ಮುಖ್ಯಮಂತ್ರಿ ಕುಮಾರಸ್ವಾಮಿ-ಮೋದಿ ಭೇಟಿ, ಕಾವೇರಿ ನಿರ್ವಹಣ ಮಂಡಳಿ ಸೇರಿ ಹಲವು ವಿಚಾರ ಚರ್ಚೆ

Source: so news | By Manju Naik | Published on 18th June 2018, 10:31 PM | State News |

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ನವದೆಹಲಿಯಲ್ಲಿ ಭೇಟಿಯಾಗಿದ್ದಾರೆ.
ಮಾದ್ಯಮ ವರದಿಯ ಅನುಸಾರ ಇತ್ತೀಚೆಗೆ ರಚನೆಯಾದ ಕಾವೇರಿ ನಿರ್ವಹಣಾ ಮಂಡಳಿ (ಸಿಎಂಎ) ಕುರಿತಂತೆ ಇಬ್ಬರು ನಾಯಕರು ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಕರ್ನಾಟಕದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲಿನ ಕೊರತೆಯ ಕುರಿತು ಸಹ ಚರ್ಚೆ ನಡೆದಿದೆ. 
ಇದಕ್ಕೂ ಮುನ್ನ ಕುಮಾರಸ್ವಾಮಿ ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು.
ಇನ್ನು ಸಮ್ಮಿಶ್ರ ಸರ್ಕಾರದ ಅಂಗಪಕ್ಷ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದ ಕುಮಾರಸ್ವಾಮಿ ಸರ್ಕಾರ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ  ವಿಸ್ತೃತವಾದ ಚರ್ಚೆ ನಡೆಸಿದ್ದಾರೆ.
ಜೂನ್ 19ರಂದು ರಾಹುಲ್ ಗಾಂಧಿ ಜನ್ಮದಿನವಿದ್ದು ಕುಮಾರಸ್ವಾಮಿ ಒಂದು ದಿನದ ಮುನ್ನವೇ ಕಾಂಗ್ರೆಸ್ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ. ಕುಮಾರಸ್ವಾಮಿ-ರಾಹುಲ್ ಭೇಟಿಯ ವೇಳೆ  ಜನತಾ ದಳ (ಸೆಕ್ಯುಲರ್) (ಜೆಡಿಎಸ್) ಪಕ್ಷದ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್  ಸಹ ಉಪಸ್ಥಿತರಿದ್ದರು.
ಇದೊಂದು ಸೌಹಾರ್ದದ ಭೇಟಿ ಎಂದು ಜೆಡಿಎಸ್ ಮೂಲಗಳು ಹೇಳಿದೆ.

Read These Next

ಭಟ್ಕಳ ಬೆಂಗ್ರೆಯಲ್ಲಿ ಕೊಳೆತು ಹೋಗುತ್ತಿರುವ ಭತ್ತದ ಸಶಿ; ದುಡಿಮೆಯ ಹಣವೆಲ್ಲ ಕೈ ಜಾರಿ ರೈತರು ಕಂಗಾಲು

ತಾಲೂಕಿನ ಮಳೆಯ ಸಂಕಷ್ಟಗಳು ನೆರೆ ಬಂದು ಹಿಂದಿರುಗಿದೊಡನೆ ಒಂದೊಂದಾಗಿ ಹೊರಗೆ ಬಂದು ಕಾಣಿಸಿಕೊಳ್ಳಲಾರಂಭಿಸಿವೆ. ಮಳೆಗಾಳಿಗೆ ಉರುಳಿ ...

ಪ್ರವಾಹ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ರಾಜ್ಯಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್

ಕೃಷ್ಣಾ ನದಿಯಿಂದ ಬಂದ ಮಹಾಪ್ರವಾಹದಲ್ಲಿ ವಿವಿಧ ಗ್ರಾಮಗಳ ನಿರಾಶ್ರಿತರ ಶಿಬಿರಗಳಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ...