ಕುಂದಾಪುರದಲ್ಲಿ ಶೃಂಗೇರಿಯ ವಿವಾಹಿತ ಪ್ರೇಮಿಗಳು ಆತ್ಮಹತ್ಯೆ

Source: S.O. News Service | By MV Bhatkal | Published on 1st October 2018, 2:54 PM | Coastal News | Don't Miss |

ಕುಂದಾಪುರ: ಬೆರಳೆಣಿಕೆ ದಿನಗಳ ಹಿಂದಷ್ಟೇ ಅಕ್ರಮ ಸಂಬಂಧ ಅಕ್ರಮವಲ್ಲ, ಅಪರಾಧವಲ್ಲಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ತೀರ್ಪು ಬಂದ ಎರಡೇ ದಿನಕ್ಕೆ ಶೃಂಗೇರಿಯ ವಿವಾಹಿತ ಪ್ರೇಮಿಗಳು ಉಡುಪಿಯ ಕುಂದಾಪುರದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸಿಂಧುವಳ್ಳಿ ಗ್ರಾಮದ ಗುರುಮೂರ್ತಿ (೪೮) ಮತ್ತು ನೇತ್ರವಳ್ಳಿ ಗ್ರಾಮದ ಶಾರದಾ (೩೦) ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಪ್ರೇಮಿಗಳು. ಘಟನಾ ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ. ಬೇಸಾಯ ಮಾಡುತ್ತಿದ್ದ ಗುರುಮೂರ್ತಿಗೆ ಪುತ್ರಿಯಿದ್ದಾಳೆ. ಅವರು ತನ್ನ ಪತ್ನಿ ಮತ್ತು ಪುತ್ರಿಯನ್ನು ತೊರೆದು ಶಾರದಾ ಜೊತೆಗೆ ಬಂದಿದ್ದ. ಶಾರದಾಗೂ ಪತಿ ಮತ್ತು ಒಬ್ಬಳು ಮಗಳು ಇದ್ದು ಅವರಿಬ್ಬರನ್ನು ಬಿಟ್ಟು ಬಂದಿದ್ದಳು.
ನಡೆದ್ದು ಏನು?
ಸಪ್ಟೆಂಬರ್ ೨೬ರಂದು ಶೃಂಗೇರಿಯ ಉಡುಪಿಯ ಕುಂದಾಪುರಕ್ಕೆ ಬಂದಿದ್ದ ಈ ಜೋಡಿ, ನಾಲ್ಕು ದಿನಕ್ಕಾಗಿ ಹರಿಪ್ರಸಾದ್ ಲಾಡ್ಜ್ ನಲ್ಲಿ ಕೊಠಡಿ ಪಡೆದಿತ್ತು. ಸುತ್ತಮುತ್ತ ಓಡಾಡಿಕೊಂಡು ಮತ್ತೆ ಬಂದು ಲಾಡ್ಜ್ ನಲ್ಲಿ ತಂಗುತ್ತಿದ್ದರು. ಆದರೆ ಕಳೆದ ರಾತ್ರಿಯಿಂದ ಕೊಠಡಿ ಬಂದ್ ಇತ್ತು. ಸಂಜೆಯವರೆಗೆ ಬಾಗಿಲು ತೆಗೆಯದ ಕಾರಣ ಲಾಡ್ಜ್ ಸಿಬ್ಬಂದಿ ಸಂಶಯ ವ್ಯಕ್ತಪಡಿಸಿ, ಬಾಗಿಲು ಒಡೆದಿದ್ದಾರೆ. ಈ ಸಂದರ್ಭ ಎರಡು ಮೃತದೇಹಗಳು ಕಂಡುಬಂದಿದೆ. ಗುರುಮೂರ್ತಿ ಮೃತದೇಹ ಬೆಡ್ ಮೇಲಿದ್ದರೆ, ಶಾರದಾ ದೇಹ ಕೆಳಗೆ ಮಲಗಿದ ಸ್ಥಿತಿಯಲ್ಲಿತ್ತು.
ಮದ್ಯಕ್ಕೆ ಕೀಟನಾಶಕ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಕೊಠಡಿಯೊಳಗೆ ವಿಷದ ಬಾಟಲಿ ಮತ್ತು ಮದ್ಯದ ಬಾಟಲಿ ಸಿಕ್ಕಿದೆ. ಸ್ಥಳದಲ್ಲಿ ಶಾರದಾ ಬರೆದಿರುವ ಡೆತ್ ನೋಟ್ ಸಿಕ್ಕಿದೆ. ನಮ್ಮ ಸಾವಿಗೆ ನನ್ನ ಗಂಡ ರಮೇಶ ಕಾರಣ ಅಂತ ಬರೆದುಕೊಂಡಿದ್ದಾಳೆ.
ಗುರುಮೂರ್ತಿ ಹಾಗೂ ಶಾರದಾ ಪ್ರೀತಿಗೆ, ಅಕ್ರಮ ಸಂಬಂಧಕ್ಕೆ ಶಾರದಾ ಗಂಡ ರಮೇಶ ತಡೆಯೊಡ್ಡಿದ್ದನಂತೆ. ಈ ಬಗ್ಗೆ ಸಾಕಷ್ಟು ಬಾರಿ ಗಲಾಟೆಯಾಗಿದೆ ಎಂದು ಮೃತರ ಸಂಬಂಧಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ರಮೇಶನ ವಿರುದ್ಧ ಕುಂದಾಪುರ ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...