ಆಹಾರ ಇಲಾಖೆ ಅಧಿಕಾರಿಗಳು ಮತ್ತು ಟೆಂಡರ್‍ ದಾರರ ಕಳ್ಳ ಸಾಗಣಿಕೆಯ ಜಾಲ ಬಹಿರಂಗ

Source: sonews | By sub editor | Published on 12th January 2018, 10:14 PM | State News |

ಮುಳಬಾಗಿಲು: ಆಹಾರ ಇಲಾಖೆ ಅಧಿಕಾರಿಗಳು ಮತ್ತು ಟೆಂಡರ್‍ದಾರರ ಕಳ್ಳ ಸಾಗಣಿಕೆಯ ಒಳ ಒಪ್ಪಂದಿಂದ ಒಂದು ಲಾರಿಗೆ 1ಟನ್ ಕಡಿಮೆ ತೂಕ ಬಂದರೂ ದಾಸ್ತಾನು ಮಾಡಿಕೊಳ್ಳುತ್ತಿದ್ದು, ಪಡಿತರ ಅಂಗಡಿಗಳಿಗೆ ವಿತರಿಸುವಾಗ ಮೂಟೆಗೆ 4-6ಕೆಜಿ ಕಡಿಮೆ ತೂಕ ಬರುತ್ತಿದ್ದು, ಇದನ್ನು ವ್ಯವಸ್ಥಾಪಕ ಶಂಕರ್ ಮತ್ತು ಆಹಾರ ನೀರೀಕ್ಷಕ ರಾಜಣ್ಣ ಹಾಗೂ ಟೆಂಡರ್‍ದಾರರ ಕಳ್ಳ ವ್ಯವಹಾರದ ವಿರುದ್ದ ಹೋರಾಟದ ಮೂಲಕ ತಹಶೀಲ್ದಾರರನ್ನು ಸ್ಥಳಕ್ಕೆ ಕರೆಸಿಕೊಂಡು, ಈ ಹಗಲು ಲೂಟಿಗೆ ಕಡಿವಾಣ ಹಾಕುವಂತೆ ಆಗ್ರಹಿಸಲಾಯಿತು. 

ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿದ ಸರ್ಕಾರ ಬಡವರಿಗಾಗಿ ಅನೇಕ ಯೋಜನೆಗಳಲ್ಲಿ ಪ್ರಮುಖವಾದ ಯೋಜನೆ ಅನ್ನಭಾಗ್ಯ, ಹಸಿವು ಮುಕ್ತ ರಾಜ್ಯ ನಿರ್ಮಾಣ ಮಾಡಬೇಕು ಕಟ್ಟಕಡೆಯ ಪ್ರಜೆಯು ಹಸಿವಿನಿಂದ ನರಳಿ ಸಾಯಬಾರದು ಎಂಬ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂ ಖರ್ಚು ಮಾಡಿ ಅನ್ನಭಾಗ್ಯ ಯೋಜನೆಯನ್ನು ಜಾರಿಮಾಡಿದರೆ, ಆ ಜಾರಿ ಮಾಡಿದ ಯೋಜನೆಗಳು ಸಮರ್ಪಕವಾಗಿ ಬಡವರಿಗೆ ತಲುಪುತ್ತಿಲ್ಲ. ಎಂಬುದಕ್ಕೆ ಉದಾ:- ಇಂದು ರಾಜ್ಯಾಧ್ಯಂತ ಸಾವಿರಾರು ಟನ್ ಗೋದಿ, ರಾಗಿ, ಹೆಸರುಬೇಳೆ, ಎಣ್ಣೆ ಮತ್ತಿತರ ಪದಾರ್ಥಗಳು ಗೋದಾಮಿನಲ್ಲಿಯೇ ಕೊಳೆತು ಹುಳಬಿದ್ದು, ನಾಶವಾಗುತ್ತಿರುವುದು ಒಂದು ಕಡೆಯಾದರೆ ತೂಕದಲ್ಲಿ ಟನ್‍ಗಟ್ಟಲೆ ಮೋಸ ಮಾಡಿ ಅಧಿಕಾರಿಗಳು ಕಾಳ ಸಂತೆ ಕೋರರಿಗೆ ಮಾರಿಕೊಳ್ಳಲು ಮುಂದಾಗಿರುವುದು ತೂಕದಲ್ಲಿ ಮಾಡುತ್ತಿರುವ ಮಹಾ ವಂಚನೆಯೇ ಕಾರಣವಾಗಿದೆಂದು ಕಿಡಿ ಕಾರಿದರು.

ಸ್ಥಳಕ್ಕೆ ಬಂದ ಆಹಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹೋರಾಟಗಾರರು ಅಧಿಕಾರಿಗಳ ಮುಂದೆ ಲಾರಿಯಲ್ಲಿ ಬಂದ ಮೂಟೆಗಳನ್ನು ತೂಕ ಮಾಡಿದಾಗ 4-6ಕೆಜಿ ಕಡಿಮೆ ಬರುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೇ ಮಾಡಿದರೆ ನಮಗೇನು ಗೊತ್ತಿಲ್ಲವೆಂಬ ನಾಟಕವಾಡಲು ಶುರುಮಾಡಿದರು. ತುತ್ತುಅನ್ನಕ್ಕಾಗಿ ಪರದಾಡುತ್ತಿರುವ ಬಡವರಿಗೆ ಸಮರ್ಪಕವಾಗಿ ವಿತರಣೆ ಮಾಡಿದ್ದರೆ, ಹಸಿದ ಹೊಟ್ಟೆಗೆ ಊಟದ ಜೊತೆಗೆ ಅಪೌಷ್ಟಿಕತೆ ನಿವಾರಣೆಯಾಗುತ್ತಿತ್ತು. ಆದರೆ ಸರ್ಕಾರದ ಸಂಬಳತಿಂದು ಸಮರ್ಪಕವಾದ ಕೆಲಸ ಮಾಡದೆ ಈ ರೀತಿ ಕೋಟ್ಯಾಂತರ ರೂಪಾಯಿ ಬೆಳೆ ಬಾಳುವ ಆಹಾರ ಪದಾರ್ಥಗಳು ಗೋದಾಮಿನಲ್ಲೇ ವರ್ಷದಿಂದ ಕೊಳೆಯುತ್ತಿರುವುದು ಒಂದು ಕಡೆಯಾದರೆ ತೂಕದಲ್ಲಿ ಮೊಸ ಮಾಡುವ ದೊಡ್ಡಮಟ್ಟದ ಜಾಲವೇ ಆಹಾರ ಇಲಾಖೆಯಲ್ಲಿ ಬೇರು ಬಿಟ್ಟುಕೊಂಡು  ಬೇಜವಾಬ್ದಾರಿಯಿಂದ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಈ ಕೊಳತು ಹುಳಬಿದ್ದ ಗೋದಿಯಿಂದ ಅಲ್ಲೇ ದಾಸ್ತಾನು ಮಾಡಿರುವ ಅಕ್ಕಿಗೆ ಸಹ ಹುಳುಗಳು ಹರಡಿ ನಾನಾ ಕಾಯಿಲೆಗಳಿಗೆ ಎಡೆ ಮಾಡುಕೊಡುತ್ತದೆ ಒಂದು ಕಡೆ ಗೋದಾಮಿನಲ್ಲೇ ಕೊಳೆಯುತ್ತಿರುವ ಗೋದಿ, ಮತ್ತಿತರ ದಾನ್ಯಗಳು ಮತ್ತೊಂದಡೆ ಕಾಳಸಂತೆಯಲ್ಲಿ ಬಡವರ ಹಕ್ಕು ಮಾರಾಟ ರಾಜಾರೋಷವಾಗಿ ಅಧಿಕಾರಿಗಳ ಕುಮ್ಮಕ್ಕಿನಿಂದ ಟೆಂಡರ್‍ದಾರರೆ ಲಾರಿಗಟ್ಟಲೆ ಮಾರಾಟ ಮಾಡುತ್ತಿದ್ದರು. ಮೌನವಾಗಿರುವ ಅಧಿಕಾರಿಗಳ ವಿರುದ್ಧ ಅಸಮದಾನ ವ್ಯಕ್ತಪಡಿಸಿದರು.

ಆಹಾರ ಸರಬರಾಜು ಮಾಡುವ ಟೆಂಡರ್‍ದಾರರೆ ಕಾಳಸಂತೆ ಅಕ್ಕಿಯನ್ನು ಅಧಿಕಾರಿಗಳ ಕುಮ್ಮಕ್ಕಿನಿಂದ ರಾಜಾರೋಷವಾಗಿ ಬಂಗಾರಪೇಟೆ, ಕೋಲಾರ ಮಿಲ್‍ಗಳಿಗೆ ಸರಬರಾಜು ಮಾಡುತ್ತಿದ್ದರೆ, ಅದರ ಜೊತೆಗೆ ಬಡವರ ಹಸಿವನ್ನು ಕಿತ್ತುಕೊಂಡಿರುವ ಅಧಿಕಾರಿಗಳ ಬೇಜವಾಬ್ದಾರಿಗೆ ಇಂದು ಗೋದಮಿನಲ್ಲಿ ಕೊಳೆಯುತ್ತಿರುವ ಗೋದಿ ಮತ್ತಿತರ ದಾನ್ಯಗಳೇ ಉದಾಹರಣೆಯಾಗಿದೆ. ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವ ಟೆಂಡರ್‍ದಾರರ ಪರವಾನಿಗೆಯನ್ನುರದ್ದು ಮಾಡಿ ಅವರಿಗೆ ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡದೇ ಹೋದರೆ ಉಗ್ರವಾದ ಹೋರಾಟ ಮಾಡುವ ಎಚ್ಚರಿಕೆಯನ್ನು  ನೀಡಿದರು. 

ಮನವಿ ಸ್ವೀಕರಿಸಿದ ತಹಸೀಲ್ದಾರ್ ಪ್ರವೀಣ್ ರವರು ತೂಕದಲ್ಲಿ ನಡೆಯುತ್ತಿರುವ ಮೋಸವನ್ನು ಕಣ್ಣಾರೆ ಕಂಡರು ರಾಜಕಾರಣದ ಒತ್ತಡಕ್ಕೆ ಕಟ್ಟುಬಿದ್ದು, ಹಿರಿಯ ಆದಿಕಾರಿಗಳ ಜೊತೆ ಚರ್ಚಿಸಿ ಈ ತೂಕದ ಮೋಸದ ಜಾಲದಲ್ಲಿ ಭಾಗಿಯಾಗಿರುವವರ ವಿರುದ್ದ, ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುತ್ತಿರುವವರ ವಿರುದ್ಧವು ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದರು.

ಈ ಹೋರಾಟದಲ್ಲಿ ರೈತ ಸಂಘದ ಅದ್ಯಕ್ಷ ಪಾರುಕ್‍ಪಾಷ, ಹಸಿರು ಸೇನೆ ತಾ.ಅಧ್ಯಕ್ಷ ಯಲುವಳ್ಳಿ ಪ್ರಬಾಕರ್, ವಿದ್ಯಾರ್ಥಿ ಜಿ.ಅಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ತಾ.ಗೌ.ಅಧ್ಯಕ್ಷ ಮೇಲಾಗಾಣಿ ದೇವರಾಜ್, ಜಿಲ್ಲಾ ಪ್ರ.ಕಾರ್ಯದರ್ಶಿ ವಿಜಯ್‍ಪಾಲ್, ಭರತ್, ರಂಜಿತ್, ಸಾಗರ್, ಸುಪ್ರಿಮ್ ಚಲ, ಸುರೇಶ್, ಕಾವೇರಿ ಸುರೇಶ್, ತಾ.ಸಂಚಾಲಕ ಪುಲಿಕೇಶಿ, ಹಳೇಕುಪ್ಪಗಜ, ನಗರ.ಘ. ಅಧ್ಯಕ್ಷ ಬಾಲು, ಪುತ್ತೇರಿ ರಾಜು, ಅಣ್ಣಹಳ್ಳಿ ವೆಂಕಟರಾಮಪ್ಪ, ಅಣ್ಣಹಳ್ಳಿ ಶ್ರೀನಿವಾಸ್, ಅಣ್ಣಹಳ್ಳಿ ನಾಗರಾಜ, ಲಾಯರ್ ಮಣಿ, ಅಂಬ್ಲಿಕಲ್ ಮಂಜುನಾಥ, ಕೊಮ್ಮನಹಳ್ಳಿ ನವೀನ್ ಮುಂತಾದ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳು ಬಾಗವಹಿಸಿದರು. 


 

Read These Next

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ; ಉರ್ದು ಭಾಷಣದಲ್ಲಿ  ಖುಬೈಬ್ ಆಹ್ಮದ್ ಅಕ್ರಮಿ ದ್ವಿತೀಯಾ

ಭಟ್ಕಳ: ಮೈಸೂರಿನಲ್ಲಿ ಇಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳದ ಇಸ್ಲಾಮಿ ಆಂಗ್ಲೋ ಉರ್ದು ...

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...