ಕೋಲಾರ: ಅದ್ದೂರಿಯಾಗಿ ಮೂಡಿಬಂದ ಸಾಂಸ್ಕೃತಿಕ ಮಹೋತ್ಸವ

Source: shabbir | By Arshad Koppa | Published on 28th March 2017, 7:58 AM | State News |

ಕೋಲಾರ, ಮಾರ್ಚ್ 25 :    ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಮದ್ದೇರಿ ಶ್ರೀ.ಲಕ್ಷ್ಮೀ ನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವ ಮತ್ತು ಜಾನಪದ ಕಲಾ ಮೇಳ ಹಾಗೂ ಸಾಂಸ್ಕೃತಿಕ ಮಹೋತ್ಸವದ ಸಮಾರೋಪ ಸಮಾರಂಭವನ್ನು ತಾಲೂಕಿನ ಚನ್ನಸಂದ್ರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಆಯೋಜಿಸಲಾಗಿತ್ತು.
    25ರ ಶನಿವಾರ ರಾತ್ರಿ 7-30 ಗಂಟೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುಸ್ಕೃತ ಮದ್ದೇರಿ ಪಿ.ಮುನಿರೆಡ್ಡಿ ನೇತೃತ್ವದ ಶ್ರೀ.ಲಕ್ಷ್ಮೀ ನರಸಿಂಹಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ತಂಡದವರಿಂದ ಶ್ರಿ ಕೈವಾರ ತಾತಯ್ಯನವರ ಕಾಲಜ್ಞಾನ ಹಾಗೂ 10-00 ಗಂಟೆಗೆ ಭಕ್ತ ಕರಿರಾಜ ಚಂದ್ರ ಕನ್ನಡ ಪೌರಾಣ ಕ ನಾಟಕಗಳು ಅದ್ದೂರಿಯಾಗಿ ಮೂಡಿಬಂದಿತು.


    26ರ ಭಾನುವಾರ ಬೆಳಗ್ಗೆ ಜಾನಪದ ಕಲಾಮೇಳ, ಹಾಗೂ ಸಾಂಸ್ಕೃತಿಕ ಮಹೋತ್ಸವ ಹಾಗೂ ಕಲಾ ತಂಡಗಳು ಮೆರವಣ ಗೆಯು ನೆರವೇರಿಸಲಾಯಿತು.


    ಸಂಜೆ 6-00ಕ್ಕೆ ದುಶ್ಯಾಸನ ವಧೆ, ಕುರುಕ್ಷೇತ್ರ ಎಂಬ ಕನ್ನಡ ಪೌರಾಣ ಕ ನಾಟಕವನ್ನು ಹಮ್ಮಿಕೊಳ್ಳಲಾಗಿತ್ತು.
    ಮುಖಂಡರಾದ ಕೆ.ಶ್ರೀನಿವಾಸಗೌಡ, ಬಿ.ಪಿ.ವೆಂಕಟಮುನಿಯಪ್ಪ, ಭಾಗ್ಯಮ್ಮ ನಾರಾಯಣಸ್ವಾಮಿ, ಸಿ.ಆರ್.ರಮೇಶ್, ನಾಗನಾಳ ಸೋಮಣ್ಣ, ಎಸ್.ಎನ್,ಶ್ರೀರಾಮ್, ರಾಮಕೃಷ್ಣೇಗೌಡ, ಓಂಶಕ್ತಿ ಚಲಪತಿ, ಎಂ.ಕೆ.ವಾಸುದೇವ್, ರಾಜೇಶ್ವರಿ, ವೇಮಗಲ್ ಪಿ.ಎಸ್.ಐ. ಲಕ್ಷ್ಮೀನಾರಾಯಣ, ಸಿ.ರಾಮಪ್ಪ, ಸುಗಟೂರು ಚಲಪತಿ, ಕೆ.ಎನ್ ಮಂಜುನಾಥ್, ಬಿ.ವಿ.ವೆಂಕಟರೆಡ್ಡಿ, ಗ್ರಾಮದ ಮುಖಂಡರಾದ ಆಂಜಿನಪ್ಪ, ವಿ.ನಾರಾಯಣಸ್ವಾಮಿ(ಪಿಳ್ಳಪ್ಪ) ಹೆಚ್.ವೆಂಕಟೇಶ್, ಸಿ.ಎಂ.ದೇವರಾಜ್ ಹಾಗೂ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಎಲ್ಲಾ ಮುಖಂಡರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...