ಶಿರಸಿ: ಸಂವಿಧಾನ ಉಳಿಸಿ ಸಮಾವೇಶ ;ಪ್ರೀತಿ ಪದಗಳ ಪಯಣ

Source: sonews | By Staff Correspondent | Published on 13th January 2018, 11:19 PM | Coastal News | State News | Don't Miss |

ವೇದಿಕೆಯಲ್ಲಿ ಮುಖ್ಯವಾಗಿ ಕೇಳಿಬಂದ ಮಾತುಗಳು

ಸತ್ತವರು ಮಾತ್ರವಲ್ಲ, ಕೊಲ್ಲುವವರೂ ನಮ್ಮ ಮಕ್ಕಳೇ. ನಮ್ಮ ಅಂಗಳದಲ್ಲಿ, ನಮ್ಮ ಶಾಲೆಯಲ್ಲಿ, ನಮ್ಮ ಕಣ್ಣೆದುರಲ್ಲಿ ಬೆಳೆದ ಮಕ್ಕಳು.
ಇಂಥ ಮಕ್ಕಳು ಯಾಕೆ ಅತ್ಯಾಚಾರಿಗಳಾಗುತ್ತಾರೆ? ಯಾಕೆ ಕೊಚ್ಚಿ ಕೊಲ್ಲುವ ಕೊಲೆಗಟುಕರಾಗ್ತಾರೆ?
ಯಾವುದೋ ಸಂಘಟನೆಯೆಡೆ ಕೈ ತೋರಿ ಸುಮ್ಮನಾಗುವುದು ಸುಲಭ.
ಆದರೆ ನಿಜವಾದ ಕಾರಣ ನಮ್ಮ ಮೌನ. ನಮ್ಮ ಅವಕಾಶವಾದದ, ನಿರ್ಲಕ್ಷ್ಯದ ಮೌನ.

~ ಡಾ. ವಿನಯಾ ವಕ್ಕುಂದ

ದೇಶದಲ್ಲಿ ಒಬ್ಬರು ದುಃಖಿಯಾಗಿದ್ದರೂ ದೇಶವನ್ನು ಸುಖೀ ದೇಶವೆಂದು ಹೇಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಸಮಾನತೆ ಇಲ್ಲದ ಯಾವ ದೇಶವೂ ಒಂದು ದೇಶವೆಂದು ಕರೆಸಿಕೊಳ್ಳಲು ಅರ್ಹವಲ್ಲ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂನಿನ್ನ ಜಾತಿ ಯಾವುದುಎಂದು ಕೇಳಲಾಗುವ ನೆಲ ದೇಶವೆಂದು ಹೇಗೆ ಕರೆಸಿಕೊಳ್ಳಬಲ್ಲದು?

~ ಮಾರ್ಟಿನ್ ಮಾಕ್ವಾನ್

 

ಸಂವಿಧಾನದ ಸ್ತಂಭಗಳು ಒಂದೊಂದೇ ಕುಸಿಯುತ್ತಿವೆ. ಅವನ್ನು ಕುಸಿದುಬೀಳುವಂತೆ ಮಾಡುತ್ತಿರುವವರು ಯಾರು? ನಾವು ಇಂದು ಮಾತನಾಡಲಾಗದ ಸ್ಥಿತಿ ಇದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ. ಇದಕ್ಕೆಲ್ಲ ಏನು ಕಾರಣ? ಮಾಧ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. 2018 ಅಂತ್ಯದ ವೇಳೆಗೆ ಯಾವುದಾದರೂ ವಾಹಿನಿ ಬಿಜೆಪಿ ಹಿಡಿತದಿಂದ ಹೊರತಾಗಿ ಉಳಿಯುತ್ತದೆ ಅನ್ನುವ ನಂಬಿಕೆ ನನಗಿಲ್ಲ.

~ ಶಶಿಧರ್ ಭಟ್

* ನಮಗೆ ಪ್ರಚೋದಕವಾಗಿ ಮಾತಾಡಬೇಡಿ ಎಂದು ಹೇಳುತ್ತಾರೆ. ಅವರು ಆಡುವ ಮಾತುಗಳನ್ನು ಕೇಳಿದರೆ ನಮ್ಮ ಮಾತು ಪ್ರಚೋದಕ ಅನ್ನಿಸುತ್ತದೆಯೇ? ನಾವು ಅವರ ಬಗ್ಗೆ ಸರಳವಾಗಿ ಮಾತನಾಡಿದರೂ ಅದು ಕಠೋರವಾಗಿ ಕೇಳಿಸುತ್ತದೆ. ಇದಕ್ಕೇನು ಮಾಡುವುದು? ನಾನು ಇಲ್ಲಿಯ ಸಂಸದರಿಗೆ ಒಂದು ಪ್ರಶ್ನೆಯನ್ನು ಕೇಳಿದರೂ ಅದು ಅವರಿಗೆ ಕಠೋರ ಅನ್ನಿಸುತ್ತದೆ. ಅವರಿಗೆ ನಾನು ಸಂವಿಧಾನ ಅಂದರೇನು ಎಂದು ಕೇಳುತ್ತೇನೆ.

** ಅವರು ನಿಜವಾಗಿಯೂ ಹಿಂದೂಗಳೇ? ಅವರ ಬಣ್ಣ ಕೇಸರಿಯಲ್ಲ. ಅವರ ಬಣ್ಣ ಈಗ ಬಯಲಾಗುತ್ತಿದೆ. ಇವರು ನನ್ನ ದೇಶದ ಹಿಂದೂಗಳಲ್ಲ. ಕಾವಿ ಎಂದರೆ ನನಗೆ ಬಹಳ ಪ್ರೀತಿ. ಆದರೆ ಜನರೀಗ ಕಾವಿಯನ್ನು ವಿಕಾರಗೊಳಿಸಿದ್ದಾರೆ.

*** ನನಗೆ ಇತಿಹಾಸದ ಮಾತನಾಡಲು ಸಮಯವಿಲ್ಲ. ಭವಿಷ್ಯದ ಬಗ್ಗೆ ಮಾತನಾಡಲು ಸಾಕಷ್ಟು ಸಮಯವಿದೆ. ನಾವು ಭವಿಷ್ಯದ ಬಗ್ಗೆ ಮಾತನಾಡೋಣ. ದಿನಗಳಲ್ಲಿ ನಾವು ಧೈರ್ಯವಾಗಿ ಮಾತನಾಡಬೇಕಿದೆ. ಇಲ್ಲವಾದರೆ ನಮ್ಮ ಮೌನವೇ ನಮ್ಮನ್ನು ಕೊಲ್ಲುತ್ತದೆ.

~ ಪ್ರಕಾಶ್ ರೈ

 

* ನಾವು ಇಂದು ಫ್ಯಾಸಿಸಮ್ಮಿನ ಹೆಬ್ಬಾಗಿಲಲ್ಲಿ ನಿಂತಿದ್ದೇವೆ. ಫ್ಯಾಸಿಸಮ್ ಅಂದರೆ ಭಯ ಹುಟ್ಟಿಸುವುದು. ಭ್ರಮೆಗಳನ್ನು ಹುಟ್ಟಿಸುವುದು. ವೈರಿಗಳನ್ನು ಹುಟ್ಟಿಸಿ ಅವರ ಮನಸಿನಲ್ಲಿ ಕ್ರೌರ್ಯ ಬೆಳೆಯುವಂತೆ ಪ್ರಚೋದಿಸುವುದು. ಒಟ್ಟಾರೆ ಭಾರತದಲ್ಲಿ ಫ್ಯಾಸಿಸಮ್ಮಿನ ವ್ಯಾಖ್ಯಾನವೆಂದರೆ, ಸಂವಿಧಾನವನ್ನು ಅಳಿಸಿ ಹಾಕುವುದು.

** ಇಲ್ಲಿಯ ಜನರು ಸಹಜವಾಗಿ ಜಾತ್ಯತೀತರಾಗಿದ್ದಾರೆ. ಆದರೆ ಇವರನ್ನು ಪ್ರಜ್ಞಾಪೂರ್ವಕವಾಗಿ ಕೋಮುವಾದಿಗಳನ್ನಾಗಿ ಮಾಡಲಾಗುತ್ತಿದೆ. ದುಷ್ಕರ್ಮಿಗಳು ನಾಯಕತ್ವ ವಹಿಸಿದಾಗ ಸಜ್ಜನರು ಮನೆಯಲ್ಲಿ ವಿಶ್ಲೇಷಣೆ ಮಾಡುತ್ತ ಕೂತಿರುತ್ತಾರೆ. ಆದ್ದರಿಂದಲೇ ಕೋಮು ಗಲಭೆಗಳಿಗೆ ಅವಕಾಶ ಸೃಷ್ಟಿಯಾಗುತ್ತದೆ.

*** ಗರ್ವ್ ಸೆ ಕಹೋ ಹಮ್ ಹಿಂದೂ ಹೈ, ಗರ್ವ್ ಸೆ ಕಹೋ ಹಮ್ ಮುಸ್ಲಿಮ್ ಹೈ ಯಾವುದೂ ಬೇಕಾಗಿಲ್ಲ. ವೀ ಪೀಪಲ್ ಆಫ್ ಇಂಡಿಯಾ ಅಂದರೆ ವೀ ಪೀಪಲ್ ಆಫ್ ಹಿಂದೂ/ಮುಸ್ಲಿಮ್/ಕಾಂಗ್ರೆಸ್/ಬಿಜೆಪಿ ಯಾವುದೂ ಅಲ್ಲ. ಅದರರ್ಥ ನಾವು ಭಾರತದ ಜನರು ಎಂದು ಮಾತ್ರ.

~ ರಂಜಾನ್ ದರ್ಗಾ

 

ಸಂವಿಧಾನ ಬದಲಿಸುತ್ತೇವೆಅಂದ ಮಹನೀಯರಿಗೆ ಒಂದು ಸಂದೇಶ :

ಸ್ವಾಮಿ,
ನೀವು ನಮ್ಮ ಸಂವಿಧಾನವನ್ನು ಬದಲಾಯಿಸುವುದು ಅಸಾಧ್ಯ ಯಾಕೆಂದರೆ ಬಾಬಾ ಸಾಹೇಬ್ ಅಂಬೇಡ್ಕರರು ನಮ್ಮ ಸಂವಿಧಾನವನ್ನು ಕಾಗದದ ಮೇಲೆ ಬರೆದಿಲ್ಲ, ನಮ್ಮ ಹೃದಯಗಳಲ್ಲಿ ಬರೆದಿದ್ದಾರೆ.
ಸಂವಿಧಾನ ನಮ್ಮ ದೇಶದ ಬಹು ದೊಡ್ಡ ಕನಸು. ಕನಸನ್ನು ಬಾಬಾ ಸಾಹೇಬರು ಬರೆದಿದ್ದಾರೆ. ಯಾರು ಸಾವಿರಾರು ವರ್ಷಗಳ ಕಾಲ ಕ್ರೌರ್ಯವನ್ನು, ಅವಮಾನವನ್ನು ಸಹಿಸಿಕೊಂಡು ಬಂದರೋ ಅವರನ್ನು ಮನುಷ್ಯರು ಎಂದು ಗುರುತಿಸಿರುವ ಸಂವಿಧಾನವನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ.
ನಮ್ಮ ಸಂವಿಧಾನದೊಳಗೆ ನಮ್ಮ ನೆನಪುಗಳಿವೆ. ನಾವು ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಸೌಹಾರ್ದತೆಯ ನೆನಪುಗಳು ನಮಗೆ ಇದೆ. ನೆನಪುಗಳನ್ನು ನೀವು ನಾಶ ಮಾಡಲು ಹೊರಟಿದ್ದೀರಿ. ಅದು ಸಾಧ್ಯವಿಲ್ಲ.

~ ರಾಜೇಂದ್ರ ಚೆನ್ನಿ

 

ಕೊಲೆಯಾದವರ ಕುಟುಂಬಗಳೂ ಅನಾಥವಾಗುತ್ತವೆ. ಕೊಲೆ ಮಾಡಿದವರ ಕುಟುಂಬಗಳೂ ಅನಾಥವಾಗ್ತವೆ. ಯುವಜನರು, ಅದರಲ್ಲೂ ಕರಾವಳಿಯ ಯುವಜನರು ಕೋಮುವಾದದ ಮೂಲಕ ಅಪರಾಧ ಜಗತ್ತನ್ನು ಪ್ರವೇಶಿಸಿ ಕೊಲೆ ಮಾಡುವತನಕವೂ ಹೋಗುವುದನ್ನು ನಾವು ನೋಡುತ್ತಿದ್ದೇವೆ, ಕರವಾಳಿಯ ಜೈಲುಗಳಲ್ಲಿ ಕೂಡಾ ಹಿಂದೂ ಜೈಲು, ಮುಸ್ಲಿಂ ಜೈಲು ಎಂಬ ವಿಭಜನೆ ಇದೆ. ಒಂದು ಸಣ್ಣ ಕಿಡಿ ಹೊತ್ತಿದರೂ ಎರಡು ತಲೆಗಳು ಉರುಳುವಂಥ ಪರಿಸ್ಥಿತಿ ಅಲ್ಲಿದೆ. ಇಂಥ ಸ್ಥಿತಿಯಿಂದ ಸಮಾಜವನ್ನು ಹೊರತರುವ ಜವಾಬ್ದಾರಿ ನಮ್ಮ ಮೇಲಿದೆ.
ಶಿಕ್ಷಣ, ಅರೋಗ್ಯ, ರೈತರ ಸಂಕಷ್ಟಗಳೇ ಮೊದಲಾದ ಬದುಕಿನ ಮೂಲಭೂತ ಪ್ರಶ್ನೆಗಳಿಂದ ನಮ್ಮ ಗಮನವನ್ನು ಬೇರೆಡೆ ತಿರುಗಿಸುವ ಹುನ್ನಾರಕ್ಕೆ ಬಲಿ ಬೀಳದಂತೆ ನಾವು ಎಚ್ಚರವಹಿಸಬೇಕಿದೆ.

~ ಮುನೀರ್ ಕಾಟಿಪಳ್ಳ

 

ಉತ್ತರ ಕನ್ನಡದಲ್ಲಿ ಗಾಯ ಆಗಿದೆ. ರಕ್ತ ಹರಿಸಿದೆ. ಗಾಯ ಮಾಯುತ್ತಲೂ ಇದೆ. ಮತ್ತೆ ಅಂಥ ಗಾಯಗಳು ಆಗದಿರಲಿ ಎಂದು ಸಮಾವೇಶ ಆಯೋಜನೆಗೊಂಡಿದೆ. ಯಾರು ಸತ್ತರೂ ಅದು ಯಾವ ತಾಯಿಯ ಮಗು ಎಂದು ಯೋಚಿಸಬೇಕು ಹೊರತು ಯಾವ ಧರ್ಮದ್ದು ಎಂದು ಯೋಚಿಸಬಾರದು. ನಿಟ್ಟಿನಲ್ಲಿ ನಮ್ಮ ಸಮಾಜದ ಚಿಂತನೆ ರೂಪುಗೊಳ್ಳಬೇಕು.

ಕೆಲವರು ರಕ್ತಸಿಕ್ತ ಭಾರತದ ಕಲ್ಪನೆಯನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ಯುದ್ಧ ಮಾಡುತ್ತಲೇ ಇರಬೇಕು, ರಕ್ತ ಹರಿಯುತ್ತಿರಬೇಕು ತಾವು ಚುನಾವಣೆ ಗೆಲ್ಲಬೇಕು ಎಂದು ಅವರು ಬಯಸುತ್ತಾರೆ. ಆದರೆ ನಮ್ಮ ದೇಶದ ಜನರಿಗೊಂದು ವಿವೇಕವಿದೆ. ವಿವೇಕ ಅವರ ಬಯಕೆಗಳನ್ನು ಈಡೇರಲು ಬಿಡುವುದಿಲ್ಲ.
ನ್ಯಾಯಾಧೀಶರುಗಳೇ ಡೆಮಾಕ್ರಸಿ ಅಪಾಯದಲ್ಲಿದೆ ಎಂದು ಹೇಳುತ್ತಿದ್ದಾರೆ. ಒಂದು ಹೆಣ ಬಿದ್ದರೆ ನಾವು ಗೆಲ್ಲುತ್ತೇವೆ ಅನ್ನುವ ಲೆಕ್ಕಾಚಾರದ ಜನ ಇರುವಾಗ ನಾವು ಡೆಮಾಕ್ರಸಿಯ ಕುರಿತು ಮಾತನಾಡಬೇಕಿದೆ.

ದೇಶದಲ್ಲಿ ಚುನಾವಣೆ ಯಶಸ್ವಿಯಾಗಿ ನಡೆಯುವುದೇ ಡೆಮಾಕ್ರಸಿ ಅಲ್ಲ. ಯಾವ ದೇಶದಲ್ಲಿ ಮನುಷ್ಯ ಸಂಬಂಧಗಳು ಉತ್ತಮವಾಗಿರುತ್ತದೆಯೋ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರ್ಥ. ಹೊರಗೆ ಗಾಯವಾದರೆ ಗೊತ್ತಾಗುತ್ತದೆ. ಆದರೆ ಭಾರತದ ಒಳಗೆ ರಕ್ತಸ್ರಾವವಾಗುತ್ತಿದೆ. ಮನುಷ್ಯ ಸಂಬಂಧಗಳು ಹದಗೆಡುತ್ತಿವೆ.

ಭಾರತ ಬಹಳ ಸುಂದರವಾದ ದೇಶ. ಕೆಲವೇ ಕೆಲವು ಹುಳುಗಳು ದೇಶವನ್ನು ಕೊರೆದು ಹಾಳುಗೆಡವುತ್ತಿವೆ. ಹುಳುಗಳಿಂದ ಹಾನಿಯಾಗದಂತೆ ಕಾಪಾಡಿಕೊಳ್ಳಬೇಕಾದುದು ನಮ್ಮ ಜವಾಬ್ದಾರಿಯಾಗಿದೆ.
ಬೆಂಕಿ ನಂದಿಸಲು ಬೇಕಿರುವುದು ಬೆಂಕಿಯಲ್ಲ, ನೀರು. ಭಾರತದ ಭಾಷೆ ದ್ವೇಷದ ಭಾಷೆಯಲ್ಲ, ಹೃದಯದ ಭಾಷೆ. ಹೃದಯದ ಭಾಷೆಯನ್ನು ನಮ್ಮದಾಗಿಸಿಕೊಳ್ಳೋಣ.

~ ರಹಮತ್ ತರಿಕೆರೆ

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...