಸ್ಟಿನವರು ಗನಿಬಂಡೆಯ ಶ್ರೀ ವೇಂಕಟರಮಣಸ್ವಾಮಿ ದೇವಾಲಯದಲ್ಲಿ ಸಂಘಟಿಸಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ತತ್ವಪದ, ಚಕ್ಕಭಜನಾ ಗಾಯಕರ ಸಮಾವೇಶದ ಅಧ್ಯಕ್ಷತೆ ವಹಿಸಿ, ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ದಿನದಿನದ ಜಂಟಾಗಳ ನಡುವೆ ಹೋರಾಟ ನಡೆಸುವ ಜನರ ಮನಸ್ಸಿಗೆ ತತ್ವಪದಗಳು ನೆಮ್ಮದಿ ನೀಡುತ್ತವೆ ಎಂದು ತಿಳಿಸಿದರು.
 
ಕಾರ್ಯಕ್ರಮದಲ್ಲಿ ಸಾಹಿತಿ ಸ,ರಘುನಾಥ ಮಾತನಾಡಿ, ಚಕ್ಕಭಜನೆಗಳು ಭಕ್ತಿಯೊಂದಿಗೆ ದೈವೀಶೃಂಗಾರವನ್ನು ಭಕ್ತಿಯ ನೆಲೆಯಲ್ಲಿ ಚಿತ್ರಿಸುತ್ತವೆ. ಕೆಲವು ಪದಗಳು ಜಾನಪದರ ಸರಸ, ಶೃಂಗಾರಭಾವಗಳನ್ನು ಸೊಗಸಾಗಿ ಅಭಿವ್ಯಕ್ತಿಸುತ್ತವೆ. ಇವುಗಳಲ್ಲಿ ನಾಟಕೀಯತೆಯೂ ಕಂಡುಬರುತ್ತದೆ. ಅನೇಕವು ಉತ್ತಮ ಕಥನಗೀತೆಗಳಾಗಿವೆ. ಕುಣ ತ, ಗಾಯನ ಮಿಳಿತವಾದ ಈ ಕಲೆ ಮನರಂಜಿಸುವಲ್ಲಿಯೂ ಹಿಂದಿಲ್ಲ. ಆದರೆ ಇದಕ್ಕೆ ಕನ್ನಡ ಮತ್ತು ಸಂಸ್ಕøತಿಯಂಥ ಇಲಾಖೆಗಳಿಂದ ನಿರೀಕ್ಷಿತ ಪ್ರೋತ್ಸಾಹ ಸಿಕ್ಕದಿದ್ದರೂ ಸಾಮಾನ್ಯ ಜನ ಹಾಗು ಕಲಾವಿದರ ಶ್ರದ್ಧೆ ಇದನ್ನು ಜೀವಂತವಾಗಿ ಉಳಿಸಿದೆ. ಇದನ್ನೂ ತೆಲುಗು ಭಾಷೆಯದೆಂಬ ಪೂರ್ವಾಗ್ರಹ ಪೀಡೆ ಕಾಡುತ್ತಿದೆ. ಇದೂ ಕನ್ನಡ ನೆಲದ ಕಲೆ ಎಂಬ ಪ್ರಜ್ಞೆಯನ್ನು ಕನ್ನಡ ಮತ್ತು ಸಂಕ್ಕøತಿ ಇಲಾಖೆ, ಕರ್ನಾಟಕ ಜಾನಪದ ಅಕಾಡೆಮಿ ಬೆಳೆಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
 
ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ಅಧ್ಯಕ್ಷ ಎ.ಎಲ್.ವೆಂಕಟೇಶ್, ನಿರ್ದೇಶಕ ವರ್ತನಹಳ್ಳಿ ಶ್ರೀನಿವಾಸ, ಸಂಕಲನಕಾರ ವಿಜಯ್ಕುಮಾರ್, ಛಾಯಾಗ್ರಾಹಕ ಶಿವಾಜಿ, ಸಹಾಯಕ ಛಾಯಾಗ್ರಾಹಕ ಪಿ.ಎಸ್.ರಮೇಶ್, ಅರ್ಚಕ ಶ್ರೀನಾಥ, ಅವಲಕುಪ್ಪ ಗುರುಮೂರ್ತಿ, ಅವಗಾನಪಲ್ಲಿ ಶ್ರೀನಿವಾಸರೆಡ್ಡಿ, ಚಕ್ಕಭಜನ ತಂಡಗಳ ಕಲಾವಿದರು, ಅವರ ಗುರುಗಳು ಭಾಗವಹಿದ್ದರು.

 

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...