ಸ್ವಯಂ ಘೋಷಿತ ಗೋರಕ್ಷಕರಿಂದ ಜಾನುವಾರು ಸಾಗಾಟ ಲಾರಿಯ ಮೇಲೆ ದಾಳಿ; 11 ಜನರ  ಬಂಧನ

Source: sonews | By Staff Correspondent | Published on 21st May 2018, 5:40 PM | Coastal News | State News | Don't Miss |


•    ಗುಜರಾತ್ ನಿಂದ ಕೇರಳಕ್ಕೆ ಹೈನೋದ್ಯಮಕ್ಕಾಗಿ ದನ ಸಾಗಾಟವಾಗುತ್ತಿತ್ತು.
•    ಮಂಗಳೂರು ಬಿಜೆಪಿ ಶಾಸಕನ ಸಹೋದರನಿಗೆ ಸೇರಿದ ಜಾನುವಾರು
•    ಶಾಸಕನ ಕರೆಯಿಂದಾಗಿ ಗೋರಕ್ಷಕರ ಮೇಲೆ ಕ್ರಮ ಜರಗಿಸಿದ ಪೊಲೀಸರು

ಭಟ್ಕಳ: ಗುಜರಾತ್ ರಾಜ್ಯದಿಂದ ಕೇರಳಕ್ಕೆ ದನಗಳನ್ನು ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಡೆದ ಗೋರಕ್ಷಕರು ಎರಡು ಲಾರಿಯ ಚಾಲಕ, ಕ್ಲಿನರ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ಮಾಡಿದ ಘಟನೆ ರವಿವಾರ ರಾತ್ರಿ ಮುರುಡೇಶ್ವರ ರಾ.ಹೆ 66 ರಲ್ಲಿ ಜರಗಿದೆ. 

ಹಲ್ಲೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸರು 13ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು 11ಬಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 
ಬಂಧಿತರನ್ನು ನಾಗರಾಜ ನಾಯ್ಕ, ಜನಾರ್ಧನ, ವೆಂಕಟೇಶ್, ಕುಮಾರ್, ರಾಮಾ, ಭಾಸ್ಕರ್, ಮಹೇಶ್, ಮಂಜುನಾಥ್, ಅಣ್ಣಪ್ಪ, ಗಿರೀಶ್, ಶಬರೀಶ ಎಂದು ತಿಳಿಬಂದಿದ್ದು ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿಲಾಗಿದೆ. 

ಮಂಗಳೂರು  ಬಿಜೆಪಿ ಶಾಸಕನ ಸಹೋದರನಿಗೆ ಸೇರಿದೆ ಎನ್ನಲಾದ 13ದನಗಳು ಹಾಗೂ 13ಕರುಗಳನ್ನು ರವಿವಾರ ರಾತ್ರಿ ಗುಜರಾತ್ ನಿಂದ ಕೇರಳಕ್ಕೆ ಹೈನೋದ್ಯಮಕ್ಕಾಗಿ ಸಾಗಾಟ ಮಾಡುತ್ತಿತ್ತು ಎನ್ನಲಾಗಿದೆ. ಮುರುಡೇಶ್ವರದ ಕೆಲ ಸ್ವಯಂಘೋಷಿತ ಗೋರಕ್ಷಕರು ರಾತ್ರಿ ಲಾರಿ ಹಾಗೂ ಚಾಲಕರ ಮೇಲೆ ದಾಳಿ ಮಾಡಿದ್ದು ಲಾರಿಯ ಗಾಜುಗಳನ್ನು ಪುಡಿಗೈದಿದ್ದಾರೆ. ಎರಡು ಲಾರಿಯ ಚಾಲಕರು ಗೋಸಾಗಟಕ್ಕಾಗಿ ಇರುವ ಎಲ್ಲ ದಾಖಲೆಗಳು ಹಾಗೂ ಅನುಮತಿ ಪತ್ರವನ್ನು ತೋರಿಸಿದರು  ನಮ್ಮ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ ಎಂದು ಲಾರಿ ಚಾಲಕ ಬಲದೇವ ಚಾವಡ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಪೊಲೀಸರು ಬರಲು ಸ್ವಲ್ಪವೂ ತಡವಾಗಿದ್ದರೆ ನಾವು ಬದುಕಿ ಉಳಿಯುತ್ತಿರಲಿಲ್ಲ ಎಂದೂ ಮತ್ತೊರ್ವ ಚಾಲಕ ಕಾಲು ಭಾಯಿ ತಿಳಿಸಿದ್ದಾರೆ. 

ಶಾಸಕನ ಕರೆಯಿಂದಾಗಿ ಗೋರಕ್ಷಕರ ಮೇಲೆ ಕ್ರಮ?: ಮಂಗಳೂರು ಬಿಜೆಪಿ ಶಾಸಕನ ಸಹೋದರನಿಗೆ ಸೇರಿದೆ ಎನ್ನಲಾಗಿರುವ ಜಾನುವಾರುಗಳನ್ನು ಮುರುಡೇಶ್ವರದ ಸ್ವಯಂಘೋಷಿತ ಗೋರಕ್ಷಕರು ತಡೆದು ಲಾರಿ ಹಾಗೂ ಚಾಲಕರ ಮೇಲೆ ಹಲ್ಲೆ ಮಾಡಿದ್ದಲ್ಲದೆ ಎಲ್ಲ ಜನುವಾರುಗಳ ಹಗ್ಗವನ್ನು ಬಿಚ್ಚಿ ಹೊರಗಡೆ ಅಟ್ಟಿದ್ದರು. ಈ ವಿಷಯವನ್ನು ತಿಳಿದ ಶಾಸಕ ಮಂಗಳೂರುನಿಂದಲೆ ದೂರವಾಣಿ ಮೂಲಕ ಪೊಲೀಸರಿಗೆ ಕರೆ ಮಾಡಿದ್ದು ಒಂದು ವೇಳೆ ಒಂದು ಜಾನುವಾರುಗಳು ತಪ್ಪಿಹೋದಲ್ಲಿ ಪರಿಣಾಮ ನೆಟ್ಟಗಿರಲ್ಲ ಸ್ವಯಂಘೋಷಿತ ಗೋರಕ್ಷಕರ ಮೇಲೆ ಕ್ರಮ ಜರಗಿಸಿ ಎಂದು ಖಡಕ್ಕಾಗಿ ಸಂದೇಶ ನೀಡಿದ್ದರ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತಗೊಂಡ ಪೊಲೀಸರು 11ಮಂದಿ ಗೋರಕ್ಷಕರನ್ನು ಬಂಧಿಸಿದ್ದಾರೆ ಎಂದು ಸುದ್ದಿ ಈಗ ಹರಿದಾಡುತ್ತಿದ್ದು ಇದೇ ಜಾನುವಾರುಗಳು ಅನ್ಯಕೋಮಿಗೆ ಸೇರಿದ್ದರೆ ಅವು ಯಾವುದಾದರೂ ಗೋಶಾಲೆ ಪಾಲಾಗುತ್ತಿತ್ತಲ್ಲದೆ ಅಕ್ರಮ ಗೋಸಾಗಾಟದಡಿ ಪ್ರಕರಣವನ್ನು ದಾಖಲಿಸುತ್ತಿತ್ತು ಇಲ್ಲಿ ಒಬ್ಬರಿಗೆ ಒಂದು ಕಾನೂನು ಮತ್ತೊಬ್ಬರಿಗೆ ಇನ್ನೊಂದು ಕಾನೂನು ಇದು ಯಾವ ನ್ಯಾಯಾ ಎಂದು ಜನ ಕೇಳುವಂತಾಗಿದೆ. 
 

Read These Next