ಮುಂಡಗೋಡ : ಅರಣ್ಯಪ್ರದೇಶದಲ್ಲಿ ಹೆಣ್ಣಾನೆ ಸಾವು ತಡವಾಗಿ ಬೆಳಕಿಗೆ

Source: sonews | By Staff Correspondent | Published on 5th March 2018, 11:16 PM | Coastal News | State News | Don't Miss |

ಮುಂಡಗೋಡ : ತಾಲೂಕಿನ ಗಡಿಭಾಗವಾದ ಕುರ್ಲಿ ಅರಣ್ಯ ಪ್ರದೇಶದ ಕರಕಲಜಡ್ಡಿ-ಬಾಳೆಕೊಪ್ಪದ ಅರಣ್ಯದಲ್ಲಿ ಹೆಣ್ಣಾನೆಯೊಂದು ವಿದ್ಯುತ್ ಅವಘಡದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ

ಇಂದು ಈ ಕುರಿತು ಮಾಹಿತಿ ಲಭಿಸಿದ್ದು ಆನೆ ಮೃತಪಟ್ಟು 6-7 ದಿನಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಆನೆ ಮೃತಪಡಲು ಕಾಡಿನಲ್ಲಿ ಹಾದು ಹೋಗಿರುವ ಹೈಯ್‍ಟೆನ್ಶನ್ ವಿದ್ಯುತ್ ತಂತಿಯೇ ಕಾರಣವೆಂದು ಹೇಳಲಾಗಿದೆ.. ಕಾಡಿನಲ್ಲಿ ಬೆಳೆದ ಎತ್ತರದ ಮರಗಿಡಗಳ ಟೊಂಗೆಗಳು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಪ್ರಸರಣವಾಗಿ ಆನೆ ಸತ್ತಿರಬಹುದು ಎಂದು ಸೆಕ್ಷನ್ ಫಾರಸ್ಠರ ಪತ್ರಿಕೆಗೆ ತಿಳಿಸಿದ್ದಾರೆ. ಆನೆ ಮರೋತ್ತರ ಪರಿಕ್ಷೆಯಲ್ಲಿ ವಿದ್ಯುತ್ ತಾಗಿರುವುದರಿಂದ ಆನೆ ಸಾವಿಗೆ ಕಾರಣವೆಂದು ಹೇಳಲಾಗಿದೆ. ಆನೆಯ ಅಂತ್ಯಸಂಸ್ಕಾರ ಇಂದು ಮಾಡಿದ್ದು ಸ್ಥಳದಲ್ಲಿ ಉಪವಿಭಾಗದ ಎಸಿಎಫ್ ಜಿ.ಆರ್. ಶಶಿಧರ, ಆರ್.ಎಫ್.ಒ ಮಹೇಶ ಗೌಡ, ಸೆಕ್ಷನ್ ಫಾರೆಸ್ಟರ ಡಿ.ಎಸ್.ಆಗೇರ ಮುಂತಾದವರು ಇದ್ದರು ಎಂದು ಅರಣ್ಯ ಇಲಾಖೆಯಿಂದ ತಿಳಿದು ಬಂದಿದೆ
ಗ್ರಾಮಸ್ಥರು ಹೇಳಿಕೆ : ಆನೆ ಸತ್ತಿರುವುದು ವಿದ್ಯುತ್ ತಂತಿಗಳು ಮರಗಿಡಗಳ ಕೊಂಬೆಗೆ ತಾಗಿ ಅಲ್ಲಿಗೆ ಬಂದಿರುವ ಆನೆ ಇದಕ್ಕೆ ಬಲಿಯಾಗಿದೆ. ಅರಣ್ಯ ಇಲಾಖೆ ಇಂತಹ ಅವಘಡಗಳನ್ನು ತಪ್ಪಿಸಲು ವಿದ್ಯುತ್ ತಂತಿಗೆ ತಾಗಿರುವ ಕೊಂಬೆಗಳನ್ನು ತೆರವುಗೊಳಿಸಬೇಕು. ಅರಣ್ಯ ಇಲಾಖೆಯವರು ಇಂತಹವುಗಳನ್ನು ನಿರ್ಲಕ್ಷಿಸಬಾರದು
 
Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...