ಬಯಲು ಸೀಮೆಯ ಹಾಲು ಒಕ್ಕೂಟದ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸುವಂತೆ ರೈತಸಂಘ ಆಗ್ರಹ

Source: sonews | By Staff Correspondent | Published on 21st February 2019, 10:29 PM | State News |

ಕೋಲಾರ: ಬಯಲು ಸೀಮೆಯ ಹಾಲು ಒಕ್ಕೂಟದ ಬ್ರಹ್ಮಾಂಡ ಭ್ರಷ್ಟಚಾರ ಹಾಗೂ ನೇಮಕಾತಿಗಳಲ್ಲಿ ಆಗಿರುವ ಹಗರಣವನ್ನು  ಸಿ.ಬಿ.ಐಗೆ ಒಪ್ಪಿಸಬೇಕು ಹಾಗೂ ಬೇಸಿಗೆಯಲ್ಲಿ ಜಾನುವಾರುಗಳಿಗೆ ಉಚಿತವಾಗಿ ಮೇವು ಮತ್ತು ಪಶು ಆಹಾರವನ್ನು ಇಲಾಖೆಯಿಂದ ನೀಡಬೇಕು. ಹಾಗೂ ನೇಮಕಾತಿ ಮಾಡುವಾಗ ಒಕ್ಕೂಟದಲ್ಲಿ ದುಡಿಯುವ ಗುತ್ತಿಗೆ ಆದಾರದ ಕಾರ್ಮಿಕರನ್ನು ಪರಿಗಣಿಸಬೇಕೆಂದು ರೈತ ಸಂಘದಿಂದ ಹಾಲು ಒಕ್ಕೂಟದ ಹೋರಾಟ ಮಾಡಿ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದು ಕಡೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಸಾಲ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖ ಮಾಡುವ ಜೊತೆಗೆ ಕೃಷಿಯಿಂದ ವಿಮುಕ್ತಿ ಹೊಂದುತ್ತಿರುವ ಅನ್ನದಾತ ಆದರೂ ತನ್ನ ಸ್ವಾಭಿಮಾನದ ಬದುಕಿಗಾಗಿ ಬಯಲು ಸೀಮೆಯ ಲಕ್ಷಾಂತರ ಕುಟುಂಬಗಳು ತನ್ನ ಜೀವನ ನಿರ್ವಹಣೆ ಹೈನೋದ್ಯಮವನ್ನು ಅವಲಂಭಿಸಿ ಜೀವನ ಮಾಡುತ್ತಿದ್ದಾರೆ. ಅದರಲ್ಲೂ ಸಹ ಖಾಸಗಿ ಪಶು ಆಹಾರದಲ್ಲಿ ಕಲಬೆರಕೆ  ಪಶು ಇಲಾಖೆಯ ಬೇಜವಬ್ದಾರಿ ಇದರ ಮದ್ಯೆ ಡೈರಿಗಳಲ್ಲಿನ ಹಗಲು ದರೋಡೆಯ ಮದ್ಯದಲ್ಲಿಯೂ ಸವಾಲುಗಳ ಸಮಸ್ಯೆಗಳ ನಡುವೆ ಒದ್ದಾಡುತ್ತಿರುವ ಹೈನುಗಾರಿಕೆ ನಂಬಿರುವ ಲಕ್ಷಾಂತರ ಕುಟುಂಬಗಳ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಹಾಲು ಒಕ್ಕೂಟದ ಆಡಳಿತ ಮಂಡಳಿ ಹಾಲಿನ ದರ ಕಡಿಮೆ ಮಾಡುವ ಜೊತೆಗೆ ಏಕಾ ಏಕಿ ಪಶು ಆಹಾರದ ಬೆಲೆ 180 ರೂ ಏರಿಕೆ ಮಾಡಿರುವುದು ಬರಗಾಲದಲ್ಲಿ ರೈತರ ಮೇಲೆ ಬ್ರಹ್ಮಾಸ್ತ್ರವೆಂಬಂತಾಗಿದೆ. ಬೇಸಿಗೆಯಲ್ಲಿ ರೈತರ ಹಿತ ಕಾಯಬೆಕಾದ ಒಕ್ಕೂಟದ ಅಧಿಕಾರಿಗಳೇ ಈ ರೀತಿ ಏರಿಕೆ ಮಾಡಿದರೆ ನಮ್ಮ ಜೀವನದ ಗತಿಯೇನು ಎಂಬುದು ಹೈನೋದ್ಯಮದ ಲಕ್ಷಾಂತರ ಕುಟುಂಬಗಳ ಪ್ರಶ್ನೆಯಾಗಿದೆ. ಒಕ್ಕೂಟದ ಸಿಬ್ಬಂದಿಗೆ ಮತ್ತು ಅದ್ಯಕ್ಷರಿಗೆ ರೈತರ ಮೇಲೆ ಕರುಣೆಯಿದ್ದರೆ, ಕೂಡಲೇ ಬೇಸಿಗೆ ಮುಗಿಯವವರೆಗೂ ಉಚಿತವಾದ ಮೇವು ಮತ್ತು ಪಶುಆಹಾರವನ್ನು ಇಲಾಖೆಯಿಂದ ನೀಡಿ ಹೈನೊದ್ಯಮವನ್ನು ರಕ್ಷಣೆ ಮಾಡಬೇಕೆಂದು ಅಗ್ರಹಿಸಿದರು.
    
ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಲಕ್ಷಾಂತರ ಕುಟುಂಬಗಳ ಜೀವನಾದಾರವಾದ ಒಕ್ಕೂಟ ಇಂದು ದೀನೇ ದಿನೇ ಭ್ರಷ್ಟಚಾರದ ಕೂಪವಾಗುತ್ತಿದೆ. ನೇಮಕಾತಿಯಲ್ಲಿ ಕೋಟಿ ಕೋಟಿ ಹಗರಣ ಹಾಗೂ ಸಿಬ್ಬಂದಿಯ ಬೇಜವಬ್ದಾರಿಯಿಂದ ಚರಂಡಿ ಸೇರುತ್ತಿರುವ ಲಕ್ಷಾಂತರ ಲೀಟರ್ ಹಾಲು ಹಾಗೂ ಗುಣಮಟ್ಟವಿಲ್ಲದ ಪಶು ಲಸಿಕೆಗಳು ಮತ್ತು ಇದರಿಂದ ರೈತರಿಗೆ ಅನ್ಯಾಯದ ಜೊತೆಗೆ ಗ್ರಾಮೀಣ ಪ್ರದೇಶದ ಹಾಲು ಒಕ್ಕೂಟಗಳಲ್ಲಿನ ಹಗಲು ದರೋಡೆಗೆ ಕಡಿವಾಣವಿಲ್ಲವಂತಾಗಿ ನೋ ಪೇಮೆಂಟ್, ಎಲ್.ಎಲ್.ಆರ್ ಹೆಸರಿನಲ್ಲಿ ರೈತರನ್ನು ಶೋಷಣೆ ಮಾಡುತ್ತಿದ್ದಾರೆಂದು ಅಕ್ರೋಶ ವ್ಯಕ್ತಪಡಿಸಿದರು.

ಹೋರಾಟದ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿರವರು ಮಾತನಾಡಿ ಇಲಾಖೆಯಿಂದ ಪಶು ಆಹಾರ ಮೇವು ವಿತರಣೆ ಮಾಡಲು ಸಂಬಂದಪಟ್ಟ ಅದ್ಯಕ್ಷರೊಡನೆ ಮಾತನಾಡತ್ತೇನೆ ಹಾಗೂ ನೇಮಕಾತಿ ಹಾಲಿನ  ಚರಂಡಿಗೆ ಬಿಟ್ಟಿರುವ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಮತ್ತು ಡೈರಿಗಳನ್ನು ಗುಣಮಟ್ಟದ ಕಡಿಮೆ ಇರುವುದರಿಂದ ಅಂತಹ ಹಾಲಿಗೆ ನೋ ಪೇಮೆಂಟ್ ಎಲ್.ಎಲ್.ಆರ್ ನೀಡುತ್ತಿದ್ದೇವೆ ಇದರ ಬಗ್ಗೆ ಸಹ ತನಿಖೆ ಮಾಡಲು ನೇಮಕ ಮಾಡಿದ್ದೇವೆ ಹಾಗೂ ಡೈರಿಗಳಲ್ಲಿನ ಹಗರಣಗಳ ಬಗ್ಗೆ ತನಿಖೆ ಮಾಡಲು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದರು ಹಾಗೂ ಇರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಒಕ್ಕೂಟವನ್ನು ಲಾಭದತ್ತ ಕೊಂಡೋಯ್ಯುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹುಲ್ಕೂರ್ ಹರೀಕುಮಾರ್, ವಿಜಯ್‍ಪಾಲ್, ಮೇಲುಗಾಣಿ ದೇವರಾಜ್,  ಮೀಸೆ ವೆಂಕಟೇಶಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವಡ್ಡಹಳ್ಳಿ ಮಂಜುನಾಥ್, ಕೋಲಾರ ತಾ.ಅದ್ಯಕ್ಷ ಈಕಂಬಳ್ಳಿ ಮಂಜುನಾಥ್, ರೆಹಮಾನ್, ಮಂಜುನಾಥ್‍ರೆಡ್ಡಿ, ತೆರ್ನಹಳ್ಳಿ ಆಂಜಿನಪ್ಪ, ವೆಂಕಿ, ಯಲುವಳ್ಳಿ ಪ್ರಬಾಕರ್, ಆನಂದರೆಡ್ಡಿ, ಗಣೇಶ್, ಮಾಲೂರು ತಾ.ಅದ್ಯಕ್ಷ ವೆಂಕಟೇಶ್, ಮು.ತಾ.ಅ.ಪಾರುಕ್‍ಪಾಷ, ಬಂ ತಾ.ಅ ಐತಾಂಡಹಳ್ಳಿ ಅಂಬರೀಶ್, ಆಂಚಂಪಲ್ಲಿ ಗಂಗಾದರ್, ಸುಪ್ರೀಂಚಲ, ಸಾಗರ್, ಚಂದ್ರಪ್ಪ,  ಪುತ್ತೇರಿ ರಾಜು, ಪುರುಷೋತ್ತಮ್, ಗೋಪಾಲ್, ಬಾಲು, ಮುಂತಾದವರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...