ಸ್ಥಗಿತಗೊಂಡ ಸಹಕಾರ ಸಂಘಗಳ ರದ್ದತಿಗೆ ಸೂಚನೆ

Source: sonews | By Staff Correspondent | Published on 12th December 2017, 11:24 PM | State News |

ಕೋಲಾರ:  ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಗೆ ಒಳಪಡುವ 28 ಸಹಕಾರ ಸಂಘಗಳು ಹಲವು ವರ್ಷಗಳಿಂದ ಕಾರ್ಯಸ್ಥಗಿತವಾಗಿರುವುದರಿಂದ ವಿವಿಧ ಆದೇಶಗಳನ್ವಯ ಸದರಿ ಸಂಘಗಳನ್ನು ಸಮಾಪನೆಗೊಳಿಸಲಾಗಿದ್ದು, ಸದರಿ ಸಹಕಾರ ಸಂಘಗಳನ್ನು ಪುನಶ್ಚೇತನಗೊಳಿಸಲು ಅಥವಾ ಮೊಂದಣಿ ರದ್ದುಗೊಳಿಸಲು ಕ್ರಮವಹಿಸಬೇಕಾಗಿದೆ. 

ತಾಲ್ಲೂಕಿನ ಎಂ.ಜೆ.ಕಾಬ್ಲರ್ಸ್ ಸಹಕಾರ ಸಂಘ, ಸಂಯುಕ್ತ ಬೇಸಾಯ ಸಹಕಾರ ಸಂಘ, ಗ್ರಾಮಾಂತರ ಗೃಹ ನಿರ್ಮಾಣ ಸಹಕಾರ ಸಂಘ, ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘ, ಮೀನುಗಾರರ ಸಹಕಾರ ಸಂಘ, ಟೌನ್ ಗೃಹ ನಿರ್ಮಾಣ ಸಹಕಾರ ಸಂಘ, ಎಸ್.ಸಿ-ಎಸ್‍ಟಿ ಕಾರ್ಮಿಕರ ಸಹಕಾರ ಸಂಘ, ಮರಸನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ಜೊನ್ನಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಆಚಂಪಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ, ಎಂ.ಜೆ.ಕಾರ್ಪೆಂಟರ್ಸ್ ಸಹಕಾರ ಸಂಘ, ಕೂರಿಗೇಪಲ್ಲಿ ಚಾಪೆ ಹೆಣೆಯುವವರ ಸಹಕಾರ ಸಂಘ, ಸರ್ಕಾರಿ ನೌಕರರ ಬಳಕೆದಾರರ ಸಹಕಾರ ಸಂಘ, ಹರಿಜನ ರೈತರ ಸಾಮೂಹಿಕ ನೀರಾವರಿ ಬಾವಿಯ ಸಾಮೂಹಿಕ ಬೇಸಾಯ ಸಹಕಾರ ಸಂಘ, ಶ್ರೀ ವೆಂಕಟೇಶ್ವರ ರೇಷ್ಮೆ ವಿದ್ಯುತ್ ಮಗ್ಗಗಳ ನೇಕಾರರ ಮತ್ತು ಉತ್ಪಾದನೆ ಸಂಘ, ಶ್ರೀ ವೆಂಕಟೇಶ್ವರ ರೇಷ್ಮೆ ವಿದ್ಯುತ್ ಮಗ್ಗಗಳ ನೇಕಾರರ ಮತ್ತು ಉತ್ಪಾದನೆ ಮಾರಾಟ ಸಹಕಾರ ಸಂಘ, ಶ್ರೀ ರಾಜೀವ್ ಸವಿತಾ ಸಮಾಜ ವಿವಿದೋದ್ದೇಶ ಸಹಕಾರ ಸಂಘ, ಶ್ರೀ ವೆಂಕಟೇಶ್ವರ ರೇಷ್ಮೆ ಕೈಮಗ್ಗ ನೇಕಾರರ ಮತ್ತು ಉತ್ಪದನೆ ಮಾರಾಟ ಸಹಕಾರ ಸಂಘ, ತಿಮ್ಮನಪಲ್ಲಿ ವೃಕ್ಷ ಬೆಳೆಗಾರರ ಸಹಕಾರ ಸಂಘ, ಗಾಂಧೀಪುರ ವೃಕ್ಷ ಬೆಳೆಗಾರರ ಸಹಕಾರ ಸಂಘ, ತಾಲ್ಲೂಕು ಹರಿಜನ ಗಿರಿಜನ ಗೃಹ ನಿರ್ಮಾಣ ಸಹಕಾರ ಸಂಘ, ಸರ್ಕಾರಿ ನೌಕರರ ಗೃಹ ಸಹಕಾರ ಸಂಘ, ಶ್ರೀನಿವಾಸಪುರ ತಾಲ್ಲೂಕು ರೇಷ್ಮೆ ನೂಲು ತೆಗೆಯುವವರ ಸಹಕಾರ ಸಂಘ, ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ಹಣ್ಣು ಬೆಳೆಗಾರರ ಸಹಕಾರ ಸಂಘ, ಶ್ರೀನಿವಾಸಪುರ ತಾಲ್ಲೂಕು ಕೈಗಾರಿಕಾ ಸಹಕಾರ ಸಂಘ, ವಿಶ್ವಶಾಂತಿ ಮಹಿಳೆಯರ ವಿವಿದೋದ್ದೇಶ ಸಹಕಾರ ಸಂಘ ಈ ಸಂಘಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದರಿಂದ ಸಮಾಪನೆಗೊಳಿಸಲಾಗಿದೆ. 

ಮೇಲ್ಕಂಡ ಸಂಘಗಳನ್ನು ಮುನ್ನಡೆಸಿಕೊಂಡು ಹೋಗಲು ಸಂಬಂಧಪಟ್ಟ ಸಂಘಗಳ ಸದಸ್ಯರು ಆಸಕ್ತಿ ಹೊಂದಿದ್ದಲ್ಲಿ ಪ್ರಕಟಣೆ ದಿನಾಂಕದಿಂದ 10 ದಿನಗಳೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಸಮಾಪನಾ ಅಧಿಕಾರಿಗಳಿಗೆ ಸಲ್ಲಿಸಬಹುದು. ತಪ್ಪಿದ್ದಲ್ಲಿ ಸದರಿ ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಯಾವುದೇ ಸದಸ್ಯರು ಆಸಕ್ತಿ ಹೊಂದಿರುವುದಿಲ್ಲ ಎಂದು ಹಾಗೂ ಸದರಿ ಸಂಘದಿಂದ ಯಾವುದೇ ಸದಸ್ಯರಿಗಾಗಲೀ ಅಥವಾ ಸಾರ್ವಜನಿಕರಿಗಾಗಲೀ ಯಾವುದೇ ಪ್ರಯೋಜನವಿಲ್ಲವೆಂದು ಭಾವಿಸಿ ಸಂಘದ ನೊಂದಣಿಯನ್ನು ರದ್ದುಗೊಳಿಸಲು ಕ್ರಮವಹಿಸಲಾಗುವುದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08152-222034 ಸಂಪರ್ಕಿಸಬಹುದಾಗಿದೆ ಎಂದು ಶ್ರೀನಿವಾಸಪುರ ತಾಲ್ಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...